AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

Paytm 'Pocket Money' UPI Feature for children: ಬ್ಯಾಂಕ್ ಖಾತೆ ಇಲ್ಲದ ಹದಿಹರೆಯದವರಿಗಾಗಿ ಪೇಟಿಎಂ 'ಪಾಕೆಟ್ ಮನಿ' ಎಂಬ ಹೊಸ ಯುಪಿಐ ಫೀಚರ್ ಬಿಡುಗಡೆ ಮಾಡಿದೆ. ಎನ್‌ಪಿಸಿಐನ 'ಯುಪಿಐ ಸರ್ಕಲ್' ಆಧಾರದಲ್ಲಿ ಬಳ ಈ ಸೇವೆಯಲ್ಲಿ, ಪೋಷಕರು ತಮ್ಮ ಖಾತೆಯಿಂದ ಮಕ್ಕಳಿಗೆ ಗರಿಷ್ಠ 15,000 ರೂವರೆಗೆ ಮಾಸಿಕ ಮಿತಿ ನಿಗದಿಪಡಿಸಬಹುದು ಮತ್ತು ಮಕ್ಕಳ ಡಿಜಿಟಲ್ ವೆಚ್ಚಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ
ಪೇಟಿಎಂImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2026 | 1:06 PM

Share

ನವದೆಹಲಿ, ಮೇ 18: ಯುಪಿಐ ಬಳಸಬೇಕೆಂದರೆ ಬ್ಯಾಂಕ್ ಖಾತೆ ಹೊಂದಿರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳು ಆನ್ಲೈನ್ ಪೇಮೆಂಟ್ ಮಾಡಲು ಪೋಷಕರನ್ನು ಅವಲಂಬಿಸಬೇಕು. ಪೇಟಿಎಂ (Paytm) ಇದಕ್ಕೊಂದು ಪರಿಹಾರ ಹುಡುಕಿದೆ. ಪಾಕೆಟ್ ಮನಿ (Pocket Money) ಎನ್ನುವ ಹೊಸ ಫೀಚರ್ ಜಾರಿಗೆ ತಂದಿದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಅಪ್ರಾಪ್ತ ವಯಸ್ಕರು ಮತ್ತು ವಿದ್ಯಾರ್ಥಿಗಳು ಸಹ ತಮ್ಮ ಮೊಬೈಲ್ ಮೂಲಕವೇ ಸ್ವತಂತ್ರವಾಗಿ ಯುಪಿಐ (UPI) ಪಾವತಿ ಮಾಡಲು ಈ ಪೇಟಿಎಂ ಪಾಕೆಟ್ ಮನಿ ಅನುಕೂಲ ಮಾಡಿಕೊಡುತ್ತದೆ.

ಈ ಸುದ್ದಿಯ ಮುಖ್ಯಾಂಶಗಳು

  • ಪಾಕೆಟ್ ಮನಿ ಫೀಚರ್ ಮೂಲಕ ಹದಿಹರೆಯದವರು ತಮ್ಮದೇ ಆದ ಬ್ಯಾಂಕ್ ಖಾತೆ ಇಲ್ಲದಿದ್ದರೂ ಸ್ವತಂತ್ರವಾಗಿ ಯುಪಿಐ ಪಾವತಿ ಮಾಡಬಹುದು.
  • ಪೋಷಕರು ತಮ್ಮ ಪೇಟಿಎಂ ಆ್ಯಪ್ ಮೂಲಕ ಮಕ್ಕಳ ಖಾತೆಗೆ ಗರಿಷ್ಠ 15,000 ರೂವರೆಗೆ ಮಾಸಿಕ ಮಿತಿಯನ್ನು ನಿಗದಿಪಡಿಸಬಹುದು.
  • ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿರುವ ‘ಯುಪಿಐ ಸರ್ಕಲ್’ (UPI Circle) ಆಧಾರದ ಮೇಲೆ ಈ ಸೇವೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ

ಪಾಕೆಟ್ ಮನಿ ಹೇಗೆ ಕೆಲಸ ಮಾಡುತ್ತದೆ?

