ಕ್ಲೌಡ್ ಕಿಚನ್ ಐಡಿಯಾ; ಹೋಟೆಲ್ ಬೇಕಿಲ್ಲ, ಇದು ಟ್ರೆಂಡಿ ಬ್ಯುಸಿನೆಸ್
Cloud kitchen business idea, earn Rs 50,000 per month: ಹೋಟೆಲ್ ಆರಂಭಿಸುವುದು ರಿಸ್ಕ್ ಎನಿಸಿದರೆ ಕ್ಲೌಡ್ ಕಿಚನ್ ಒಳ್ಳೆಯ ಪರ್ಯಾಯವಾಗಿದೆ. ಜೊಮಾಟೊದಲ್ಲಿ ನೊಂದಾಯಿಸಿಕೊಂಡು ಕ್ಲೌಡ್ ಕಿಚನ್ ಸೆಟಪ್ ಮಾಡಬಹುದು. ಜೊಮಾಟೊಗೆ ನಿಮ್ಮ ಬ್ಯುಸಿನೆಸ್ನಲ್ಲಿ ನಿರ್ದಿಷ್ಟ ಕಮಿಷನ್ ಕೊಡಬೇಕಾಗುತ್ತದೆ. ಅದು ಬಿಟ್ಟರೆ ಬೇರೆ ವೆಚ್ಚ ನಗಣ್ಯ.

ಬಿಡುವಿಲ್ಲದ ಜೀವನಶೈಲಿಯ ಇವತ್ತಿನ ದಿನಗಳಲ್ಲಿ ಸಿದ್ಧ ಆಹಾರಕ್ಕೆ ವಿಪರೀತ ಬೇಡಿಕೆ ಇದೆ. ಹೋಟೆಲ್, ರೆಸ್ಟೋರೆಂಟ್ಗಳು ಸಖತ್ ಬ್ಯುಸಿನೆಸ್ ಮಾಡುತ್ತಿವೆ. ಆದರೆ, ಹೋಟೆಲ್ಗಳನ್ನು ನಡೆಸುವುದು ಬಹಳ ರಿಸ್ಕ್ ಇರುವ ಕಾರ್ಯ. ಬಾಡಿಗೆ, ಸಿಬ್ಬಂದಿ ಸಂಬಳ ಇತ್ಯಾದಿ ವೆಚ್ಚಗಳಿರುತ್ತವೆ. ಈ ನಡುವೆ ಕ್ಲೌಡ್ ಕಿಚನ್ಗಳು (Cloud Kitchen) ಜನಪ್ರಿಯವಾಗುತ್ತಿವೆ. ನೀವು ಅಡುಗೆ ಮಾಡಬಲ್ಲಿರಾದರೆ ಕ್ಲೌಡ್ ಕಿಚನ್ ಹೇಳಿ ಮಾಡಿಸಿದ ಬ್ಯುಸಿನೆಸ್ ಮಾಡಲ್ ಆಗಬಹುದು.
ಮನೆಯಿಂದ ದೂರ ಇರುವ ಬಹಳ ಜನರು ನಿರಂತರವಾಗಿ ಹೋಟೆಲ್ ಊಟ ತಿಂದು ಸಾಕಾಗಿರುತ್ತದೆ. ಅವರಿಗೆ ಮನೆಯೂಟ ಸೇವಿಸಲು ಆಸೆ ಇರುತ್ತದೆ. ಕ್ಲೌಡ್ ಕಿಚನ್ ಮೂಲಕ ಅಂಥ ಜನರಿಗೆ ಮನೆಯೂಟದ ಅವಕಾಶ ಕೊಡಬಹುದು. ಕ್ಲೌಡ್ ಕಿಚನ್ನಿಂದ ತಿಂಗಳಿಗೆ 50,000 ರೂವರೆಗೂ ಆದಾಯ ಗಳಿಸಬಹುದು.
ಫುಡ್ ಡೆಲಿವರಿ ಆ್ಯಪ್ಗಳಲ್ಲಿ ನೊಂದಾಯಿಸಿ…
ಕ್ಲೌಡ್ ಕಿಚನ್ಗೆ ಬ್ಯುಸಿನೆಸ್ ಬರಬೇಕೆಂದರೆ ಫುಡ್ ಆ್ಯಪ್ಗಳಲ್ಲಿ ನೊಂದಾಯಿಸಬೇಕು. ಜೊಮಾಟೊದಲ್ಲಿ ಪಾರ್ಟ್ನರ್ ಆಗಿ ರಿಜಿಸ್ಟರ್ ಮಾಡಿಸಿ. ಇದನ್ನು ಆನ್ಲೈನ್ನಲ್ಲೇ ಮಾಡಬಹುದು. ರೆಸ್ಟೋರೆಂಟ್ ಅನ್ನು ನೊಂದಾಯಿಸುವ ರೀತಿಯಲ್ಲೇ ಕ್ಲೌಡ್ ಕಿಚನ್ ಅನ್ನು ರಿಜಿಸ್ಟರ್ ಮಾಡಬೇಕಾಗುತ್ತದೆ. ಹೆಸರು, ಇಮೇಲ್, ಕಿಚನ್ ಹೆಸರು, ವಿಳಾಸ ಇವೆಲ್ಲವನ್ನೂ ಹಾಕಬೇಕು.
