CNG Price: ಸಿಎನ್‌ಜಿ ಬೆಲೆ ಕೆಜಿಗೆ 4 ರೂ. ಕಡಿತ; ಪಿಎನ್​ಜಿ ಬೆಲೆ ಪ್ರತಿ ಕೆ.ಜಿ.ಗೆ 6 ರೂ. ಇಳಿಕೆ

| Updated By: ಸುಷ್ಮಾ ಚಕ್ರೆ

Updated on: Aug 17, 2022 | 11:20 AM

ಎಂಜಿಎಲ್ ಆಗಸ್ಟ್ ಮೊದಲ ವಾರದಲ್ಲಿ ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇದೇ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು. ಇದು ಈ ವರ್ಷದ ಏಪ್ರಿಲ್‌ನಿಂದ 6ನೇ ಹೆಚ್ಚಳವಾಗಿದೆ.

CNG Price: ಸಿಎನ್‌ಜಿ ಬೆಲೆ ಕೆಜಿಗೆ 4 ರೂ. ಕಡಿತ; ಪಿಎನ್​ಜಿ ಬೆಲೆ ಪ್ರತಿ ಕೆ.ಜಿ.ಗೆ 6 ರೂ. ಇಳಿಕೆ
ಸಂಗ್ರಹ ಚಿತ್ರ
Follow us on

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಅಡಿಗೆ ಇಂಧನ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ಆಟೋಮೊಬೈಲ್ ಇಂಧನ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಗಳನ್ನು ಕಡಿತಗೊಳಿಸುವುದಾಗಿ ಮಹಾನಗರ ಗ್ಯಾಸ್ ಘೋಷಿಸಿದೆ. ಸರ್ಕಾರ ದೇಶೀಯವಾಗಿ ಉತ್ಪಾದಿಸಲಾದ ನೈಸರ್ಗಿಕ ಅನಿಲದ ಹಂಚಿಕೆಯಲ್ಲಿ ಹೆಚ್ಚಳ ಮಾಡಿದ ನಂತರ ಅನಿಲ ವಿತರಕರು ಸಿಎನ್​ಜಿ (CNG), ಪಿಎನ್​ಜಿ (PNG) ಬೆಲೆಗಳನ್ನು ಕಡಿತಗೊಳಿಸಿದ್ದರು. ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 4 ರೂ.ನಿಂದ ಪಿಎನ್‌ಜಿ ದರವನ್ನು ಪ್ರತಿ ಎಸ್‌ಸಿಎಂಗೆ 48.50 ರೂ.ಗೆ ಇಳಿಸಲಾಗಿದೆ. ಹಾಗೇ, ಸಿಎನ್‌ಜಿಯ ಬೆಲೆಯು ಕೆಜಿಗೆ 6 ರೂ.ನಿಂದ ಕೆಜಿಗೆ 80 ರೂ.ಗೆ ಇಳಿಕೆಯಾಗಿದೆ.

ಸಿಎನ್‌ಜಿಯ ಪರಿಷ್ಕೃತ ಬೆಲೆಯು ಮುಂಬೈನಲ್ಲಿ ಪ್ರಸ್ತುತ ಬೆಲೆ ಮಟ್ಟದಲ್ಲಿ ಪೆಟ್ರೋಲ್‌ಗೆ ಹೋಲಿಸಿದರೆ ಸುಮಾರು ಶೇ. 48ರಷ್ಟು ಉಳಿತಾಯವನ್ನು ನೀಡುತ್ತದೆ. MGLನ ಡೊಮೆಸ್ಟಿಕ್ PNG ಪ್ರಸ್ತುತ ದೇಶೀಯ LPGಯ ದರಕ್ಕೆ ಹೋಲಿಸಿದರೆ ಸುಮಾರು ಶೇ. 18ರಷ್ಟು ಉಳಿತಾಯವನ್ನು ನೀಡುತ್ತದೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಂಜಿಎಲ್ ಆಗಸ್ಟ್ ಮೊದಲ ವಾರದಲ್ಲಿ ಸಿಎನ್‌ಜಿ ಮತ್ತು ಪಿಎನ್‌ಜಿಗೆ ಇದೇ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು. ಇದು ಈ ವರ್ಷದ ಏಪ್ರಿಲ್‌ನಿಂದ 6ನೇ ಹೆಚ್ಚಳವಾಗಿದೆ. 2022ರ ಆಗಸ್ಟ್ 2ರಲ್ಲಿ MGL ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ CNG ಮತ್ತು PNG ನ ಚಿಲ್ಲರೆ ಬೆಲೆಯನ್ನು ಕ್ರಮವಾಗಿ ಕೆಜಿಗೆ 6 ರೂ. ಮತ್ತು 4 ರೂ. ಹೆಚ್ಚಿಸಿತ್ತು. ನಂತರ ನಗರದ ರಿಕ್ಷಾ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಪ್ರಯಾಣ ದರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದವು.

