ಗುಜರಾತ್‌ನಲ್ಲಿ 5G ಪರೀಕ್ಷೆಗಾಗಿ ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್‌ಗೆ ಪರವಾನಗಿ, ಸ್ಪೆಕ್ಟ್ರಮ್
ಗುಜರಾತ್‌ನಲ್ಲಿ 5G ಪರೀಕ್ಷೆಗೆ ವೊಡಾಫೋನ್ ಐಡಿಯಾ ಹಾಗೂ ರಿಲಯನ್ಸ್ ಜಿಯೋ ಇನ್ಫೋಕಾಮ್‌ಗೆ ಪರವಾನಗಿ ಮತ್ತು ತರಂಗಾಂತರವನ್ನು ನೀಡಿದೆ.

ದೂರಸಂಪರ್ಕ ಇಲಾಖೆಯು (DoT) ಮೇ 27, 2021ರಂದು ಗುಜರಾತ್‌ನಲ್ಲಿ 5G ಪರೀಕ್ಷೆಗೆ ಪರವಾನಗಿ ಮತ್ತು ತರಂಗಾಂತರ ನೀಡಿತ್ತು. ವೊಡಾಫೋನ್ ಐಡಿಯಾ ಲಿಮಿಟೆಡ್ಗೆ ಗಾಂಧೀನಗರದಲ್ಲಿ (ನಗರ ಪ್ರದೇಶಕ್ಕೆ), ಮನ್ಸಾ (ಅರೆ ನಗರ ಪ್ರದೇಶಕ್ಕೆ) ಮತ್ತು ಉನಾವ (ಗ್ರಾಮೀಣ) ನೋಕಿಯಾವನ್ನು ಸಲಕರಣೆ ಪೂರೈಕೆದಾರವಾಗಿ ಅನುಮತಿಸಲಾಗಿತ್ತು. ರಿಲಯನ್ಸ್ ಜಿಯೋ ಇನ್ಫೋಕಾಮ್ ಜಾಮ್ನಗರ್ (ಅರೆ ನಗರ/ಗ್ರಾಮೀಣ) ಸ್ಯಾಮ್ಸಂಗ್ ಅನ್ನು ಸಲಕರಣೆ ಪೂರೈಕೆದಾರವಾಗಿ ಒಪ್ಪಲಾಗಿತ್ತು. ನವೆಂಬರ್ 11, 2021ರಂದು, ನಿರ್ದೇಶಕರಾದ ಸುಮಿತ್ ಮಿಶ್ರಾ, ವಿಕಾಸ್ ದಧಿಚ್ ಮತ್ತು ಸಹಾಯಕ ವಿಭಾಗೀಯ ಇಂಜಿನಿಯರ್ ಸೂರ್ಯಶ್ ಗೌತಮ್ ಅವರನ್ನೊಳಗೊಂಡ 5Gಗಾಗಿ ಗುಜರಾತ್ LSAನ ಸ್ಟೀರಿಂಗ್ ಕಮಿಟಿ, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ನೋಕಿಯಾ ತಾಂತ್ರಿಕ ತಂಡದೊಂದಿಗೆ ಗಾಂಧೀನಗರದಲ್ಲಿನ ಪರೀಕ್ಷಾ ಸ್ಥಳಗಳಿಗೆ ಭೇಟಿ ನೀಡಿದರು.
ತಂಡವು ಗಾಂಧೀನಗರದ ಮಹಾತ್ಮ ಮಂದಿರ 5G ಸೈಟ್‌ನಲ್ಲಿ ಡೇಟಾ ವೇಗವನ್ನು ಪರಿಶೀಲಿಸಿದ್ದು, ಇದು ಸುಮಾರು 1.5 Gbps – 4Gಗಿಂತ ಸುಮಾರು 100 ಪಟ್ಟು ವೇಗವಾಗಿದೆ ಎಂದು ಕಂಡುಬಂದಿದೆ. ವೇಗ ಪರೀಕ್ಷೆಯನ್ನು ನಾನ್- ಸ್ಟ್ಯಾಂಡ್ಅಲೋನ್ 5G ಮೋಡ್‌ನಲ್ಲಿ ಮಾಡಲಾಗಿದೆ.
