
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ರೌದ್ರಾವತಾರ ಕಡಿಮೆಗೊಳ್ಳುತ್ತಿಲ್ಲ. ಯುದ್ಧ ದಾಳಿಗೆ ತೈಲ ಸಂಗ್ರಹಗಾರಗಳೇ (Oil tanks) ಪ್ರಮುಖ ಟಾರ್ಗೆಟ್ ಆಗಿವೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಸಾಗಣೆಗೆ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು (Crude Oils) ಬ್ಯಾರಲ್ಗೆ 120 ಡಾಲರ್ವರೆಗೂ ಬೆಲೆ ಏರಿಕೆ ಕಂಡಿವೆ. ಮರ್ಬನ್ ಕ್ರೂಡ್ 120 ಡಾಲರ್ಗೆ ಏರಿದೆ. ಡಬ್ಲ್ಯುಟಿಐ ಕ್ರೂಡ್ 102 ಡಾಲರ್ ದಾಟಿದೆ. ಬ್ರೆಂಟ್ ಕ್ರೂಡ್ 107 ಡಾಲರ್ ಮುಟ್ಟಿದೆ. ಆದರೆ, ಡಬ್ಲ್ಯುಟಿಐ ಫ್ಯೂಚರ್ಸ್ನ ಬೆಲೆ 120 ಡಾಲರ್ಗೆ ಏರಿರುವುದು ಚಿಂತೆಯ ವಿಷಯವಾಗಿದೆ.
2-3 ವಾರಗಳ ಹಿಂದಷ್ಟೇ ತೈಲ ಬೆಲೆ ಬ್ಯಾರಲ್ಗೆ 66 ಡಾಲರ್ ಇತ್ತು. ಬಹಳ ವೇಗವಾಗಿ ಇದರ ಬೆಲೆ ಬಹುತೇಕ ಎರಡು ಪಟ್ಟು ಹೆಚ್ಚಿದೆ. 18 ವರ್ಷದ ಹಿಂದೆ ತೈಲ ಬೆಲೆ (ಡಬ್ಲ್ಯುಟಿಐ ಕ್ರೂಡ್) ಬ್ಯಾರಲ್ಗೆ 147 ಡಾಲರ್ ಇತ್ತು. ಅದು ಸಾರ್ವಕಾಲಿಕ ಗರಿಷ್ಠ ತೈಲ ಬೆಲೆ ಎನಿಸಿದೆ. ಆಗ ಜಾಗತಿಕ ರಾಜಕೀಯ ಅನಿಶ್ಚಿತ ಸ್ಥಿತಿ ಜೊತೆಗೆ ಚೀನಾದಿಂದ ಸಿಕ್ಕಾಪಟ್ಟೆ ತೈಲ ಖರೀದಿ ನಡೆದಿತ್ತು. ಹೀಗಾಗಿ, ಕಚ್ಚಾ ತೈಲ 2008ರಲ್ಲಿ ದುಬಾರಿಯಾಗಿತ್ತು. ಪ್ರಸಕ್ತ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ 2008ರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ, ಗ್ರಾಹಕರಿಗೆ ಬಿಗ್ ಶಾಕ್
ಐತಿಹಾಸಿಕವಾಗಿ ನೋಡಿದಾಗ ತೈಲ ಬಿಕ್ಕಟ್ಟು ಹಲವು ಬಾರಿ ಎದುರಾಗಿದೆ. ಆದರೆ, ದೀರ್ಘ ಕಾಲ ಈ ಬಿಕ್ಕಟ್ಟು ಮುಂದುವರಿದ್ದಿದ್ದಿಲ್ಲ. ಈ ಬಾರಿಯೂ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಬೇಗ ಮುಗಿಯುವ ನಿರೀಕ್ಷೆ ಇದೆ. ಅಕಸ್ಮಾತ್, ತೈಲ ಪೂರೈಕೆ ತಿಂಗಳುಗಟ್ಟಲೆ ಸ್ಥಗಿತಗೊಂಡರೆ ಆಗ ಪರಿಸ್ಥಿತಿ ಕಷ್ಟಕರವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