ಇದನ್ನೂ ಓದಿ: Piped Natural Gas ಇನ್ನು ಕೆಲವೇ ವರ್ಷಗಳಲ್ಲಿ ದೇಶದ ಶೇ.75ರಷ್ಟು ಕುಟುಂಬಗಳಿಗೆ ಪೈಪ್ ಮೂಲಕ ಗ್ಯಾಸ್ ಪೂರೈಕೆ: ನರೇಂದ್ರ ಮೋದಿ

ಈ ನಿರ್ಧಾರವನ್ನು ಸ್ವಾಗತಿಸಿರುವ ನಗರದ ಪ್ರಮುಖ ರಿಕ್ಷಾ ಯೂನಿಯನ್ ಒಂದರ ಮುಖಂಡ ಥಂಪಿ ಕುರಿಯನ್, “ಇದು ರಿಕ್ಷಾ ಚಾಲಕರಿಗೆ ಮತ್ತು ಮುಂಬೈ ನಿವಾಸಿಗಳಿಗೆ ಬಹಳ ಒಳ್ಳೆಯದಾಗಿದೆ. ಆದರೆ ನಮಗೆ ಇನ್ನೂ ಕನಿಷ್ಠ ದರದಲ್ಲಿ 3 ರೂ. ದರ ಏರಿಕೆಯ ಅಗತ್ಯವಿದೆ” ಎಂದು ಹೇಳಿದ್ದಾರೆ. ಸದ್ಯಕ್ಕೆ ಆಟೋ ರಿಕ್ಷಾದ ಕನಿಷ್ಠ ದರ 21 ರೂ. ಇದೆ.

2021ರ ಫೆಬ್ರವರಿಯಲ್ಲಿ 3 ರೂ. ಏರಿಕೆಯಾದ ನಂತರ ಟ್ಯಾಕ್ಸಿಗಳು ಮತ್ತು ಆಟೋಗಳ ಕನಿಷ್ಠ ದರವು ಬದಲಾಗದೆ ಉಳಿದಿದೆ. 18 ರೂ. ಇದ್ದ ಆಟೋದ ಕನಿಷ್ಠ ದರವು 21 ರೂ.ಗೆ ಏರಿತು. ಹಾಗೇ, ಟ್ಯಾಕ್ಸಿಗಳ ಮೂಲ ದರವನ್ನು 22 ರೂ.ನಿಂದ 25 ರೂ.ಗೆ ಹೆಚ್ಚಿಸಲಾಯಿತು.

ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಹಲವಾರು ಆಟೋ-ಟ್ಯಾಕ್ಸಿ ಮತ್ತು ಬಸ್ ಮಾಲೀಕರು ಸೇರಿದಂತೆ 8 ಲಕ್ಷಕ್ಕೂ ಹೆಚ್ಚು ಸಿಎನ್‌ಜಿ ಗ್ರಾಹಕರಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರು ಬಳಕೆದಾರರು ಹಸಿರು ಇಂಧನವನ್ನು ಆರಿಸಿಕೊಂಡಿದ್ದಾರೆ. ಇದು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಅಗ್ಗವಾಗಿದೆ ಮತ್ತು ಪರಿಸರ ಸ್ನೇಹಿಯಾಗಿದೆ ಎಂಬುದು ಇದಕ್ಕೆ ಮುಖ್ಯ ಕಾರಣ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