Cryptocurrency Today: ಒಂದು ದಿನದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ವಾಲ್ಯೂಮ್ ಶೇ 869ರಷ್ಟು ಹೆಚ್ಚಳ; ಮೇ 13ರ ಪ್ರಮುಖ ಕ್ರಿಪ್ಟೋ ದರ ಇಲ್ಲಿದೆ

| Updated By: Srinivas Mata

Updated on: May 13, 2022 | 11:44 AM

ಕ್ರಿಪ್ಟೋಕರೆನ್ಸಿಗಳ ವಾಲ್ಯೂಮ್ ಕಳೆದ 24 ಗಂಟೆ ಶೇ 869ರಷ್ಟು ಏರಿಕೆ ಆಗಿದೆ. ಮೇ 13ನೇ ತಾರೀಕಿನ ಶುಕ್ರವಾರದಂದು ಪ್ರಮುಖ ಕ್ರಿಪ್ಟೋಕರೆನ್ಸಿಗಳ ದರ ಇಲ್ಲಿದೆ.

Cryptocurrency Today: ಒಂದು ದಿನದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ವಾಲ್ಯೂಮ್ ಶೇ 869ರಷ್ಟು ಹೆಚ್ಚಳ; ಮೇ 13ರ ಪ್ರಮುಖ ಕ್ರಿಪ್ಟೋ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಮೇ 13ನೇ ತಾರೀಕಿನ ಶುಕ್ರವಾರದಂದು ಕೆಲವು ಕ್ರಿಪ್ಟೋಕರೆನ್ಸಿಗಳು (Cryptocurrency) ಇಳಿಕೆಯಲ್ಲಿ ವಹಿವಾಟು ನಡೆಸಿದರೆ, ಕೆಲವು ಚೇತರಿಕೆಯ ಸೂಚನೆ ನೀಡಿವೆ. ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಮೌಲ್ಯ ಈಗ 1.27 ಲಕ್ಷ ಕೋಟಿ ಡಾಲರ್ ಆಗಿದೆ. ಅಂದರೆ ಈ ಹಿಂದಿನ ದಿನಕ್ಕೆ ಹೋಲಿಸಿದರೆ ಶೇ 2.36ರಷ್ಟು ಏರಿಕೆ ಕಂಡಿದೆ. ಒಟ್ಟಾರೆಯಾಗಿ ಕಳೆದ 24 ಗಂಟೆಯಲ್ಲಿ ಕ್ರಿಪ್ಟೋ ಮಾರುಕಟ್ಟೆಯ ವಾಲ್ಯೂಮ್ 2.12 ಲಕ್ಷ ಕೋಟಿ ಡಾಲರ್ ಆಗಿದ್ದು, ಈ ಮೂಲಕ ಶೇ 869.28ರಷ್ಟು ಹೆಚ್ಚಾಗಿದೆ. DeFiಯಲ್ಲಿ ಒಟ್ಟು ವಾಲ್ಯೂಮ್ ಸದ್ಯಕ್ಕೆ 1.94 ಲಕ್ಷ ಕೋಟಿ ಡಾಲರ್ ಆಗಿದ್ದು, ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯ 24 ಗಂಟೆಯ ವಾಲ್ಯೂಮ್​ನ ಶೇ 91.89ರಷ್ಟಿದೆ. ಎಲ್ಲ ಸ್ಟೇಬಲ್ ಕಾಯಿನ್​ಗಳ ವಾಲ್ಯೂಮ್ ಈಗ 2.10 ಲಕ್ಷ ಕೋಟಿ ಡಾಲರ್ ಇದ್ದು, ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯ 24 ಗಂಟೆ ವಾಲ್ಯೂಮ್​ನ ಶೇ 99.09ರಷ್ಟಾಗುತ್ತದೆ. ಸದ್ಯಕ್ಕೆ ಬಿಟ್​ಕಾಯಿನ್ ದರ 29,978.68 ಡಾಲರ್ ಇದ್ದು, ಶೇ 44.81ರಷ್ಟು ಪಾರಮ್ಯ ಇದೆ. ಹಿಂದಿನ ದಿನಕ್ಕೆ ಹೋಲಿಸಿದಲ್ಲಿ ಶೇ 0.74ರಷ್ಟು ಏರಿಕೆ ಆಗಿದೆ ಎಂಬುದನ್ನು ಕಾಯಿನ್​ಮಾರ್ಕೆಟ್​ಕ್ಯಾಪ್​ನ ಡೇಟಾ ತೋರಿಸುತ್ತಿದೆ.

