AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DA Hike: ಶೇ. 4ರಷ್ಟು ಡಿಎ ಹೆಚ್ಚಳ ಮಾಡಿದರೆ ಸಂಬಳದಲ್ಲಿ ಎಷ್ಟು ಏರಿಕೆಯಾಗಬಹುದು? ಇಲ್ಲಿದೆ ಲೆಕ್ಕಾಚಾರ

7th Pay Commission Updates: ಈ ಬಾರಿ ತುಟ್ಟಿಭತ್ಯೆ ಶೇ. 3ರಷ್ಟು ಹೆಚ್ಚು ಮಾಡಲು ಶಿಫಾರಸು ಮಾಡಲಾಗಿದ್ದರೂ ಕೇಂದ್ರ ಸರ್ಕಾರ ಶೇ. 4ರಷ್ಟು ಡಿಎ ಏರಿಸುವ ಸಾಧ್ಯತೆ ಇದೆ. ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳದ ಬಗ್ಗೆ ಘೋಷಣೆ ಬರಬಹುದು. ಒಂದು ವೇಳೆ, ಡಿಎ ಶೇ. 4ರಷ್ಟು ಹೆಚ್ಚಾದರೆ ಸಂಬಳ ಎಷ್ಟು ಏರಿಕೆ ಆಗಬಹುದು ಎಂಬ ಒಂದು ಲೆಕ್ಕಾಚಾರ ಇಲ್ಲಿದೆ...

DA Hike: ಶೇ. 4ರಷ್ಟು ಡಿಎ ಹೆಚ್ಚಳ ಮಾಡಿದರೆ ಸಂಬಳದಲ್ಲಿ ಎಷ್ಟು ಏರಿಕೆಯಾಗಬಹುದು? ಇಲ್ಲಿದೆ ಲೆಕ್ಕಾಚಾರ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2023 | 11:01 AM

Share

ನವದೆಹಲಿ, ಅಕ್ಟೋಬರ್ 9: ಹಬ್ಬದ ಋತುವಿನ ಮಧ್ಯದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಡಿಎ (DA- dearness allowance) ಭಾಗ್ಯ ಸಿಗಲಿದೆ. ವರದಿಗಳ ಪ್ರಕಾರ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ನಡುವೆ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಏರಿಸಲಾಗುತ್ತದೆ. ಜನವರಿಯ ಏರಿಕೆಯನ್ನು ಮಾರ್ಚ್ 24ರಂದು ಪ್ರಕಟಿಸಲಾಗಿತ್ತು. ಇದೀಗ ಜುಲೈ ಪಾಳಿಯ ಏರಿಕೆಯನ್ನು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಘೋಷಿಸುವ ನಿರೀಕ್ಷೆ ಇದೆ. ಈ ಬಾರಿ ಶೇ. 3ರಷ್ಟು ಡಿಎ ಮತ್ತು ಡಿಆರ್ ಏರಿಸಲು ಶಿಫಾರಸು ಮಾಡಲಾಗಿದ್ದರೂ ಸರ್ಕಾರ ಶೇ. 4ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಜನವರಿಯ ಏರಿಕೆಯೂ ಕೂಡ ಶೇ. 4ರಷ್ಟು ಆಗಿತ್ತು. ಸದ್ಯ ಡಿಎ ಮತ್ತು ಡಿಆರ್ ಶೇ. 42ರಷ್ಟಿದೆ. ಈಗ ನಾಲ್ಕ ಪ್ರತಿಶತದಷ್ಟು ಹೆಚ್ಚಾದರೆ ಅದರ ಪ್ರಮಾಣ ಶೇ. 46ಕ್ಕೆ ಏರುತ್ತದೆ.

ಶೇ. 4ರಷ್ಟು ಡಿಎ ಹೆಚ್ಚಾದರೆ ಸಂಬಳ ಎಷ್ಟು ಜಾಸ್ತಿ ಆಗುತ್ತದೆ?

