80 ವರ್ಷ ಮೇಲ್ಪಟ್ಟ ವಯಸ್ಸಿನ ಪಿಂಚಣಿದಾರರಿಗೆ ಹೆಚ್ಚುವರಿ ಭತ್ಯೆ ನೀಡಲಿರುವ ಕೇಂದ್ರ ಸರ್ಕಾರ

Compassionate allowance for old pensioners: ಕೇಂದ್ರದ ಸಿವಿಲ್ ಸರ್ವಿಸ್​ನಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಜನರಿಗೆ 80 ವರ್ಷ ವಯಸ್ಸು ದಾಟಿದ ಬಳಿಕ ಹೆಚ್ಚುವರಿ ಪಿಂಚಣಿ ಸಿಗುತ್ತದೆ. 80ರಿಂದ ಮೇಲ್ಪಟ್ಟು ವಿವಿಧ ವಯೋಮಾನಕ್ಕೆ ಹೆಚ್ಚುವರಿ ಪಿಂಚಣಿ ಅಧಿಕಗೊಳ್ಳುತ್ತಾ ಹೋಗುತ್ತದೆ. ಶತಾಯುಷಿಗಳಿಗೆ ನೂರಕ್ಕೆ ನೂರು ಹೆಚ್ಚುವರಿ ಪಿಂಚಣಿ ಸಿಗಲಿದೆ.

80 ವರ್ಷ ಮೇಲ್ಪಟ್ಟ ವಯಸ್ಸಿನ ಪಿಂಚಣಿದಾರರಿಗೆ ಹೆಚ್ಚುವರಿ ಭತ್ಯೆ ನೀಡಲಿರುವ ಕೇಂದ್ರ ಸರ್ಕಾರ
ಪಿಂಚಣಿದಾರರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2024 | 6:29 PM

ನವದೆಹಲಿ, ಅಕ್ಟೋಬರ್ 24: ವಯಸ್ಸಾದಂತೆ ಅನಾರೋಗ್ಯ ಮತ್ತಿತರ ಸಮಸ್ಯೆಗಳು ಹೆಚ್ಚಿರುತ್ತವೆ. ಅದಕ್ಕೆ ಅನುಗುಣವಾಗಿ ಖರ್ಚು ವೆಚ್ಚವೂ ಅಧಿಕ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 80 ವರ್ಷ ವಯಸ್ಸು ದಾಟಿದ ಪಿಂಚಣಿ ಮೊತ್ತ ಹೆಚ್ಚಿಸಿದೆ. ಕೇಂದ್ರದ ನಿವೃತ್ತ ಉದ್ಯೋಗಿಗಳಿಗೆ ನಿಯಮಿತ ಪಿಂಚಣಿ ಜೊತೆಗೆ ಹೆಚ್ಚುವರಿ ಭತ್ಯೆ ಕೂಡ ನೀಡಲಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯು) ಇತ್ತೀಚೆಗೆ ಈ ಹೆಚ್ಚುವರಿ ಪಿಂಚಣಿ ನೀಡುವ ನಿರ್ಧಾರ ಪ್ರಕಟಿಸಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇದು ಕೇಂದ್ರ ಸರ್ಕಾರದ ಸಿವಿಲ್ ಸರ್ವಿಸ್ ಹುದ್ದೆಗಳಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರಿಗೆ ನೀಡಲಾಗಿರುವ ಗೈಡ್​ಲೈನ್ಸ್ ಆಗಿದೆ.

ಸಿವಿಲ್ ಸರ್ವಿಸ್​ನಿಂದ ನಿವೃತ್ತರಾಗಿ 80 ವರ್ಷ ವಯಸ್ಸು ಮುಟ್ಟಿದವರಿಗೆ ಹೆಚ್ಚುವರಿ ಪಿಂಚಣಿ ಅಥವಾ ಕಾಂಪ್ಯಾಶನೇಟ್ ಅಲೋಯನ್ಸ್ ನೀಡಲಾಗುತ್ತದೆ. ವಯಸ್ಸು ಹೆಚ್ಚಿದಂತೆಲ್ಲಾ ಈ ಹೆಚ್ಚುವರಿ ಪಿಂಚಣಿ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಮೂಲ ಪಿಂಚಣಿಯ ಶೇ. 20ರಿಂದ ಶೇ. 100ರವರೆಗೂ ಈ ವಿಶೇಷ ಭತ್ಯೆಯು ಪಿಂಚಣಿದಾರರಿಗೆ ಸಿಗುತ್ತದೆ.

  • 80ರಿಂದ 85 ವರ್ಷ ವಯಸ್ಸಿನ ಪಿಂಚಣಿದಾರರಿಗೆ: ಮೂಲ ಪಿಂಚಣಿಯ ಶೇ. 20
  • 85ರಿಂದ 90 ವರ್ಷ: ಶೇ. 30ರಷ್ಟು ಹೆಚ್ಚುವರಿ ಪಿಂಚಣಿ
  • 90ರಿಂದ 95 ವರ್ಷ ವಯಸ್ಸು: ಶೇ. 40ರಷ್ಟು ಹೆಚ್ಚುವರಿ ಪಿಂಚಣಿ
  • 95ರಿಂದ 100 ವರ್ಷ ವಯಸ್ಸು: ಶೇ. 50ರಷ್ಟು ಹೆಚ್ಚುವರಿ ಪಿಂಚಣಿ
  • 100 ವರ್ಷ ಮೇಲ್ಪಟ್ಟ ವಯಸ್ಸು: ಶೇ. 100ರಷ್ಟು ಹೆಚ್ಚುವರಿ ಪಿಂಚಣಿ

ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟಪ್​ಗಳಿಗೆ ಫಂಡ್ ಮತ್ತು ಎರಡು ರೈಲ್ವೆ ಯೋಜನೆಗಳಿಗೆ ಸಂಪುಟ ಅನುಮೋದನೆ

ವಯೋವೃದ್ಧರ ಜೀವನ ವೆಚ್ಚ ಹೆಚ್ಚಾಗುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪಿಂಚಣಿ ಮೊತ್ತ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಈ ಹೊಸ ಮಾರ್ಗಸೂಚಿಗಳ ಬಗ್ಗೆ ಪಿಂಚಣಿ ಇಲಾಖೆಯು ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಪಿಂಚಣಿ ವಿತರಿಸುವ ಬ್ಯಾಂಕುಗಳಿಗೆ ಮಾಹಿತಿ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್