ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಮೂರನೇ ವಹಿವಾಟು, ನವೆಂಬರ್ 11ನೇ ತಾರೀಕಿನ ಗುರುವಾರದಂದು ಒತ್ತಡಕ್ಕೆ ಸಿಲುಕಿದವು. ದಿನದ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 433.33 ಪಾಯಿಂಟ್ಸ್ ಅಥವಾ ಶೇ 0.72ರಷ್ಟು ಇಳಿಕೆಯಾಗಿ 59,919.69ರಲ್ಲಿ ವಹಿವಾಟು ಮುಗಿಸಿತು. ಇನ್ನು ನಿಫ್ಟಿ 143.60 ಪಾಯಿಂಟ್ಸ್ ಅಥವಾ ಶೇ 0.80ರಷ್ಟು ಇಳಿಕೆ ಕಂಡು, 17,873.60 ಪಾಯಿಂಟ್ಸ್ನಲ್ಲಿ ವ್ಯವಹಾರ ಚುಕ್ತಾ ಮಾಡಿತು. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಇಂದು ಮಾರುಕಟ್ಟೆಯ ವ್ಯವಹಾರದ ಆರಂಭ ನಕಾರಾತ್ಮಕವಾಗಿ ಶುರುವಾಯಿತು. ಆದರೆ ಸೆನ್ಸೆಕ್ಸ್ 60 ಸಾವಿರ ಪಾಯಿಂಟ್ಸ್ಗಿಂತ ಕೆಳಗೆ ಮತ್ತು ನಿಫ್ಟಿ 17,900 ಪಾಯಿಂಟ್ಸ್ಗಿಂತ ಕೆಳಗೆ ವಹಿವಾಟು ಮುಕ್ತಾಯಗೊಳಿಸಿರುವುದು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಿದೆ. ಜಾಗತಿಕ ಮಟ್ಟದ ಹಣದುಬ್ಬರದ ಒತ್ತಡವು ಅಮೆರಿಕದ ಹಣದುಬ್ಬರದಿಂದ ಪ್ರಭಾವಕ್ಕೆ ಒಳಗಾಗಿದೆ. ಅಂದಹಾಗೆ ಮೂವತ್ತು ವರ್ಷಗಳ ಗರಿಷ್ಠ ಮಟ್ಟವಾದ ಶೇ 6.2ರಷ್ಟನ್ನು ತಲುಪಿದೆ.
ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 0.5ರಷ್ಟು ಕುಸಿದವು. ವಲಯವಾರು ಗಮನಿಸಿದಾಗ ನಿಫ್ಟಿ ಬ್ಯಾಂಕ್, ಫಾರ್ಮಾ, ವಾಹನ ಮತ್ತು ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತಗೊಂಡರೆ, ಲೋಹದ ಷೇರುಗಳಲ್ಲಿ ಖರೀದಿ ಕಂಡುಬಂತು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟೈಟನ್ ಕಂಪೆನಿ ಶೇ 1.75
ಹಿಂಡಾಲ್ಕೋ ಶೇ 0.93
ಜೆಎಸ್ಡಬ್ಲ್ಯು ಸ್ಟೀಲ್ ಶೇ 0.75
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 0.55
ರಿಲಯನ್ಸ್ ಶೇ 0.18
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಐಒಸಿ ಶೇ -4.41
ಟೆಕ್ ಮಹೀಂದ್ರಾ ಶೇ -2.85
ಎಸ್ಬಿಐ ಶೇ -2.82
ಒಎನ್ಜಿಸಿ ಶೇ -2.66
ಎಸ್ಬಿಐ ಲೈಫ್ ಇನ್ಷೂರೆನ್ಸ್ ಶೇ -2.58
ಇದನ್ನೂ ಓದಿ: T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