ಇನ್ನು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೇಳಬೇಕೆಂದರೆ, ಜಾಗತಿಕ ಮಟ್ಟದ ಮಾರುಕಟ್ಟೆ ನಿಯಂತ್ರಕರು ಮುಂದಿನ ವರ್ಷದೊಳಗೆ ಜಂಟಿ ಸಂಸ್ಥೆಯೊಂದನ್ನು ಹುಟ್ಟುಹಾಕುವ ಆಲೋಚನೆಯಲ್ಲಿ ಇದ್ದಾರೆ. ಆ ಮೂಲಕ ಕ್ರಿಪ್ಟೋಕರೆನ್ಸಿ ನಿಯಮಾವಳಿಗಳನ್ನು ಇನ್ನೂ ಉತ್ತಮವಾಗಿ ತಲುಪಿಸುವ ಆಲೋಚನೆ ಇದೆ ಎಂದು ಹೇಳಲಾಗಿದೆ. ಇಂಟರ್​ನ್ಯಾಷನಲ್ ಆರ್ಗನೈಸೇಷನ್ ಆಫ್ ಸೆಕ್ಯೂರಿಟೀಸ್ ಕಮಿಷನ್ಸ್ ಆಶ್ಲೆ ಆಲ್ಡರ್ ಮಾತನಾಡಿ, ಬಿಟ್​ಕಾಯಿನ್​ನಂಥ ಡಿಜಿಟಲ್​ಕರೆನ್ಸಿಗಳಲ್ಲಿನ ಏರಿಕೆಯು ಪ್ರಾಧಿಕಾರದಿಂದ ಗಮನ ಹರಿಸುವ ಮೂರು ಮುಖ್ಯ ಕ್ಷೇತ್ರಗಳಲ್ಲಿ ಒಂದು. ಇದರ ಜತೆಗೆ ಕೊವಿಡ್​-19 ಮತ್ತು ಹವಾಮಾನ ಬದಲಾವಣೆ ಬಗ್ಗೆ ಕೂಡ ಗಮನ ನೀಡಲಾಗುತ್ತದೆ ಎಂದಿದ್ದಾರೆ.

ಸೈಬರ್ ಸುರಕ್ಷತೆ, ಕಾರ್ಯನಿರ್ವಹಣೆ ಪಾರಮ್ಯ, ಮತ್ತು ಪಾರದರ್ಶಕತೆ ಕೊರತೆ ಇವು ಕ್ರಿಪ್ಟೋ ಜಗತ್ತಿನ ಪ್ರಮುಖ ಅಪಾಯಗಳಾಗಿದ್ದು, ಇವುಗಳಲ್ಲಿ ನಿಯಂತ್ರಕರು ಹಿಂದುಳಿದಿದ್ದಾರೆ. ಮತ್ತೆ ಭಾರೀ ಏರಿಳಿತ ಕಾಣಿಸಿಕೊಳ್ಳುವ ಮೂಲಕ ಕ್ರಿಪ್ಟೋ ಮಾರುಕಟ್ಟೆ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿದೆ. WazirX ಡೇಟಾದ ಪ್ರಕಾರ ಅತಿ ದೊಡ್ಡ ಕ್ರಿಪ್ಟೋಕರೆನ್ಸಿಗಳ ದರ ವಿವರ ಮೇ 13ರ ಶುಕ್ರವಾರ ಬೆಳಗ್ಗೆ 8.30ರ ಹೊತ್ತಿಗೆ ಎಷ್ಟಿತ್ತು ಎಂಬ ಮಾಹಿತಿ ಇಲ್ಲಿದೆ.

ಬಿಟ್​ ಕಾಯಿನ್: 25,24,749 ರೂಪಾಯಿ – ಶೇ 5.87 ಏರಿಕೆ (ಕಳೆದ 24 ಗಂಟೆಗಳಲ್ಲಿ)

ಎಥೆರಿಯಂ: 1,72,081.15 ರೂಪಾಯಿ- ಶೇ 2.12 (ಕಳೆದ 24 ಗಂಟೆಗಳಲ್ಲಿ)

ಟೆಥರ್: 82.11 ರೂಪಾಯಿ- ಶೇ 0.89 (ಕಳೆದ 24 ಗಂಟೆಗಳಲ್ಲಿ)

ಕಾರ್ಡಾನೊ: 44.8000 ರೂಪಾಯಿ- ಶೇ13.41 (ಕಳೆದ 24 ಗಂಟೆಗಳಲ್ಲಿ)

ಬಿನಾನ್ಸ್ ಕಾಯಿನ್: 24,986.73 ರೂಪಾಯಿ- ಶೇ 15.56 (ಕಳೆದ 24 ಗಂಟೆಗಳಲ್ಲಿ)

XRP: 35.0000 ರೂಪಾಯಿ- ಶೇ 10.4 (ಕಳೆದ 24 ಗಂಟೆಗಳಲ್ಲಿ)

Polkadot: 792 ರೂಪಾಯಿ- ಶೇ 12.7 (ಕಳೆದ 24 ಗಂಟೆಗಳಲ್ಲಿ)

Dogecoin: 7.5995 ರೂಪಾಯಿ: ಶೇ 15.13 (ಕಳೆದ 24 ಗಂಟೆಗಳಲ್ಲಿ)

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Cryptocurrencies: ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾವ