Parag Agrawal: ಟ್ವಿಟ್ಟರ್ ಸಿಇಒ ಅಗರ್​ವಾಲ್​ರ ಈ ಫೋಟೋ ಭಾರೀ ವೈರಲ್; ನೀವೂ ಒಮ್ಮೆ ನೋಡಿಬಿಡಿ

| Updated By: Srinivas Mata

Updated on: Jul 04, 2022 | 11:51 AM

ಲಂಡನ್​ನಲ್ಲಿರುವ ಟ್ವಿಟ್ಟರ್​ನ ಮುಖ್ಯ ಕಚೇರಿಯಲ್ಲಿ ಕಂಪೆನಿಯ ಸಿಇಒ ಪರಾಗ್ ಅಗರ್​ವಾಲ್​ ಅವರು ತಮ್ಮದೇ ಸಿಬ್ಬಂದಿಗೆ ಕಾಫೀ ಹಂಚುತ್ತಿರುವ ಫೋಟೋ ವೈರಲ್ ಆಗಿದೆ.

Parag Agrawal: ಟ್ವಿಟ್ಟರ್ ಸಿಇಒ ಅಗರ್​ವಾಲ್​ರ ಈ ಫೋಟೋ ಭಾರೀ ವೈರಲ್; ನೀವೂ ಒಮ್ಮೆ ನೋಡಿಬಿಡಿ
ಪರಾಗ್ ಅಗರ್​ವಾಲ್ ಆರ್ಡರ್ ತೆಗೆದುಕೊಳ್ಳುತ್ತಿರುವುದು
Follow us on

ಇಂಥದ್ದನ್ನೆಲ್ಲ ಊಹೆ ಮಾಡುವುದು ಕೂಡ ಕಷ್ಟ ಬಿಡಿ, ಅಂಥದ್ದರಲ್ಲಿ ನಿಜವಾಗಿಯೂ ಆ ಘಟನೆ ನಡೆದಿದೆ ಹಾಗೂ ಅದರ ಫೋಟೋ ಹರಿದಾಡುತ್ತಿದೆ ಅಂದರೆ ಕೇಳಬೇಕಾ! ಟ್ವಿಟ್ಟರ್ ಸಿಇಒ ಪರಾಗ್ ಅಗರ್​ವಾಲ್ (Parag Agrawal) ಅವರು ತಮ್ಮ ಕಂಪೆನಿಯ ಸಿಬ್ಬಂದಿಗೆ ತಾವೇ ಕಾಫೀ ಹಂಚುತ್ತಿರುವುದು ಭಾರೀ ವೈರಲ್ ಆಗಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಕಳೆದ ವಾರ ಲಂಡನ್​ನಲ್ಲಿ ಸರಣಿ ಸಭೆಗಳಲ್ಲಿ ಪರಾಗ್ ಭಾಗವಹಿಸಿದ್ದಾರೆ. ಆ ವೇಳೆ ಟ್ವಿಟ್ಟರ್​ನ ಲಂಡನ್​ ಮುಖ್ಯಕಚೇರಿಯಲ್ಲಿ ಸಿಬ್ಬಂದಿಗೆ ತಾವೇ ಕಾಫೀಯನ್ನು ಸರ್ವ್ ಮಾಡಿದ್ದಾರರೆ. ಇನ್ನು ಟ್ವಿಟ್ಟರ್​ನ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಕುಕ್ಕೀಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ದಾರಾ ನಾಸರ್ ಕೂಡ ಇದ್ದರು. ಈ ರೀತಿ ಅಪರೂಪಕ್ಕೆ ಕಾಫಿಯನ್ನು ಸರ್ವ್ ಮಾಡುವಂಥ ಸಿಇಒರನ್ನು ಯಾರು ಪ್ರೀತಿಸಲ್ಲ?

