Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ಪರಿಣಾಮದಿಂದ ಜಾಗತಿಕ ಇನ್​ಫ್ರಾಸ್ಟ್ರಕ್ಚರ್​ಗೆ ಆಗುವ ಹಾನಿ ವರ್ಷಕ್ಕೆ ಬರೋಬ್ಬರಿ 27 ಲಕ್ಷಕೋಟಿ ರೂ

Loss due to climate induced disasters: ಸಿಡಿಆರ್​ಐನ ವರದಿ ಪ್ರಕಾರ, ಅತಿರೇಕದ ಹವಾಮಾನ ಪರಿಸ್ಥಿತಿಯಿಂದ ಅವಘಡಗಳು, ಆಸ್ತಿನಷ್ಟ, ಸೇವಾ ತಡೆ ಇತ್ಯಾದಿ ಅಪಾಯಗಳು ಹೆಚ್ಚುತ್ತವೆ. ಈಗಿರುವ ಸೌಕರ್ಯ ವ್ಯವಸ್ಥೆ ದುರ್ಬಲಗೊಳ್ಳಬಹುದು. ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಪ್ರಯತ್ನಗಳು ನಡೆಯುತ್ತಿದ್ದು, ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯ ರಚನೆ ಮತ್ತು ಬಳಕೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತಿದೆ. ಇಂಧನ ಮತ್ತು ಸಾರಿಗೆ ಇತ್ಯಾದಿ ವಲಯಗಳಲ್ಲಿ ಕಾರ್ಬನ್ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಾಗುತ್ತಿದೆ. ಆದಾಗ್ಯೂ ಕೂಡ ಹವಾಮಾನ ಬದಲಾವಣೆಯಿಂದ ಜಾಗತಿಕವಾಗಿ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಆಗಿರುವ ವಾರ್ಷಿಕ ಸರಾಸರಿ ನಷ್ಟ 301 ರಿಂದ 330 ಬಿಲಿಯನ್ ಡಾಲರ್ ಇದೆ ಎಂದು ವರದಿ ಅಂದಾಜು ಮಾಡಿದೆ.

ಹವಾಮಾನ ಪರಿಣಾಮದಿಂದ ಜಾಗತಿಕ ಇನ್​ಫ್ರಾಸ್ಟ್ರಕ್ಚರ್​ಗೆ ಆಗುವ ಹಾನಿ ವರ್ಷಕ್ಕೆ ಬರೋಬ್ಬರಿ 27 ಲಕ್ಷಕೋಟಿ ರೂ
ನೈಸರ್ಗಿಕ ವಿಕೋಪಗಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2023 | 4:39 PM

