AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing bell: ಭಾರತದ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3.22 ಲಕ್ಷ ಕೋಟಿ ರೂ. ಒಂದೇ ದಿನದಲ್ಲಿ ಉಡೀಸ್

ಭಾರತದ ಷೇರು ಮಾರುಕಟ್ಟೆ ಮಾರ್ಚ್ 24ನೇ ತಾರೀಕಿನ ಬುಧವಾರ ಭಾರೀ ಪ್ರಮಾಣದಲ್ಲಿ ಇಳಿಕೆ ದಾಖಲಿಸಿದೆ. ಹೂಡಿಕೆದಾರರ ಸಂಪತ್ತು 3.22 ಲಕ್ಷ ಕೋಟಿ ರುಪಾಯಿ ನಷ್ಟ ಉಂಟಾಗಿದೆ.

Closing bell: ಭಾರತದ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3.22 ಲಕ್ಷ ಕೋಟಿ ರೂ. ಒಂದೇ ದಿನದಲ್ಲಿ ಉಡೀಸ್
ಕಳೆದ ಮಾರ್ಚ್​ನಿಂದ, ಅಂದರೆ 2020ರ ಮಾರ್ಚ್​ನಿಂದ ಬಹುತೇಕ ಷೇರುಗಳು ಮಲ್ಟಿಬ್ಯಾಗರ್​ಗಳಾಗಿವೆ. ಹಾಗಂದರೆ, ಹಾಕಿದ ಹೂಡಿಕೆ ಮೊತ್ತಕ್ಕೆ ಹಲವು ಪಟ್ಟುಗಳ ರಿಟರ್ನ್ಸ್ ನೀಡಿರುವಂಥ ಷೇರುಗಳು ಅಂತ ಅರ್ಥ. ಅಂಥವುಗಳ ಸಾಲಿಗೆ ಸೇರುವಂಥದ್ದರಲ್ಲಿ ಅವಂತಿ ಫೀಡ್ಸ್ ಕೂಡ ಒಂದು. ಈ ಕಂಪೆನಿ ಷೇರುಗಳು ಹೂಡಿಕೆದಾರರಿಗೆ ಸ್ಥಿರವಾದ ರಿಟರ್ನ್ಸ್ ನೀಡುತ್ತಲೇ ಬರುತ್ತಿದೆ. ಆದರೆ ಹೈದರಾಬಾದ್ ಮೂಲದ ಈ ಎಲೆಕ್ಟ್ರಿಕ್ ಸರ್ವೀಸ್ ಕಂಪೆನಿಯ ಷೇರು ದರವು ಕಳೆದ ಕೆಲವು ಟ್ರೇಡಿಂಗ್ ಸೆಷನ್​ನಲ್ಲಿ ಕುಸಿತ ಕಂಡಿದೆ. ಮಾರುಕಟ್ಟೆಯು ಏರಿಕೆ ಮೂಡ್​ನಲ್ಲಿ ಇದ್ದರೆ, ಅವಂತಿ ಫೀಡ್ಸ್ ಅದರ ವಿರುದ್ಧ ಸಾಗುತ್ತಿದೆ.
Srinivas Mata
|

Updated on: Mar 24, 2021 | 4:56 PM

Share

ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರು ಬುಧವಾರ (ಮಾರ್ಚ್ 24, 2021) ಒಂದೇ ದಿನದಲ್ಲಿ 3.22 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಬಿಎಸ್​ಇ ಲಿಸ್ಟೆಡ್ ಕಂಪೆನಿಗಳು ಎಲ್ಲದರ ಮಾರುಕಟ್ಟೆ ಬಂಡವಾಳ ಮೌಲ್ಯವು 202.53 ಲಕ್ಷ ಕೋಟಿ ರೂಪಾಯಿಯನ್ನು ತಲುಪಿತು. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ 871.13 ಪಾಯಿಂಟ್ ಕುಸಿದು, 49,180.31 ಪಾಯಿಂಟ್​ನೊಂದಿಗೆ ದಿನಾಂತ್ಯದ ವಹಿವಾಟನ್ನು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 265.40 ಪಾಯಿಂಟ್ ನೆಲ ಕಚ್ಚಿ, 14,549.40 ಪಾಯಿಂಟ್​ನೊಂದಿಗೆ ವ್ಯವಹಾರ ಪೂರ್ಣಗೊಳಿಸಿದೆ. 842 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 2115 ಕಂಪೆನಿ ಷೇರುಗಳ ಬೆಲೆ ನೆಲ ಕಚ್ಚಿತು. ಬ್ಯಾಂಕ್ ನಿಫ್ಟಿ 891.10 ಪಾಯಿಂಟ್ ನಷ್ಟ ಕಂಡಿತು.

ಜಾಗತಿಕ ನಕಾರಾತ್ಮಕ ಪ್ರಭಾವ, ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಎಲ್ಲ ವಲಯದ ಸೂಚ್ಯಂಕಗಳೂ ಇಳಿಕೆಯಲ್ಲೇ ದಿನದ ವ್ಯವಹಾರ ಮುಗಿಸಿವೆ. ಪಿಎಸ್​ಯು ಬ್ಯಾಂಕ್​ಗಳು, ಲೋಹ, ರಿಯಾಲ್ಟಿ ವಲಯದ ಷೇರುಗಳು ಇಳಿಕೆಯಲ್ಲಿ ಮುಂಚೂಣಿಯಲ್ಲಿದ್ದವು. ಫಾರ್ಮಾ ಸೂಚ್ಯಂಕವೊಂದು ಮಾತ್ರ ಅಲ್ಪ ಪ್ರಮಾಣದ ಏರಿಕೆ ಕಂಡಿತು.

ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯವು 13 ಪೈಸೆ ಇಳಿಕೆಯಾಗಿ, 72.56ರಲ್ಲಿ ದಿನಾಂತ್ಯ ಕಂಡಿತು. ಈ ಹಿಂದಿನ ಸೆಷನ್ ಕೊನೆಗೆ 72.43ರಲ್ಲಿ ಅಂತ್ಯ ಕಂಡಿತ್ತು. ದಿನದ ಆರಂಭದ ವಹಿವಾಟು ಶುರುವಾಗಿದ್ದು 72.53ಕ್ಕೆ ಈ ದಿನದ ವಹಿವಾಟಿನಲ್ಲಿ 72.50ರಿಂದ 72.69ರ ಮಧ್ಯದಲ್ಲಿ ವ್ಯವಹಾರ ನಡೆಸಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಸಿಪ್ಲಾ ಶೇ 2.17 ಏಷ್ಯನ್ ಪೇಂಟ್ಸ್ ಶೇ 1.38 ಪವರ್​ಗ್ರಿಡ್ ಕಾರ್ಪೊರೇಷನ್ ಶೇ 0.94

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಟಾಟಾ ಸ್ಟೀಲ್ ಶೇ 5.17 ಅದಾನಿ ಪೋರ್ಟ್ಸ್ ಶೇ 4.29 ಟಾಟಾ ಮೋಟಾರ್ಸ್ ಶೇ 4.21 ಹಿಂಡಾಲ್ಕೋ ಶೇ 4.21 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 3.94

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್