ಈ ವೈಶಿಷ್ಟ್ಯದ ಅಡಿಯಲ್ಲಿ ಪೋಷಕರು ತಮ್ಮ ಬ್ಯಾಂಕ್ ಖಾತೆಗೆ ಮಕ್ಕಳ ಪೇಟಿಎಂ ಆ್ಯಪ್ ಅನ್ನು ಲಿಂಕ್ ಮಾಡಬಹುದು. ಒಮ್ಮೆ ಲಿಂಕ್ ಮಾಡಿದ ನಂತರ, ಮಕ್ಕಳು ತಮ್ಮ ಶಾಲಾ-ಕಾಲೇಜು ಕ್ಯಾಂಟೀನ್, ಮೆಟ್ರೋ ಪ್ರಯಾಣ, ಕ್ಯಾಬ್ ಬುಕಿಂಗ್, ಮೊಬೈಲ್ ರೀಚಾರ್ಜ್ ಹಾಗೂ ಶಾಪಿಂಗ್‌ಗಾಗಿ ಸ್ವತಂತ್ರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಪ್ರತಿ ಬಾರಿ ಪಾವತಿ ಮಾಡುವಾಗಲೂ ಪೋಷಕರಿಂದ ಒಟಿಪಿ (OTP) ಪಡೆಯುವ ಅಥವಾ ಪೋಷಕರ ಮೊಬೈಲ್ ಬಳಸುವ ಅಗತ್ಯ ಇರುವುದಿಲ್ಲ.

ಪೋಷಕರ ನಿಯಂತ್ರಣ ಮತ್ತು ಸುರಕ್ಷತೆ

ಮಕ್ಕಳು ಹಣವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಪೇಟಿಎಂ ಹಲವು ಸುರಕ್ಷತಾ ಕ್ರಮಗಳನ್ನು ಒದಗಿಸಿದೆ. ಒಂದು ಬಾರಿ ಮಾಡುವ ಪಾವತಿಗೆ ಗರಿಷ್ಠ 5,000 ರೂ ಮಿತಿ ಇರಲಿದ್ದು, ಇಡೀ ತಿಂಗಳಿಗೆ ಒಟ್ಟು 15,000 ರೂ ಮಿತಿಯನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಮೊದಲ 30 ನಿಮಿಷಗಳಲ್ಲಿ ಕೇವಲ 500 ರೂ ಹಾಗೂ ಮೊದಲ 24 ಗಂಟೆಗಳಲ್ಲಿ 5,000 ರೂವರೆಗೆ ಮಾತ್ರ ಪಾವತಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ

ಮಕ್ಕಳು ಎಲ್ಲೆಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ತಮ್ಮ ಮೊಬೈಲ್‌ನಲ್ಲಿ ‘ರಿಯಲ್-ಟೈಮ್’ (ತಕ್ಷಣವೇ) ಆಗಿ ಟ್ರ್ಯಾಕ್ ಮಾಡಬಹುದು. ಪೇಟಿಎಂನ ‘ಸ್ಪೆಂಡ್ ಸಮ್ಮರಿ’ (Spend Summary) ಮೂಲಕ ವೆಚ್ಚಗಳನ್ನು ವಿವಿಧ ವಿಭಾಗಗಳಾಗಿ ವರ್ಗೀಕರಿಸಿ ನೋಡಲು ಸಾಧ್ಯವಿದ್ದು, ಪೋಷಕರು ಯಾವಾಗ ಬೇಕಾದರೂ ತಮ್ಮ ಯುಪಿಐ ಪಿನ್ (UPI PIN) ಬಳಸಿ ಮಕ್ಕಳ ಖಾತೆಯ ಮಿತಿಯನ್ನು ಬದಲಾಯಿಸಬಹುದು ಅಥವಾ ಸೇವೆಯನ್ನು ಸ್ಥಗಿತಗೊಳಿಸಬಹುದು. ಈ ಫೀಚರ್ ಬಳಸಿ ಅಂತರರಾಷ್ಟ್ರೀಯ ಪಾವತಿಯಾಗಲೀ ಮತ್ತು ಎಟಿಎಂನಿಂದ ಹಣ ವಿತ್​ಡ್ರಾ ಮಾಡಲಾಗಲೀ ಅವಕಾಶವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More