Closing Bell: ಜಾಗತಿಕ ಒತ್ತಡದಿಂದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 433 ಪಾಯಿಂಟ್ಸ್, ನಿಫ್ಟಿ 144 ಪಾಯಿಂಟ್ಸ್ ಕುಸಿತ

ಜಾಗತಿಕ ಪ್ರಭಾವದ ಕಾರಣಕ್ಕೆ ಭಾರತದ ದೇಶೀ ಷೇರು ಮಾರುಕಟ್ಟೆ ಸತತ ಮೂರನೇ ಟ್ರೇಡಿಂಗ್ ಸೆಷನ್ ದಿನವಾದ ನವೆಂಬರ್ 11ನೇ ತಾರೀಕಿನ ಗುರುವಾರ ಕೂಡ ಇಳಿಕೆ ದಾಖಲಿಸಿವೆ.

Closing Bell: ಜಾಗತಿಕ ಒತ್ತಡದಿಂದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 433 ಪಾಯಿಂಟ್ಸ್, ನಿಫ್ಟಿ 144 ಪಾಯಿಂಟ್ಸ್ ಕುಸಿತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 11, 2021 | 5:17 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಮೂರನೇ ವಹಿವಾಟು, ನವೆಂಬರ್ 11ನೇ ತಾರೀಕಿನ ಗುರುವಾರದಂದು ಒತ್ತಡಕ್ಕೆ ಸಿಲುಕಿದವು. ದಿನದ ಅಂತ್ಯಕ್ಕೆ ಬಿಎಸ್​ಇ ಸೆನ್ಸೆಕ್ಸ್ 433.33 ಪಾಯಿಂಟ್ಸ್ ಅಥವಾ ಶೇ 0.72ರಷ್ಟು ಇಳಿಕೆಯಾಗಿ 59,919.69ರಲ್ಲಿ ವಹಿವಾಟು ಮುಗಿಸಿತು. ಇನ್ನು ನಿಫ್ಟಿ 143.60 ಪಾಯಿಂಟ್ಸ್ ಅಥವಾ ಶೇ 0.80ರಷ್ಟು ಇಳಿಕೆ ಕಂಡು, 17,873.60 ಪಾಯಿಂಟ್ಸ್​ನಲ್ಲಿ ವ್ಯವಹಾರ ಚುಕ್ತಾ ಮಾಡಿತು. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಇಂದು ಮಾರುಕಟ್ಟೆಯ ವ್ಯವಹಾರದ ಆರಂಭ ನಕಾರಾತ್ಮಕವಾಗಿ ಶುರುವಾಯಿತು. ಆದರೆ ಸೆನ್ಸೆಕ್ಸ್ 60 ಸಾವಿರ ಪಾಯಿಂಟ್ಸ್​ಗಿಂತ ಕೆಳಗೆ ಮತ್ತು ನಿಫ್ಟಿ 17,900 ಪಾಯಿಂಟ್ಸ್​ಗಿಂತ ಕೆಳಗೆ ವಹಿವಾಟು ಮುಕ್ತಾಯಗೊಳಿಸಿರುವುದು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಿದೆ. ಜಾಗತಿಕ ಮಟ್ಟದ ಹಣದುಬ್ಬರದ ಒತ್ತಡವು ಅಮೆರಿಕದ ಹಣದುಬ್ಬರದಿಂದ ಪ್ರಭಾವಕ್ಕೆ ಒಳಗಾಗಿದೆ. ಅಂದಹಾಗೆ ಮೂವತ್ತು ವರ್ಷಗಳ ಗರಿಷ್ಠ ಮಟ್ಟವಾದ ಶೇ 6.2ರಷ್ಟನ್ನು ತಲುಪಿದೆ.

ಬಿಎಸ್​ಇ ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 0.5ರಷ್ಟು ಕುಸಿದವು. ವಲಯವಾರು ಗಮನಿಸಿದಾಗ ನಿಫ್ಟಿ ಬ್ಯಾಂಕ್, ಫಾರ್ಮಾ, ವಾಹನ ಮತ್ತು ಪಿಎಸ್​ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತಗೊಂಡರೆ, ಲೋಹದ ಷೇರುಗಳಲ್ಲಿ ಖರೀದಿ ಕಂಡುಬಂತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟೈಟನ್ ಕಂಪೆನಿ ಶೇ 1.75 ಹಿಂಡಾಲ್ಕೋ ಶೇ 0.93 ಜೆಎಸ್​ಡಬ್ಲ್ಯು ಸ್ಟೀಲ್ ಶೇ 0.75 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 0.55 ರಿಲಯನ್ಸ್ ಶೇ 0.18

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಐಒಸಿ ಶೇ -4.41 ಟೆಕ್ ಮಹೀಂದ್ರಾ ಶೇ -2.85 ಎಸ್​ಬಿಐ ಶೇ -2.82 ಒಎನ್​ಜಿಸಿ ಶೇ -2.66 ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ -2.58

ಇದನ್ನೂ ಓದಿ: T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