Personal Loan: ವಯಕ್ತಿಕ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಅಗ್ಗದ ಬಡ್ಡಿ ದರ? ಇಲ್ಲಿದೆ ಪರ್ಸನಲ್ ಲೋನ್ ಫುಲ್ ಡೀಟೇಲ್ಸ್

| Updated By: ಆಯೇಷಾ ಬಾನು

Updated on: Sep 21, 2021 | 8:17 AM

ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ವಯಕ್ತಿಕ ಸಾಲಕ್ಕೆ ಕಡಿಮೆ ಬಡ್ಡಿ ದರ ಎಲ್ಲಿದೆ ಎಂಬುದರ ಮಾಹಿತಿ ಇಲ್ಲಿದೆ.

Personal Loan: ವಯಕ್ತಿಕ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಅಗ್ಗದ ಬಡ್ಡಿ ದರ? ಇಲ್ಲಿದೆ ಪರ್ಸನಲ್ ಲೋನ್ ಫುಲ್ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us on

ವಯಕ್ತಿಕ ಸಾಲ (Personal Loan) ಎನ್ನುವುದು ವೈದ್ಯಕೀಯ ಚಿಕಿತ್ಸೆ, ಮನೆ ನವೀಕರಣ, ಮದುವೆ ಅಥವಾ ವಸ್ತುಗಳ ಖರೀದಿಯಂತಹ ಯಾವುದೇ ವಯಕ್ತಿಕ ಉದ್ದೇಶಕ್ಕಾಗಿ ನೆರವಾಗಲು ರೂಪಿಸಲಾದ ಸಾಲವಾಗಿದೆ. ಇದು ಅನ್​ಸೆಕ್ಯೂರ್ಡ್​ ಸಾಲ. ಅಂದರೆ ಯಾವುದೇ ಅಡಮಾನ ಅಥವಾ ಆಧಾರವನ್ನು ಸಾಲ ನೀಡುವ ಸಂಸ್ಥೆಗೆ ಒದಗಿಸದೆ ಪಡೆಯುವಂಥದ್ದು. ಕೆಲವು ಬ್ಯಾಂಕ್​ ಅಥವಾ ಎನ್​ಬಿಎಫ್​ಗಳು ತಕ್ಷಣವೇ ಅನುಮೋದನೆ ನೀಡಿ, ವಯಕ್ತಿಕ ಸಾಲಗಳನ್ನು ನೀಡುತ್ತವೆ. ಈ ಸಾಲ ವಿತರಣೆ ಪ್ರಕ್ರಿಯೆಯು ಇತರ ಸಾಲಗಳಿಗಿಂತ ಶೀಘ್ರವಾಗಿರುತ್ತದೆ. ಹಣದ ಅಗತ್ಯ ತುರ್ತಾಗಿ ಇರುವವರಿಗೆ ಇದು ಆಕರ್ಷಕ ಆಯ್ಕೆಯಾಗಿದೆ.

ಅರ್ಹತೆ
ವಯಕ್ತಿಕ ಸಾಲಗಳನ್ನು ನೀಡುವ ಪ್ರತಿ ಸಂಸ್ಥೆಯು ತನ್ನದೇ ಆದ ಅರ್ಹತಾ ಮಾನದಂಡಗಳನ್ನು ಮತ್ತು ನೀತಿಗಳನ್ನು ಪಾಲಿಸುತ್ತವೆ. ಆದರೂ ವಯಕ್ತಿಕ ಸಾಲಗಳಿಗೆ ಮೂಲಭೂತ ಅರ್ಹತಾ ಮಾನದಂಡಗಳು ಒಂದೇ ರೀತಿ ಆಗಿರುತ್ತವೆ.

– ಸಾಲ ಪಡೆಯುವವರ ವಯಸ್ಸು 20 ರಿಂದ 60 ವರ್ಷದ ಮಧ್ಯೆ ಇರಬೇಕು.
-ಸಂಬಳ ಪಡೆಯುವವರು ಮತ್ತು ಸ್ವಯಂ ಉದ್ಯೋಗಿಗಳು ವಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.
– ಸಾಲಗಾರನು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು, ಅಂದರೆ 750ಕ್ಕಿಂತ ಹೆಚ್ಚಿರಬೇಕು.

ಸಾಲದ ಮೊತ್ತ
ಸಾಲದ ಮೊತ್ತವು ಸಾಲ ಪಡೆಯುವವರ ವಾರ್ಷಿಕ ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಬ್ಯಾಂಕ್​ಗಳು ಕನಿಷ್ಠ 50,000 ರೂಪಾಯಿಗಳನ್ನು ವಯಕ್ತಿಕ ಸಾಲವಾಗಿ ನೀಡುತ್ತವೆ. ಆದರೆ ಕೆಲವು NBFCಗಳು ಸಣ್ಣ ಮೊತ್ತವನ್ನು ಸಹ ನೀಡಬಹುದು. ಗರಿಷ್ಠ ಸಾಲ ಮತ್ತು ಬ್ಯಾಂಕಿನಿಂದ ವಿಧಿಸಲಾಗುವ ಬಡ್ಡಿ ದರಗಳನ್ನು ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತದೆ.

