ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು (ಜೂನ್ 28, 2021) ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ 8 ವಿಚಾರಗಳ ಬಗ್ಗೆ ಮಾತನಾಡಿದರು. ವಿವಿಧ ವಲಯಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆ ಪೈಕಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿದ ಕ್ರಮಗಳು ಹೀಗಿವೆ:
– 2019ರಲ್ಲಿ ಭಾರತಕ್ಕೆ 1.93 ಕೋಟಿ ವಿದೇಶೀ ಪ್ರವಾಸಿಗರು ಭೇಟಿ ನೀಡಿದ್ದು, 30.098 ಬಿಲಿಯನ್ ಯುಎಸ್ಡಿ ಮೊತ್ತವನ್ನು ವಿಶ್ರಾಂತಿ ಮತ್ತು ಉದ್ಯಮದ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಒಬ್ಬ ವಿದೇಶೀ ವ್ಯಕ್ತಿ ಸರಾಸರಿ 21 ದಿನ ಭಾರತದಲ್ಲಿ ಉಳಿದಿದ್ದಾರೆ. ಭಾರತದಲ್ಲಿ ಸರಾಸರಿಯಾಗಿ 34 ಅಮೆರಿಕನ್ ಡಾಲರ್ ಅಥವಾ 2400 ರೂಪಾಯಿ ಖರ್ಚು ಮಾಡಿದ್ದಾರೆ. ಕೊರೊನಾ ಮುಗಿದ ನಂತರ ಮತ್ತೆ ವೀಸಾ ವಿತರಣೆ ಆರಂಭಿಸಿದ ಮೇಲೆ ಮೊದಲಿಗೆ ವಿತರಿಸುವ 5 ಲಕ್ಷ ಪ್ರವಾಸಿ ವೀಸಾವನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗೆ ಒಬ್ಬ ಪ್ರವಾಸಿಗೆ ಒಮ್ಮೆ ಮಾತ್ರ ಅನುಕೂಲ ನೀಡಲಾಗುತ್ತದೆ.
– 31ರ ಮಾರ್ಚ್ 2022 ಅಥವಾ 5 ಲಕ್ಷ ವೀಸಾ ಇವೆರಡರ ಪೈಕಿ ಯಾವುದು ಮೊದಲೋ ಅಲ್ಲಿಯ ತನಕ ಅನ್ವಯ ಆಗಲಿದೆ. ಇದರಿಂದ ಒಟ್ಟಾರೆ 100 ಕೋಟಿ ರೂಪಾಯಿ ಆರ್ಥಿಕ ಪರಿಣಾಮ ಉಂಟಾಗಲಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ
– ಹೊಸ ಸಾಲ ಖಾತ್ರಿ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಸಾಲ ತೀರಿಸಲು, ಮತ್ತೆ ಉದ್ಯಮ ಆರಂಭಿಸುವುದಕ್ಕೆ ವರ್ಕಿಂಗ್ ಕ್ಯಾಪಿಟಲ್/ಪರ್ಸನಲ್ ಲೋನ್ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಗುರುತಿಸಲಾದ 10,700 ಪ್ರಾದೇಶಿಕ ಮಟ್ಟದ ಮತ್ತು ರಾಜ್ಯ ಸರ್ಕಾರದಿಂದ ನೋಂದಣಿಯಾದ ಟೂರಿಸ್ಟ್ ಗೈಡ್ಗಳಿಗೆ ಅನುಕೂಲ ಆಗುತ್ತದೆ.
ಪ್ರವಾಸೋದ್ಯಮ ಸಚಿವಾಲಯದಿಂದ (904) ಗುರುತಿಸಲಾದ ಟ್ರಾವೆಲ್ ಅಂಡ್ ಟೂರಿಸಂ ಸ್ಟೇಕ್ಹೋಲ್ಡರ್ಸ್ (ಟಿಟಿಎಸ್)ಗೆ ಶೇ 100ರಷ್ಟು ಖಾತ್ರಿಯೊಂದಿಗೆ ಸಾಲ ಒದಗಿಸಲಾಗುತ್ತದೆ. ಟಿಟಿಎಸ್ಗೆ (ಒಂದು ಏಜೆನ್ಸಿ) ರೂ. 10 ಲಕ್ಷ, ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಗುರುತಿಸಲಾದ ಟೂರಿಸ್ಟ್ ಗೈಡ್ಗಳಿಗೆ 1 ಲಕ್ಷ ನೀಡಲಾಗುತ್ತದೆ. ಇದಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಅದೇ ರೀತಿ ಪೂರ್ವಪಾವತಿ ಅಥವಾ ಭಾಗಶಃ ಪಾವತಿ ಶುಲ್ಕ ಕೂಡ ಇಲ್ಲ. ಇದಕ್ಕೆ ಯಾವುದೇ ಕೊಲ್ಯಾಟರಲ್ ಬೇಕಿಲ್ಲ. ಈ ಯೋಜನೆಯ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಯು ಎನ್ಸಿಜಿಟಿಸಿ ಮೂಲಕ ನಿರ್ವಹಣೆ ಮಾಡುತ್ತದೆ.
(Union finance minister announced measures to boost corona hit travel and tourism sector. Here is the details)
Published On - 5:18 pm, Mon, 28 June 21