ಡಿಎ ಎಂಬುದು ಹಣದುಬ್ಬರದ ಪರಿಣಾಮವನ್ನು ಸಮಗೊಳಿಸಲು ಸಂಬಳದ ಜೊತೆಗೆ ನೀಡುವ ಹೆಚ್ಚುವರಿ ಭತ್ಯೆಯಾಗಿರುತ್ತದೆ. ವೇತನ ಆಯೋಗದ ಶಿಫಾರಸಿನ ಮೇರೆಗೆ ಡಿಎ ಮತ್ತು ಡಿಆರ್ ನೀಡಲಾಗುತ್ತದೆ. ಮೂಲ ವೇತನಕ್ಕೆ (ಬೇಸಿಕ್ ಸ್ಯಾಲರಿ) ಹೆಚ್ಚುವರಿಯಾಗಿ ಇದು ಇರುತ್ತದೆ.

ಇದನ್ನೂ ಓದಿ: ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್

ಒಬ್ಬ ಉದ್ಯೋಗಿಯ ಸಂಬಳ 60,000 ರೂ ಇದ್ದು, ಅದರಲ್ಲಿ ಮೂಲ ವೇತನದ ಪ್ರಮಾಣವು 25,000 ರೂ ಇದೆ ಎಂದಿಟ್ಟುಕೊಳ್ಳಿ. ಈ ಮೂಲ ವೇತನಕ್ಕೆ ಡಿಎ ಶೇ. 42 ಎಂದರೆ 10,500 ರೂ ಆಗುತ್ತದೆ. ಈಗ ಶೇ. 4ರಷ್ಟು ಡಿಎ ಹೆಚ್ಚಾದರೆ ಶೇ. 46 ಆಗುತ್ತದೆ. ಅಂದರೆ ಡಿಎ ಮೊತ್ತ 11,500 ರೂ ಆಗುತ್ತದೆ. 10,500 ರೂ ಇದ್ದದ್ದು 1,000 ರೂನಷ್ಟು ಡಿಎ ಹೆಚ್ಚಳವಾಗುತ್ತದೆ. 60,000 ರೂ ಇದ್ದ ಸಂಬಳ 61,000 ರೂಗೆ ಹೆಚ್ಚಾಗುತ್ತದೆ.

ಡಿಎ ಮತ್ತು ಡಿಆರ್ ಲೆಕ್ಕಾಚಾರ ಹೇಗೆ?

ಡಿಎ ಎಂಬುದನ್ನು ಹಾಲಿ ಸೇವೆಯಲ್ಲಿರುವ ಉದ್ಯೋಗಿಗಳಿಗೆ ನೀಡುವ ಭತ್ಯೆಯಾಗಿದೆ. ಡಿಆರ್ ಎಂಬುದು ಸೇವೆಯಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರಿಗೆ ಕೊಡಲಾಗುತ್ತದೆ. ಬೆಲೆ ಏರಿಕೆಯ ಬಿಸಿ ತಾಕದಿರಲೆಂದು ಸಂಬಳ ಅಥವಾ ಪಿಂಚಣಿಗೆ ಹೆಚ್ಚುವರಿಯಾಗಿ ಕೊಡುವ ಹಣ ಇದು.

ಇದನ್ನೂ ಓದಿ: ಸಹಕಾರಿ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲದ ಮಿತಿ 4 ಲಕ್ಷಕ್ಕೆ ಹೆಚ್ಚಳ; ಆರ್​ಬಿಐ ಮಹತ್ವದ ನಿರ್ಧಾರ

ಹಣದುಬ್ಬರದ ಆಧಾರದ ಮೇಲೆ ಡಿಎ ಅನ್ನು ಲೆಕ್ಕ ಮಾಡಲಾಗುತ್ತದೆ. ಅದಕ್ಕೆಂದು ಸಮಿತಿ ಇದ್ದು, ಅದು ಪ್ರತೀ ಬಾರಿಯೂ ಡಿಎ ಹೆಚ್ಚಳಕ್ಕೆ ಶಿಫಾರಸು ಮಾಡುತ್ತದೆ. ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಕ್ಕ ಬಳಿಕ ಡಿಎ ಘೋಷಣೆ ಮಾಡಲಾಗುತ್ತದೆ. ಈಗ ನವೆಂಬರ್​ನಲ್ಲಿ ಡಿಎ ಘೋಷಿಸಿದರೂ ಅದನ್ನು ಜುಲೈನಿಂದಲೇ ಅನ್ವಯ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್