ಇದನ್ನೂ ಓದಿ: ಬುಲ್ಸ್ ಐ, ಯುಪಿಸಿ ಬಾರ್ಕೋಡ್ನಿಂದ ಕ್ಯುಆರ್ ಕೋಡ್ವರೆಗೆ, ಕುತೂಹಲಕಾರಿ ಕಥೆ
ನಿಮ್ಮ ಫುಡ್ ಬ್ಯುಸಿನೆಸ್ಗೆ ಎಫ್ಎಸ್ಎಸ್ಎಐ ಲೈಸೆನ್ಸ್ ಪಡೆಯಬೇಕು. ಇದಕ್ಕೆ ಆನ್ಲೈನ್ನಲ್ಲೇ ಅರ್ಜಿ ಹಾಕಬಹುದು. ಜೊತೆಗೆ ಜಿಎಸ್ಟಿ ನೊಂದಣಿ ಕೂಡ ಮಾಡಿಸಿ. ಅಂಗಡಿಯ ಲೈಸೆನ್ಸ್ ಕೂಡ ಪಡೆಯಬೇಕು.
ಪ್ಯಾನ್ ಕಾರ್ಡ್, ಕ್ಯಾನ್ಸಲ್ಡ್ ಚೆಕ್ ಅಥವಾ ಬ್ಯಾಂಕ್ ಪಾಸ್ಬುಕ್, ಆಧಾರ್ ದಾಖಲೆ ನೀಡಿ ಪ್ರಮಾಣೀಕರಿಸಬೇಕು.
ಊಟದ ಮೆನು ಆಕರ್ಷಕವಾಗಿರಲಿ…
ಜೊಮಾಟೋದ ನಿಮ್ಮ ಕ್ಲೌಡ್ ಕಿಚನ್ ಪೇಜ್ನಲ್ಲಿ ನೀವು ತಯಾರಿಸುವ ಆಹಾರದ ಹೆಸರು, ಫೋಟೋ ಆಕರ್ಷಕವಾಗಿರಲಿ. ಸರಿಯಾದ ಬೆಲೆಯನ್ನು ನಿಗದಿ ಮಾಡಿ. ವಿವಿಧ ಕಾಂಬೋಗಳು, ಡಿಸ್ಕೌಂಟ್ಗಳ ಮೂಲಕ ಗ್ರಾಹಕರ ಗಮನ ಸೆಳೆಯಿರಿ.
ಇದನ್ನೂ ಓದಿ: ಟೆಸ್ಲಾ ಸಿಇಒ ಆಗಿ ಇಲಾನ್ ಮಸ್ಕ್ಗೆ 89000000000000 ರೂ ಸಂಭಾವನೆ; ಬೇರೆ ಸಿಇಒಗಳಿಗಿಂತ ಸಾವಿರ ಪಟ್ಟು ಹೆಚ್ಚು ಹಣ
ಜೊಮಾಟೊಗೆ ಕಮಿಷನ್ ಎಷ್ಟು ಕೊಡಬೇಕು?
ತಮ್ಮ ರೆಸ್ಟೋರೆಂಟ್ ಪಾರ್ಟ್ನರ್ಗಳಿಗೆ ಜೊಮಾಟೊ ವಿವಿಧ ಪ್ಲಾನ್ಗಳನ್ನು ಆಫರ್ ಮಾಡುತ್ತದೆ. ಬೇಸಿಕ್ ಪ್ಲಾನ್ನಲ್ಲಿ ಅದರ ಕಮಿಷನ್ ಶೇ. 10-15ರಷ್ಟು ಇರುತ್ತದೆ. ಸ್ಟ್ಯಾಂಡರ್ಡ್ ಪ್ಲಾನ್ನಲ್ಲಿ ಜೊಮಾಟೊ ಶೇ. 18-25ರಷ್ಟು ಕಮಿಷನ್ ಪಡೆಯುತ್ತದೆ. ಪ್ರೀಮಿಯಮ್ ಪ್ಲಾನ್ನಲ್ಲಿ ಶೇ. 25-30ರಷ್ಟು ಕಮಿಷನ್ ಇರುತ್ತದೆ.
ಪ್ರೀಮಿಯಮ್ ಪ್ಲಾನ್ ಪಡೆದುಕೊಂಡವರ ಉತ್ಪನ್ನಗಳು ಜೊಮಾಟೋ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚು ಪ್ರದರ್ಶಿತವಾಗುತ್ತದೆ. ಆ್ಯಪ್ನ ಮೊದಲ ಪೇಜ್ನಲ್ಲೇ ಕಾಣಬಹುದು. ಗ್ರಾಹಕರು ಯಾವುದಾದರೂ ಆಹಾರಕ್ಕೆ ಸರ್ಚ್ ಮಾಡಿದಾಗ ಇದು ಮೊದಲು ಕಾಣಬಹುದು. ಹೀಗೆ ವಿಶೇಷ ಅನುಕೂಲಗಳು ಇರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Fri, 7 November 25