ಬಡ್ಡಿ ದರಗಳು
ವಯಕ್ತಿಕ ಸಾಲವು ಯಾವುದೇ ಅಡಮಾನ ರಹಿತ ಸಾಲವಾಗಿರುವುದರಿಂದ, ಇತರ ಸಾಲಗಳಿಗೆ ಹೋಲಿಸಿದರೆ ಬಡ್ಡಿದರ ಹೆಚ್ಚಿರುತ್ತದೆ. ವಯಕ್ತಿಕ ಸಾಲಗಳ ಮರುಪಾವತಿಯ ಅವಧಿ ಒಂದರಿಂದ ಐದು ವರ್ಷಗಳವರೆಗೆ ಇರಬಹುದು. ಬಡ್ಡಿದರಗಳು ಬ್ಯಾಂಕ್​ನಿಂದ ಬ್ಯಾಂಕ್​ಗೆ ಬದಲಾಗುತ್ತವೆ. ಕಡಿಮೆ ಬಡ್ಡಿ ದರ ಎಂದರೆ ಸಾಲಗಾರರಿಗೆ ಕಡಿಮೆ ಆರ್ಥಿಕ ಹೊರೆ ಎಂದರ್ಥ.

Paisabazar.com ಪ್ರಕಾರ, ಯುಕೋ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಗ್ಗದ ವಯಕ್ತಿಕ ಸಾಲವನ್ನು ವಾರ್ಷಿಕ ಶೇ 8.45 ಬಡ್ಡಿದರಗಳೊಂದಿಗೆ ಆರಂಭಿಸುತ್ತವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI), ಇನ್ನೊಂದು ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಅದು ಎರಡನೇ ಸ್ಥಾನದಲ್ಲಿದೆ. ವಯಕ್ತಿಕ ಸಾಲಗಳಿಗೆ ಕನಿಷ್ಠ ಶೇ 8.90 ಬಡ್ಡಿಯನ್ನು ತೆಗೆದುಕೊಳ್ಳುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಕ್ರಮವಾಗಿ ವಯಕ್ತಿಕ ಸಾಲಗಳ ಮೇಲೆ ಶೇ 8.95 ಮತ್ತು ಶೇ 9.05 ಬಡ್ಡಿದರಗಳನ್ನು ನೀಡುತ್ತವೆ. ಶೇ 9.35 ಬಡ್ಡಿದರದೊಂದಿಗೆ ಬ್ಯಾಂಕ್ ಆಫ್ ಇಂಡಿಯಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶದ ಅತಿದೊಡ್ಡ ಸಾಲದಾತ ಆಗಿದ್ದು, ತನ್ನ ಗ್ರಾಹಕರಿಗೆ ಶೇ 9.60 ಬಡ್ಡಿದರದಲ್ಲಿ ವಯಕ್ತಿಕ ಸಾಲಗಳನ್ನು ನೀಡುತ್ತದೆ.

ವಯಕ್ತಿಕ ಸಾಲದ ಅಗ್ಗದ ಬಡ್ಡಿದರಗಳನ್ನು ಎಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ:
– ಯುಕೋ ಬ್ಯಾಂಕ್: ಶೇ 8.45ರಿಂದ
– ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.45ರಿಂದ
– ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.90ರಿಂದ
– ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ 8.95ರಿಂದ
– ಇಂಡಿಯನ್ ಬ್ಯಾಂಕ್: ಶೇ 9.05ರಿಂದ
– ಬ್ಯಾಂಕ್ ಆಫ್ ಇಂಡಿಯಾ: ಶೇ 9.35ರಿಂದ
– ಐಡಿಬಿಐ ಬ್ಯಾಂಕ್: ಶೇ 9.50 ಮೇಲ್ಪಟ್ಟು
– ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ 9.55 ಮೇಲ್ಪಟ್ಟು
– ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 9.60ರಿಂದ

ಕ್ರೆಡಿಟ್ ಸ್ಕೋರ್
ಸಾಲಗಾರರ ಮರುಪಾವತಿ ಸಾಮರ್ಥ್ಯದ ಬಗ್ಗೆ ವಿಶ್ವಾಸ ಇಲ್ಲದಿದ್ದರೆ ಬ್ಯಾಂಕ್​ಗಳು ವಯಕ್ತಿಕ ಸಾಲಕ್ಕಾಗಿ ಗ್ಯಾರಂಟರ್​ರನ್ನು ಸುಚಿಸುವಂತೆ ಕೇಳಬಹುದು. ಒಂದು ವೇಳೆ ಪ್ರಾಥಮಿಕ ಸಾಲಗಾರರು EMIಗಳನ್ನು ಸರಿಯಾಗಿ ಕಟ್ಟದಿದ್ದಲ್ಲಿ ಯಾರು ಗ್ಯಾರಂಟರ್​ ಆಗಿರುತ್ತಾರೋ ಅವರ ಕ್ರೆಡಿಟ್ ಸ್ಕೋರ್ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Home Loan: ಭಾರತದ ಯಾವ ಬ್ಯಾಂಕ್​ನಲ್ಲಿ ಹೋಮ್​ ಲೋನ್​ಗೆ ಕಡಿಮೆ ಬಡ್ಡಿ ದರ? ಇಲ್ಲಿದೆ ಸಂಪೂರ್ಣ ಮಾಹಿತಿ

(Cheaper Rate Of Interest On Personal Loan In India’s Major Banks)