ಯತ್ನಾಳ್ ಹೇಳಿಕೆಗೆ ಬೆಂಬಲವಿದೆ ಎಂದ ಜನಾರ್ದನ ರೆಡ್ಡಿ: ಖಡಕ್ ರಿಯಾಕ್ಷನ್ ಕೊಟ್ಟ ಗಂಗಾವತಿ ಶಾಸಕ
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ "ಯೆಸ್ ಸರ್" ಬದಲು "ಜೈ ಶ್ರೀರಾಮ್" ಹೇಳಬೇಕೆಂಬ ಕರೆಯನ್ನು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಬೆಂಬಲಿಸಿದ್ದಾರೆ. ಹಾಜರಾತಿ ವೇಳೆ ಈ ಘೋಷಣೆ ಇರಬೇಕು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತವಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ. ಹಿಜಾಬ್ ವಿಷಯದಲ್ಲಿ ನ್ಯಾಯಾಲಯದ ಆದೇಶಗಳಿದ್ದರೂ ಸರ್ಕಾರ ಆದೇಶ ಹೊರಡಿಸಿರುವುದನ್ನು ಅವರು ಟೀಕಿಸಿದ್ದಾರೆ.
ಕೊಪ್ಪಳ, ಮೇ 19: ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರು ಶಾಲಾ ಹಾಜರಾತಿಯ ಸಂದರ್ಭದಲ್ಲಿ ಯೆಸ್ ಸರ್ ಬದಲು ಜೈ ಶ್ರೀರಾಮ್ ಎಂದು ಹೇಳಬೇಕೆಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ರೆಡ್ಡಿ, ಈ ವಿಷಯಕ್ಕೆ ನೂರಕ್ಕೆ ನೂರು ನನ್ನ ಬೆಂಬಲ ಇದೆ ಎಂದು ಘೋಷಿಸಿದ್ದಾರೆ. ಇದೇ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಷಯವಿದ್ದರೂ, ಸರ್ಕಾರವು ಆದೇಶ ಹೊರಡಿಸಿದೆ. ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 19, 2026 03:05 PM
Follow Us

