AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pan Aadhaar Linking: ಪ್ಯಾನ್ ಆಧಾರ್ ಕಾರ್ಡ್​ ಲಿಂಕ್ ಗಡುವು ಮತ್ತೆ ವಿಸ್ತರಣೆ

ಪ್ಯಾನ್ ಹಾಗೂ ಆಧಾರ್ ಕಾರ್ಡ್​ ಲಿಂಕ್ ಮಾಡಲು ಗಡುವು ಮುಗಿಯುವ ಎರಡು ದಿನಗಳ ಮುಂಚೆಯೇ ಮತ್ತೆ ವಿಸ್ತರಣೆಯಾಗಿದೆ.

Pan Aadhaar Linking: ಪ್ಯಾನ್ ಆಧಾರ್ ಕಾರ್ಡ್​ ಲಿಂಕ್ ಗಡುವು ಮತ್ತೆ ವಿಸ್ತರಣೆ
ಪ್ಯಾನ್​-ಆಧಾರ್
Follow us
ನಯನಾ ರಾಜೀವ್
| Updated By: Digi Tech Desk

Updated on:Mar 28, 2023 | 4:01 PM

ಪ್ಯಾನ್(Pan) ಹಾಗೂ ಆಧಾರ್ ಕಾರ್ಡ್(Aadhaar)​ ಲಿಂಕ್ ಮಾಡಲು ನೀಡಿದ್ದ ಅವಧಿ ಮುಗಿಯುವ ಎರಡು ದಿನಗಳ ಮುಂಚೆಯೇ ಮತ್ತೆ ಗಡುವು ವಿಸ್ತರಣೆಯಾಗಿದೆ. ಪ್ಯಾನ್ ಹಾಗೂ ಆಧಾರ್ ಕಾರ್ಡ್​ ಲಿಂಕ್ ಮಾಡಲು ಗಡುವು ಮುಗಿಯುವ ಎರಡು ದಿನಗಳ ಮುಂಚೆಯೇ ಕೇಂದ್ರ ಸರ್ಕಾರ ಗಡುವನ್ನು  ವಿಸ್ತರಣೆ ಮಾಡಿದೆ. ಪ್ಯಾನ್ ಹಾಗೂ ಆಧಾರ್ ಕಾರ್ಡ್​ ಲಿಂಕ್ ಮಾಡುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಪರ್ಮನೆಂಟ್‌ ಅಕೌಂಟ್‌ ನಂಬರ್‌ ಅಂದರೆ PAN ಕಾರ್ಡ್ ಅತ್ಯಂತ ಪ್ರಮುಖ ಬ್ಯುಸಿನೆಸ್‌ ID ಆಗಿದ್ದು, ಪ್ಯಾನ್‌ ನಂಬರ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ.ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡುವವರೆಗೆ ಎಲ್ಲ ಕೆಲಸಗಳಿಗೂ ಪ್ಯಾನ್ ಕಾರ್ಡ್ ಬೇಕೇ ಬೇಕು. ಆ ಪರಿಸ್ಥಿತಿಯಲ್ಲಿ ಪ್ಯಾನ್ ಕಾರ್ಡ್‌ ಇಲ್ಲದಿದ್ದರೆ ನಿಮ್ಮ ಅನೇಕ ಹಣಕಾಸು ಕೆಲಸಗಳು ಸ್ಥಗಿತವಾಗಬಹುದು. ನೀವು ಇನ್ನೂ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿತ್ತು, ಈ ಹಿಂದೆ ಮಾರ್ಚ್​ 31 ಕೊನೆಯ ದಿನಾಂಕವೆಂದು ಹೇಳಲಾಗಿತ್ತು. ಆದರೆ ಇದೀಗ ಜೂನ್ 30ರವರೆಗೂ ಗಡುವು ವಿಸ್ತರಿಸಲಾಗಿದೆ. ಆಧಾರ್, ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸೈಬರ್​ ಸೆಂಟರ್​ಗಳಲ್ಲಿ ಜನ ಮುಗಿಬಿದ್ದಿದ್ದಾರೆ. ಫೈನ್ ಕಟ್ಟುವ ಭೀತಿಯಲ್ಲಿ ಕ್ಯೂನಲ್ಲಿ ನಿಂತು ಲಿಂಕ್​​ ಮಾಡಿಸುತ್ತಿದ್ದಾರೆ, ಇದನ್ನೇ ಕೆಲ ಸೈಬರ್ ಸೆಂಟರ್​ಗಳು ಬಂಡವಾಳ‌ ಮಾಡಿಕೊಂಡಿವೆ. ಬೇರೆ ಬೇರೆ ವೆಬ್​ಸೈಟ್​ಗಳಲ್ಲಿ ಪಾನ್ ಹಾಗೂ ಆಧಾರ್ ಲಿಂಕ್‌‌ ಮಾಡುತ್ತಿದ್ದಾರೆ. 1 ಸಾವಿರ ಶುಲ್ಕದ ಜೊತೆಗೆ ಸೈಬರ್ ಸೆಂಟರ್ ಮಾಲೀಕರು ಜೊತೆಗೆ ಪ್ರೊಸೆಸಿಂಗ್ ಶುಲ್ಕ ಎಂದು 500 ರೂಪಾಯಿ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಇಲಾಖೆಯು ತೆರಿಗೆದಾರರಿಗೆ ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್‌ಗಳನ್ನು ನೀಡಿದೆ.

ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಪರಿಶೀಲಿಸುವುದು ಹೇಗೆ?

  • ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
  • ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ.
  •  ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
  • ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
  •  View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
  • ಎಡಬದಿಯಲ್ಲಿ Quick Liks ಕಾಣಿಸುತ್ತದೆಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆಎಂಬಂತಹ ಸಂದೇಶ ಬರುತ್ತದೆ.
  • ಇನ್ನು, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್​ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು. ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
  • ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ನೀವು ಆಧಾರ್ ಮತ್ತು ಪಾನ್  ಲಿಂಕ್ ಮಾಡಬೇಕಾಗುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 28 March 23

ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