ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್ ದುಬಾರಿ, ಹಣದುಬ್ಬರ ಹೆಚ್ಚಳ ಇತ್ಯಾದಿ ಇದರ ಎಫೆಕ್ಟ್ ಹಲವು

ಕಚ್ಚಾ ತೈಲ ಬೆಲೆ ಕಳೆದ ಕೆಲ ತಿಂಗಳುಗಳ ನಂತರ ಮತ್ತೊಮ್ಮೆ ಒಂದು ಬ್ಯಾರಲ್​ಗೆ 100 ಡಾಲರ್ ಗಡಿ ದಾಟಿದೆ. ಮಧ್ಯಪ್ರಾಚ್ಯ ಪ್ರದೇಶ ಮತ್ತೆ ಹೊತ್ತಿ ಉರಿಯುತ್ತಿದ್ದು, ಇದರ ಬೆಲೆ ಮತ್ತಷ್ಟು ಏರಿದರೆ ಅಚ್ಚರಿ ಇಲ್ಲ. ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಮುಂದುವರಿಯುವ ಸೂಚನೆ ಇದೆ. ಕಚ್ಚಾ ತೈಲ ಬೆಲೆ ಮತ್ತಷ್ಟು ಏರಿದರೆ, ಪೆಟ್ರೋಲ್ ಡೀಸಲ್ ಬೆಲೆಗಳೂ ಏರುವ ಸಾಧ್ಯತೆ ಇದೆ.

ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ; ಪೆಟ್ರೋಲ್ ದುಬಾರಿ, ಹಣದುಬ್ಬರ ಹೆಚ್ಚಳ ಇತ್ಯಾದಿ ಇದರ ಎಫೆಕ್ಟ್ ಹಲವು
ಕಚ್ಚಾ ತೈಲ
Image Credit source: Getty Images

Updated on: Sep 09, 2026 | 4:29 PM

ಲಂಡನ್, ಸೆಪ್ಟೆಂಬರ್ 9: ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಪ್ರಾಂತ್ಯದಲ್ಲಿ ಭೌಗೋಳಿಕ-ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಭಾರಿ ಜಿಗಿತ ಕಂಡಿದೆ. ಯೆಮೆನ್‌ನ ಹೂತಿ (Houthi) ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ಇಂಧನ ಘಟಕಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿ, ಹಾಗೂ ಅಮೆರಿಕ-ಇರಾನ್ ನಡುವಿನ ಸರಣಿ ದಾಳಿಗಳ ಪರಿಣಾಮವಾಗಿ, ಬ್ರೆಂಟ್ ಕಚ್ಚಾ ತೈಲದ (Brent Crude) ಬೆಲೆ ಬ್ಯಾರಲ್‌ಗೆ $100 ರ ಗಡಿ ತಲುಪುವ ಮೂಲಕ ಹಲವು ವಾರಗಳ ಗರಿಷ್ಠ ಮಟ್ಟ ದಾಖಲಿಸಿದೆ.

ಅಮೆರಿಕದ ‘ಡಬ್ಲ್ಯೂಟಿಐ’ (WTI) ಕಚ್ಚಾ ತೈಲ ದರ ಕೂಡ ಶೇ. 3.2 ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ $94.41 ತಲುಪಿದೆ.

ಇದನ್ನೂ ಓದಿ: ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್​ಎಐ, ಆಂಥ್ರೋಪಿಕ್ ರಿಸರ್ಚರ್​ನಿಂದ ಭಯಾನಕ ಸತ್ಯ ಬೆಳಕಿಗೆ

