ನವದೆಹಲಿ, ಅಕ್ಟೋಬರ್ 15: ಭಾರತೀಯ ನಗರಗಳಲ್ಲಿ ವಾಸದ ಮನೆಗಳಿಗೆ ಬಹಳ ಬೇಡಿಕೆ ಇದೆ. ಅದರಲ್ಲೂ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈನಂತಹ ನಗರಗಳಲ್ಲಿ ಮನೆಗಳ ಬೆಲೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ವಸತಿ ಬೆಲೆಗಳು (housing prices) ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಆಗಿವೆ. ಈ ಕ್ಯಾಲೆಂಡರ್ ವರ್ಷ ಎರಡನೇ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ವಸತಿ ಬೆಲೆ ಏರಿಕೆಯ ಜಾಗತಿಕ ಸೂಚ್ಯಂಕದಲ್ಲಿ ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ 19 ಮತ್ತು 22 ನೇ ಸ್ಥಾನಕ್ಕೆ ಜಿಗಿದಿವೆ. ಮುಂಬೈಯಂತೂ 95ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಹೈಜಂಕಪ್ ಮಾಡಿದೆ. ಕಳೆದ ಬಾರಿಯ ಸೂಚ್ಯಂಕ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದ್ದ ಬೆಂಗಳೂರು 22ನೇ ಸ್ಥಾನಕ್ಕೆ ಏರಿದೆ.
ಇದು ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ಪ್ರಕಟಿಸಿದ ವರದಿಯಿಂದ ತಿಳಿದುಬಂದಿದೆ. ‘ಗ್ಲೋಬಲ್ ರೆಸಿಡೆನ್ಷಿಯಲ್ ಸಿಟೀಸ್ ಇಂಡೆಕ್ಸ್’ ಪಟ್ಟಿ ಪ್ರಕಾರ, ಬೆಂಗಳೂರಿನಲ್ಲಿ ಕಳೆದ ವರ್ಷದ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ಗೆ ಹೋಲಿಸಿದರೆ ಈ ವರ್ಷದಲ್ಲಿ ವಸತಿ ಬೆಲೆಗಳಲ್ಲಿ ಶೇ. 5.3ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಇಎಸ್ಐ ಸ್ಕೀಮ್ಗೆ 19.42 ಲಕ್ಷ ಹೊಸ ಸದಸ್ಯರ ಸೇರ್ಪಡೆ; 9 ಲಕ್ಷಕ್ಕೂ ಹೆಚ್ಚು ಉದ್ಯೋಗಸೃಷ್ಟಿ
ಇದನ್ನೂ ಓದಿ: ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ
ಈ ಮೇಲಿನದ್ದು ಹಿಂದಿನ ವರ್ಷದ ಎರಡನೇ ಕ್ವಾರ್ಟರ್ಗೆ ಹೋಲಿಸಿದರೆ ಕಂಡು ಬಂದಿರುವ ಬೆಲೆ ಏರಿಕೆಯ ಆಧಾರದಲ್ಲಿ ಮಾಡಲಾದ ಪಟ್ಟಿ. ಭಾರತದಲ್ಲಿ ವಸತಿ ಬೆಲೆಳು ಶೇ. 5.1ರಷ್ಟು ಏರಿವೆ. ಇದರೊಂದಿಗೆ ಪಟ್ಟಿಯಲ್ಲಿ ಭಾರತ 22ನೇ ಸ್ಥಾನ ಪಡೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