ಈ ಕೆಳಗಿನ ನಾಲ್ಕು ಬಳಕೆಯ ಪ್ರಕರಣಗಳನ್ನು ಗುಜರಾತ್ LSA, DoT ತಂಡವು ಸೈಟ್‌ನಲ್ಲಿ ಪರೀಕ್ಷಿಸಿದೆ:- – 360 ಡಿಗ್ರಿ ವರ್ಚುವಲ್ ರಿಯಾಲಿಟಿ ಕಂಟೆಂಟ್ ಪ್ಲೇಬ್ಯಾಕ್ – ಬಳಕೆದಾರರು 5Gಯಲ್ಲಿ ಕಂಟೆಂಟ್ ಒದಗಿಸುವ ಸರ್ವರ್‌ಗೆ ಸಂಪರ್ಕಿಸುತ್ತಾರೆ ಮತ್ತು ಆತ/ಆಕೆ ಭೌತಿಕವಾಗಿ ಇದ್ದಂತೆ ವರ್ಚುವಲ್ ರಿಯಾಲಿಟಿನಲ್ಲಿ ಸ್ಥಳದ ಅನುಭವವನ್ನು ಪಡೆಯುತ್ತಾರೆ.
-ವರ್ಚುವಲ್ ರಿಯಾಲಿಟಿ ಸಂಪರ್ಕಿತ ತರಗತಿ – 5G ನೆಟ್‌ವರ್ಕ್ ಮೂಲಕ 360 ಡಿಗ್ರಿ ಲೈವ್ ಸ್ಟ್ರೀಮಿಂಗ್ ಮೂಲಕ ದೂರದಿಂದಲೇ ವಿದ್ಯಾರ್ಥಿಗಳನ್ನು ತಲುಪಲು ಶಿಕ್ಷಕರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಯು ಖಾಸಗಿ ಪಾಠದ ಭಾವನೆಯನ್ನು ಪಡೆಯುತ್ತಾರೆ, ಅಲ್ಲಿ ಆತ/ಆಕೆ ಧ್ವನಿ ಚಾಟ್ ಅಥವಾ ಇತರ ಮಾರ್ಗದ ಮೂಲಕ ಶಿಕ್ಷಕರೊಂದಿಗೆ ಸಂವಹನ ನಡೆಸಬಹುದು.
– 5G ತಲ್ಲೀನಗೊಳಿಸುವ ಗೇಮಿಂಗ್ – ಗೇಮರ್ಗಳ ಚಲನವಲನಗಳನ್ನು ಆನ್‌ಲೈನ್‌ನಲ್ಲಿ ಸೆರೆ ಹಿಡಿಯಲಾಗುತ್ತದೆ ಮತ್ತು 5G ನೆಟ್‌ವರ್ಕ್ ಮೂಲಕ ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ ಕಳುಹಿಸಲಾಗುತ್ತದೆ, ಅದರಲ್ಲಿ ಅದನ್ನು ಮೊದಲೇ ರೆಕಾರ್ಡ್ ಮಾಡಿದ ಗೇಮಿಂಗ್ ವೀಡಿಯೊಗೆ ವಿಲೀನಗೊಳಿಸಲಾಗುತ್ತದೆ.
– ಕೃತಕ ಬುದ್ಧಿಮತ್ತೆಯ ನೆರವಿನ 360 ಡಿಗ್ರಿ ಕ್ಯಾಮೆರಾ – 360 ಡಿಗ್ರಿ ಕ್ಯಾಮೆರಾಗಳಿಂದ ನೈಜ ಸಮಯದ ವೀಡಿಯೊ ಸ್ಟ್ರೀಮ್ ಅನ್ನು 5G ನೆಟ್‌ವರ್ಕ್ ಮೂಲಕ ಅಪ್‌ಲೋಡ್ ಮಾಡಲಾಗಿದೆ; ಅಂತಿಮ ಬಳಕೆದಾರರು ನಿಜವಾದ 360 ಅನುಭವವನ್ನು ಪಡೆಯುತ್ತಾರೆ ಮತ್ತು ಹೆಚ್ಚುವರಿ ಕೃತಕ ಬುದ್ಧಿಮತ್ತೆಯೊಂದಿಗೆ, ಆತ/ಆಕೆ ಜನರು, ಬ್ಯಾಗ್‌ಗಳು, ಬಾಟಲಿಗಳು, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಸಹ ಪತ್ತೆ ಮಾಡಬಹುದು.
ಬಳಕೆಯ ಪ್ರಕರಣಗಳು ಸ್ಟ್ಯಾಂಡ್ಅಲೋನ್ 5G ಮೋಡ್ ಅನ್ನು ಬಳಸಿಕೊಂಡು ಪರೀಕ್ಷಿಸಲಾಗಿವೆ.
ಇದನ್ನೂ ಓದಿ: 5G Spectrum: 2022ರ ಏಪ್ರಿಲ್ ಅಥವಾ ಮೇ ವೇಳೆಗೆ 5G ತರಂಗಾಂತರ ಹರಾಜು ನಿರೀಕ್ಷೆ