ಪರಾಗ್ ಅಗರ್​ವಾಲ್​ರ ಯು.ಕೆ. ಪ್ರವಾಸದ ವೇಳೆ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಕೂಡ ಇತ್ತು. ಅಂದಹಾಗೆ ಪರಾಗ್ ಅವರ ಈ ಪ್ರವಾಸ ಏಕೆ ಮುಖ್ಯ ಎನಿಸುತ್ತದೆ ಅಂದರೆ, ಎಲಾನ್ ಮಸ್ಕ್ ಅವರ ಟ್ವಿಟ್ಟರ್ ಖರೀದಿ ನಿರ್ಧಾರ ಇನ್ನೂ ಹಲವು ಗೋಜಲುಗಳಿಂದ ಕೂಡಿದೆ. ಕಳೆದ ಮೇ ತಿಂಗಳಲ್ಲಿ ಅಗರ್​ವಾಲ್ ಅವರು ಈಚಿನ ನಾಯಕತ್ವ ಬದಲಾವಣೆ ವಿಚಾರವಾಗಿ ವಿವರಣೆ ನೀಡಿದ್ದರು. ಈಗಲೂ ಎಲಾನ್ ಮಸ್ಕ್ ಜತೆಗೆ ಖರೀದಿ ವ್ಯವಹಾರ ಸುಲಲಿತವಾಗಿ ನಡೆಯುತ್ತದೆ ಎಂದು ಟ್ವಿಟ್ಟರ್ ತಂಡವು ಭಾವಿಸಿದೆ.

ಈ ಹಿಂದೆ ಅಗರ್​ವಾಲ್ ಹೇಳಿದ್ದ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಕಂಪೆನಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಆ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಿಲ್ಲ. ಆದರೆ ಈಗ ಮಾತನಾಡುತ್ತೇನೆ ಎಂದಿದ್ದರು. ಆ ದೀರ್ಘವಾದ ವಿವರಣೆ ಬಂದಿದ್ದು ಟ್ವಿಟ್ಟರ್​ನ ಇಬ್ಬರು ಉನ್ನತ ಸ್ಥಾನದ ಅಧಿಕಾರಿಗಳನ್ನು ಉದ್ಯೋಗದಿಂದ ತೆಗೆದ ನಂತರ. ಇನ್ನು ಅದೇ ವೇಳೆ ಟ್ವಿಟ್ಟರ್ ಖರೀದಿ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆದಿರುವುದಾಗಿ ಎಲಾನ್ ಮಸ್ಕ್ ಹೇಳಿದ್ದರು.

“ಕಳೆದ ಕೆಲವು ವಾರಗಳಲ್ಲಿ ಬಹಳಷ್ಟು ನಡೆದಿದೆ. ನಾನು ಕಂಪೆನಿ ಬಗ್ಗೆ ಗಮನ ಹರಿಸುತ್ತಿದ್ದೇನೆ ಮತ್ತು ಈ ಸಮಯದಲ್ಲಿ ಬಹಳ ಹೇಳಿಲ್ಲ. ಆದರೆ ಈಗ ಹೇಳುತ್ತೇನೆ,” ಎಂದು ಅಗರ್​ವಾಲ್ ಟ್ವೀಟ್ ಮಾಡಿದ್ದರು. 44 ಬಿಲಿಯನ್ ಯುಎಸ್​ಡಿ ಟ್ವಿಟ್ಟರ್ ವ್ಯವಹಾರ ಎಲಾನ್​ ಮಸ್ಕ್​ರಿಂದ ಮುಕ್ತಾಯ ಆಗುವಾಗ ತಂಡವು ಎಂಥದ್ದೇ ಸನ್ನಿವೇಶಕ್ಕೆ ಸಿದ್ಧರಾಗಿರಬೇಕು ಎಂದು ಅಗರ್​ವಾಲ್ ಹೇಳಿದ್ದರು.

ಇದನ್ನೂ ಓದಿ: Elon Musk Twitter Deal: ಟ್ವಿಟ್ಟರ್​ ಜತೆ ಒಪ್ಪಂದ ಕೊನೆಗೊಳಿಸುವ ಬಗ್ಗೆ ಎಲಾನ್ ಮಸ್ಕ್ ಪತ್ರ ಹೇಳುವುದೇನು?