Closing bell: 15,435 ಪಾಯಿಂಟ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ ಎತ್ತರದಲ್ಲಿ ವಹಿವಾಟು ಮುಗಿಸಿದ ಷೇರುಪೇಟೆ ಸೂಚ್ಯಂಕ ನಿಫ್ಟಿ

| Updated By: Digi Tech Desk

Updated on: May 28, 2021 | 6:36 PM

Closing bell: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಎನ್​ಎಸ್​ಇ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟದ ಎತ್ತರಕ್ಕೆ ಏರಿ ಹೊಸ ದಾಖಲೆಯನ್ನು ಬರೆದಿದೆ.

Closing bell: 15,435 ಪಾಯಿಂಟ್​ನೊಂದಿಗೆ ಸಾರ್ವಕಾಲಿಕ ಗರಿಷ್ಠ ಎತ್ತರದಲ್ಲಿ ವಹಿವಾಟು ಮುಗಿಸಿದ ಷೇರುಪೇಟೆ ಸೂಚ್ಯಂಕ  ನಿಫ್ಟಿ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಎನ್​ಎಸ್​ಇ ನಿಫ್ಟಿ ಶುಕ್ರವಾರದಂದು (ಮೇ 28, 2021) ಹೊಸ ದಾಖಲೆ ಬರೆದಿದೆ. ನಿಫ್ಟಿ ಸೂಚ್ಯಂಕವು 97.80 ಪಾಯಿಂಟ್ ಮೇಲೇರಿ ದಿನದ ಕೊನೆಗೆ 15,435.70 ಪಾಯಿಂಟ್​ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ. ಇನ್ನು ಸೆನ್ಸೆಕ್ಸ್ 307.66 ಪಾಯಿಂಟ್ಸ್ ಮೇಲೇರಿ 51,422.88 ಪಾಯಿಂಟ್​ನೊಂದಿಗೆ ವ್ಯವಹಾರವನ್ನು ಮುಗಿಸಿದೆ. ಶುಕ್ರವಾರ ದಿನದ ವಹಿವಾಟನ್ನು ನಿಫ್ಟಿ 15,421.20 ಪಾಯಿಂಟ್​ನೊಂದಿಗೆ ಆರಂಭಿಸಿತು. ದಿನದ ಗರಿಷ್ಠ ಮಟ್ಟವಾದ 15,469.45 ಪಾಯಿಂಟ್​ ತಲುಪಿ, ಕೊನೆಗೆ 15,433.65 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಮುಗಿಸಿದೆ. ಜೂನ್ ತಿಂಗಳ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಸರಣಿ ಪ್ರಬಲವಾಗಿ ಆರಂಭವಾಗಿದೆ.

ಇಂದಿನ ವಹಿವಾಟಿನಲ್ಲಿ ಫಾರ್ಮಾಸ್ಯುಟಿಕಲ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಹೊರತುಪಡಿಸಿದಂತೆ ಉಳಿದ ವಲಯಗಳು ಏರಿಕೆಯಲ್ಲೇ ಮುಕ್ತಾಯ ಕಂಡವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡವು. ಇನ್ನು ಒಟ್ಟು 1394 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1674 ಕಂಪೆನಿಯ ಷೇರುಗಳು ಇಳಿಕೆಯನ್ನು ಕಂಡಿವೆ ಮತ್ತು 138 ಕಂಪೆನಿಯ ಷೇರಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 15 ಪೈಸೆಯಷ್ಟು ಗಳಿಕೆ ಕಂಡು, ದಿನದ ಕೊನೆಗೆ 72.43ರಲ್ಲಿ ಕೊನೆಯಾಗಿದೆ. ದೇಶೀಯ ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸೂಚ್ಯಂಕವು ದಿನದ ಕೊನೆಗೆ ದಾಖಲೆ ಎತ್ತರದಲ್ಲಿ ವಹಿವಾಟು ಚುಕ್ತಾಗೊಳಿಸಿರುವುದರ ಮಧ್ಯೆಯೂ ಇಂಥದ್ದೊಂದು ಗಳಿಕೆ ಆಗಿದೆ. ಗುರುವಾರದ ದಿನದ ಕೊನೆಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 72.58ಕ್ಕೆ ಮುಗಿದಿತ್ತು. ಶುಕ್ರವಾರ ಬೆಳಗ್ಗೆ 10 ಪೈಸೆ ಗಳಿಕೆ ರೂಪಾಯಿ, ಈ ದಿನ 72.32ರಿಂದ 72.49ರ ಮಧ್ಯೆ ವಹಿವಾಟು ನಡೆಸಿ, 72.43ಕ್ಕೆ ದಿನಾಂತ್ಯ ಕಂಡಿತು.

ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ರಿಲಯನ್ಸ್ ಶೇ 6.01
ಗ್ರಾಸಿಮ್ ಶೇ 3.41
ಅದಾನಿ ಪೋರ್ಟ್ಸ್ ಶೇ 3.29
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.08
ಕೋಲ್ ಇಂಡಿಯಾ ಶೇ 1.63

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಸನ್ ಫಾರ್ಮಾ ಶೇ -4.25
ಬಜಾಜ್ ಫಿನ್​ಸರ್ವ್ ಶೇ -1.48
ಶ್ರೀಸಿಮೆಂಟ್ಸ್ ಶೇ -1.46
ಐಸಿಐಸಿಐ ಬ್ಯಾಂಕ್ ಶೇ -1.41
ಡಾ ರೆಡ್ಡೀಸ್ ಲ್ಯಾಬ್ಸ್ ಶೇ -1.41

ಇದನ್ನೂ ಓದಿ: Stake sale by govt: ಆಕ್ಸಿಸ್ ಬ್ಯಾಂಕ್​ನಲ್ಲಿದ್ದ ಷೇರು ಮಾರಾಟ ಮಾಡಿ 3994 ಕೋಟಿ ರೂಪಾಯಿ ಸಂಗ್ರಹಿಸಿದ ಕೇಂದ್ರ ಸರ್ಕಾರ

(NSE Nifty ends with record high of 15435 points on May 28, 2021. Nfty top gainers and losers details here)

Published On - 4:59 pm, Fri, 28 May 21