ನವದೆಹಲಿ, ಅಕ್ಟೋಬರ್ 9: ಅವಘಡಗಳು (disasters) ಮತ್ತು ಹವಾಮಾನ ಬದಲಾವಣೆ (climate change) ಇತ್ಯಾದಿ ಕಾರಣದಿಂದ ವಿವಿಧ ಕ್ಷೇತ್ರಗಳ ಅಗತ್ಯ ಸೌಕರ್ಯಗಳಿಗೆ ಧಕ್ಕೆಯಾದ ಪರಿಣಾಮ ಜಾಗತಿಕವಾಗಿ ವರ್ಷಕ್ಕೆ 300ರಿಂದ 330 ಬಿಲಿಯನ್ ಡಾಲರ್​ನಷ್ಟು ನಷ್ಟ ಆಗುತ್ತಿದೆಯಂತೆ. ಅಂದರೆ, ಸುಮಾರು 25ರಿಂದ 27 ಲಕ್ಷ ಕೋಟಿ ರೂ ಮೊತ್ತದಷ್ಟು ಹಾನಿಯನ್ನು ಈ ಜಗತ್ತು ಪ್ರತೀ ವರ್ಷ ಅನುಭವಿಸುವಂತಾಗಿದೆ. ಈ ಅಂಕಿ ಅಂಶವನ್ನು ಸಿಡಿಆರ್​ಐ ಸಂಸ್ಥೆ ತನ್ನ ದ್ವೈವಾರ್ಷಿಕ ವರದಿಯೊಂದರಲ್ಲಿ ತಿಳಿಸಿದೆ. ಇನ್ನು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಇನ್​ಫ್ರಾಸ್ಟ್ರಕ್ಚರ್ ಮೇಲೆ ಆಗುವ ಪ್ರತಿಕೂಲ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಂಡರೆ ಜಾಗತಿಕವಾಗಿ ವರ್ಷಕ್ಕೆ ಆಗುವ ಹಾನಿ ಬರೋಬ್ಬರಿ 70 ಲಕ್ಷ ಕೋಟಿ ರೂ ಎಂದಿದೆ. ಇದು ಜಾಗತಿಕ ಸರಾಸರು ವಾರ್ಷಿಕ ನಷ್ಟ (AAL- Average Annual Loss) ಆಗಿದೆ. 2021-22ರ ಹಣಕಾಸು ವರ್ಷದಲ್ಲಿ ಆದ ಜಾಗತಿಕ ಜಿಡಿಪಿ ವೃದ್ದಿಯ ಏಳನೇ ಒಂದು ಭಾಗದ ಮೊತ್ತವಾಗಿದೆ. ಕುತೂಹಲ ಎಂದರೆ ಈ ಹಾನಿಯಿಂದ ಹೆಚ್ಚು ತೊಂದರೆಗೊಳಗಾಗುವುದು, ಅಥವಾ ಹೆಚ್ಚು ಹಾನಿ ಅನುಭವಿಸುವುದು ಮಧ್ಯಮ ಮತ್ತು ಕೆಳ ಸ್ತರದ ಆದಾಯ ಗುಂಪಿನ ದೇಶಗಳಾಗಿವೆ.

ಯಾವುದಿದು ಸಿಡಿಆರ್​ಐ?

ಅವಘಡ ಸಮರ್ಪಕವಾಗಿ ಎದುರಿಸವಂತಹ ಸೌಕರ್ಯ ನಿರ್ಮಿಸಲು ಜಾಗತಿಕ ಕೂಟವಾಗಿದೆ ಸಿಡಿಆರ್​ಐ (coalition for disaster resilient infrastructure). ಅದರಲ್ಲೂ ಮುಖ್ಯವಾಗಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅವಘಡಗಳಿಗೆ ಪ್ರತಿಯಾಗಿ ಈ ವಿಕೋಪ ಪ್ರತಿರೋಧ ಸೌಕರ್ಯ ವ್ಯವಸ್ಥೆಯನ್ನು ರೂಪಿಸಲಾಗಿದೆ. 2019ರಲ್ಲಿ ನರೇಂದ್ರ ಮೋದಿ ಅವರು ಸಿಡಿಆರ್​ಐಗೆ ಚಾಲನೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ

ಸಿಡಿಆರ್​ಐನ ವರದಿ ಪ್ರಕಾರ, ಅತಿರೇಕದ ಹವಾಮಾನ ಪರಿಸ್ಥಿತಿಯಿಂದ ಅವಘಡಗಳು, ಆಸ್ತಿನಷ್ಟ, ಸೇವಾ ತಡೆ ಇತ್ಯಾದಿ ಅಪಾಯಗಳು ಹೆಚ್ಚುತ್ತವೆ. ಈಗಿರುವ ಸೌಕರ್ಯ ವ್ಯವಸ್ಥೆ ದುರ್ಬಲಗೊಳ್ಳಬಹುದು. ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಪ್ರಯತ್ನಗಳು ನಡೆಯುತ್ತಿದ್ದು, ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯ ರಚನೆ ಮತ್ತು ಬಳಕೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತಿದೆ. ಇಂಧನ ಮತ್ತು ಸಾರಿಗೆ ಇತ್ಯಾದಿ ವಲಯಗಳಲ್ಲಿ ಕಾರ್ಬನ್ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಾಗುತ್ತಿದೆ. ಆದಾಗ್ಯೂ ಕೂಡ ಹವಾಮಾನ ಬದಲಾವಣೆಯಿಂದ ಜಾಗತಿಕವಾಗಿ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಗೆ ಆಗಿರುವ ವಾರ್ಷಿಕ ಸರಾಸರಿ ನಷ್ಟ 301 ರಿಂದ 330 ಬಿಲಿಯನ್ ಡಾಲರ್ ಇದೆ ಎಂದು ವರದಿ ಅಂದಾಜು ಮಾಡಿದೆ.