ತೈಲ ದರ ದಿಢೀರ್ ಏರಿಕೆಗೆ ಪ್ರಮುಖ ಕಾರಣಗಳು

  • ಸೌದಿ ಇಂಧನ ಘಟಕಗಳ ಮೇಲೆ ದಾಳಿ: ಪ್ರಪಂಚದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾದ ಪ್ರಮುಖ ತೈಲ ಘಟಕಗಳ ಮೇಲೆ ಇರಾನ್ ಬೆಂಬಲಿತ ಹೂತಿ ಪಡೆಗಳು ನಡೆಸಿದ ದಾಳಿಯಲ್ಲಿ 73ಕ್ಕೂ ಹೆಚ್ಚು ನೌಕರರು ಗಾಯಗೊಂಡಿದ್ದು, ಕೆಲವು ಘಟಕಗಳಲ್ಲಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
  • ಇರಾನ್ ತೈಲ ಟ್ಯಾಂಕ್ಸ್ ಮೇಲೆ ದಾಳಿ: ಇರಾನ್​ನ ವಿವಿಧೆಡೆ ಮೂರು ಆಯಿಲ್ ಟ್ಯಾಂಕರ್​ಗಳ ಮೇಲೆ ಅಮೆರಿಕದ ಸೇನಾ ಪಡೆಗಳು ದಾಳಿ ಮಾಡಿವೆ. ಇರಾನ್​ನ ಪ್ರಮುಖ ರಫ್ತು ಪ್ರದೇಶವಾದ ಖರ್ಗ್ ದ್ವೀಪದ ಬಳಿ ಇದ್ದ ಒಂದು ಟ್ಯಾಂಕರ್ ಧ್ವಂಸಗೊಂಡಿದೆ.
  • ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ವಿಳಂಬ: ವಿಶ್ವದ ಶೇ. 20 ರಷ್ಟು ತೈಲ ಪ್ರಸರಣಕ್ಕೆ ಪ್ರಮುಖ ಮಾರ್ಗವಾಗಿರುವ ‘ಸ್ಟ್ರೇಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ಮಿಲಿಟರಿ ಘರ್ಷಣೆ ಹೆಚ್ಚಾಗಿದ್ದು, ತೈಲ ಟ್ಯಾಂಕರ್‌ಗಳ ಸಂಚಾರ ಕ್ಷೀಣಿಸಿದೆ.
  • ಅಮೆರಿಕ-ಇರಾನ್ ಸಂಘರ್ಷ ತೀವ್ರ: ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ಪಡೆಗಳು ನಡೆಸಿದ ದಾಳಿಗೆ ಪ್ರತಿಯಾಗಿ ‘ಆರ್ಥಿಕ ಯುದ್ಧ’ (Economic Warfare) ಸಾರುವುದಾಗಿ ಇರಾನ್ ಬೆದರಿಕೆ ಹಾಕಿದ್ದು, ಪೂರೈಕೆ ಕೊರತೆಯ ಭೀತಿ ಹೆಚ್ಚಿಸಿದೆ.

ಇದನ್ನೂ ಓದಿ: ಪಿಎನ್​ಬಿ ಕರೆನ್ಸಿ ಚೆಸ್ಟ್​ನಲ್ಲಿ 17 ಕೋಟಿ ರೂ ನಕಲಿ ನೋಟು… ಬ್ಯಾಂಕ್ ಮ್ಯಾನೇಜರ್ ಬಂಧನ; ಫೇಕ್ ನೋಟುಗಳು ಅಲ್ಲಿ ಬಂದದ್ದು ಹೇಗೆ?

ಜಾಗತಿಕ ಆರ್ಥಿಕತೆಯ ಮೇಲಾಗುವ ಪರಿಣಾಮ

  • ಹಣದುಬ್ಬರ ಹೆಚ್ಚಳದ ಆತಂಕ: ತೈಲ ಬೆಲೆ ಏರಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಏರಿಕೆಯಾಗುತ್ತದೆ. ವಿಶ್ವದಾದ್ಯಂತ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಹಣದುಬ್ಬರ (Inflation) ಮತ್ತೆ ತಲೆದೋರುವ ಭೀತಿ ಎದುರಾಗಿದೆ.
  • ಬ್ಯಾಂಕ್ ಬಡ್ಡಿದರ ಏರಿಕೆ ಸಾಧ್ಯತೆ: ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಪ್ರಮುಖ ಜಾಗತಿಕ ಕೇಂದ್ರ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸುವ ಸುಳಿವು ನೀಡಿವೆ.
  • ತೈಲ ಬೆಲೆ ಅಂದಾಜು ಏರಿಕೆ: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತಕ್ಷಣವೇ ತಿಳಿಯಾಗದ ಹಿನ್ನೆಲೆಯಲ್ಲಿ, ಗೋಲ್ಡ್‌ಮನ್ ಸ್ಯಾಚ್ಸ್ ಹಾಗೂ ಎಚ್‌ಎಸ್‌ಬಿಸಿ ಸಂಸ್ಥೆಗಳು 2026ರ ಇಡೀ ವರ್ಷಕ್ಕೆ ತೈಲ ದರ ಅಂದಾಜನ್ನು ಹೆಚ್ಚಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us