ಜಾಗತಿಕವಾಗಿ ಸಂಭವಿಸುವ ವಾರ್ಷಿಕ ನಷ್ಟದಲ್ಲಿ ಶೇ. 30ರಷ್ಟು ಪ್ರಮಾಣವು ಭೂಕಂಪ, ಭೂಕುಸಿತ ಇತ್ಯಾದಿ ಭೌಗೋಳಿಕ ಅವಘಡಗಳಾಗಿವೆ. ಇನ್ನುಳಿದ ಶೇ. 70ರಷ್ಟು ಪ್ರಮಾಣವು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಆಗುವ ದುರಂತಗಳದ್ದಾಗಿವೆ. ಚಂಡಮಾರುತ, ಅತಿವೃಷ್ಟಿ, ಬರ, ಉಷ್ಣಗಾಳಿ, ಶೀತಗಾಳಿ, ಹಿಮಪಾತ ಇತ್ಯಾದಿಗಳು ಈ ಅವಘಡಗಳಿಗೆ ಉದಾಹರಣೆ.

ಮಧ್ಯಪ್ರಾಚ್ಯ, ಆಫ್ರಿಕನ್ ದೇಶಗಳಿಗೆ ಹೆಚ್ಚು ಬಾಧೆ?

ಹವಾಮಾನ ಬದಲಾವಣೆಯಿಂದ ಉಂಟಾಗುವ ನೈಸರ್ಗಿಕ ವಿಕೋಪಗಳಿಂದ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆ ಹಾಳಾಗುವ ಅಪಾಯ ಹೆಚ್ಚಾಗಿರುವುದು ಆಫ್ರಿಕಾದ ಸಹಾರ ಮರುಭೂಮಿಯೊಂದಿಗೆ ಜೋಡಿತವಾಗಿರುವ ದೇಶಗಳು ಹಾಗೂ ಮಧ್ಯಪ್ರಾಚ್ಯ ದೇಶಗಳು ಎಂದು ಸಿಡಿಆರ್​ಐ ವರದಿಯಲ್ಲಿ ಎತ್ತಿತೋರಿಸಲಾಗಿದೆ. ಹಾಗೆಯೇ, ಜಲವಿದ್ಯುತ್ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳಿಗೆ ಈ ಸಮಸ್ಯೆ ಹೆಚ್ಚಿದೆ.

ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ; ಕಚ್ಛಾ ತೈಲಬೆಲೆ ಶೇ. 5ರಷ್ಟು ಹೆಚ್ಚಳ; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಇನ್ನು, ಹೆಚ್ಚು ಆದಾಯದ ದೇಶಗಳು ವಿಕೋಪಗಳಿಗೆ ಸಮರ್ಥ ಪ್ರತಿರೋಧ ಇರುವ ಇನ್​ಫ್ರಾಸ್ಟ್ರಕ್ಚರ್ ಅನ್ನು ರೂಪಿಸಬಲ್ಲುವು. ಆದರೆ, ಕಡಿಮೆ ಆದಾಯದ ದೇಶಗಳಲ್ಲಿ ಈ ವ್ಯವಸ್ಥೆ ನಿರ್ಮಾಣ ಕಷ್ಟಸಾಧ್ಯ. ಹೀಗಾಗಿ, ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಬಡ ದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ.

ಫಿಲಿಪ್ಪೈನ್ಸ್, ಬಾಂಗ್ಲಾದೇಶ, ವಿಯೆಟ್ನಾಂ, ಮಯನ್ಮಾರ್, ಪೆರು, ಹೊಂಡುರಸ್, ಈಕ್ವಡಾರ್ ಮೊದಲಾದ ದೇಶಗಳಲ್ಲಿ ನೈಸರ್ಗಿಕ ಅವಘಡಗಳು ಸಂಭವಿಸಿದರೆ ಹಾನಿಯಾಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಎಂಬುದು ಸಿಡಿಆರ್​ಐ ವರದಿಯಲ್ಲಿ ಕಂಡು ಬಂದಿರುವ ಅಂಶ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