AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಕಂಪನಿ ಎನಿಸಿಕೊಳ್ಳಲು ಟರ್ನೋವರ್ ಮಿತಿ 100 ಕೋಟಿ ರೂಗೆ ಹೆಚ್ಚಳ; ಉದ್ದಿಮೆಗಳಿಗೆ ಏನು ಉಪಯೋಗ?

Definition of small company revised, paid up capital and turnover limit raised: ಸಣ್ಣ ಕಂಪನಿ ವ್ಯಾಖ್ಯಾನದಲ್ಲಿ ಬದಲಾವಣೆ ಮಾಡಲಾಗಿದೆ. ಪೇಯ್ಡ್ ಅಪ್ ಕ್ಯಾಪಿಟಲ್ 10 ಕೋಟಿ ರು, ಟರ್ನೋವರ್ 100 ಕೋಟಿ ರೂಗಿಂತ ಕಡಿಮೆ ಇದ್ದರೆ ಸಣ್ಣ ಕಂಪನಿ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಡಿ. 1ರಂದು ಅಧಿಸೂಚನೆ ನೀಡಿದೆ.

ಸಣ್ಣ ಕಂಪನಿ ಎನಿಸಿಕೊಳ್ಳಲು ಟರ್ನೋವರ್ ಮಿತಿ 100 ಕೋಟಿ ರೂಗೆ ಹೆಚ್ಚಳ; ಉದ್ದಿಮೆಗಳಿಗೆ ಏನು ಉಪಯೋಗ?
ಎಂಎಸ್​ಎಂಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 02, 2025 | 7:33 PM

Share

ನವದೆಹಲಿ, ಡಿಸೆಂಬರ್ 2: ಕಂಪನಿ ಕಾನೂನು ಕಾಯ್ದೆಯಡಿ (Companies Act) ಸಣ್ಣ ಕಂಪನಿಗಳ ಮಾನದಂಡದಲ್ಲಿ (Definition of Small Company) ಮತ್ತೆ ಮಾರ್ಪಾಡು ತರಲಾಗಿದೆ. ಸಣ್ಣ ಕಂಪನಿ ಎನಿಸಿಕೊಳ್ಳಲು ಇದ್ದ ಕೆಲ ಮಿತಿಗಳನ್ನು ಈಗ ಹಿಗ್ಗಿಸಲಾಗಿದೆ. ಕಂಪನಿಯ ಫಂಡ್ ಮಿತಿ 10 ಕೋಟಿ ರೂ, ಹಾಗೂ ಟರ್ನೋವರ್ ಮಿತಿ 100 ಕೋಟಿ ರೂಗೆ ಏರಿಸಲಾಗಿದೆ. ಪ್ರಸಕ್ತ ಉದ್ಯಮ ವಾತಾವರಣ ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ.

ಈ ಮೊದಲು ಪೇಯ್ಡ್ ಅಪ್ ಕ್ಯಾಪಿಟಲ್ ಅಥವಾ ಷೇರುದಾರರ ಫಂಡ್​ಗೆ 4 ಕೋಟಿ ರೂ ಮಿತಿ ಇತ್ತು. ಬ್ಯುಸಿನೆಸ್ ಟರ್ನೋವರ್ ಮಿತಿ 40 ಕೋಟಿ ರೂ ಇತ್ತು. ಈ ಮಿತಿ ದಾಟಿದರೆ ಅದನ್ನು ಸಣ್ಣ ಕಂಪನಿ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಈಗ ಮಿತಿಯನ್ನು ಏರಿಸಲಾಗಿರುವುದರಿಂದ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿನ್ನೆ ಸೋಮವಾರ (ಡಿ. 1) ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಸಣ್ಣ ಕಂಪನಿಯ ಪೇಯ್ಡ್ ಅಪ್ ಕ್ಯಾಪಿಟಲ್ ಮತ್ತು ಟರ್ನೋವರ್ ಕ್ರಮವಾಗಿ 10 ಕೋಟಿ ರೂ ಹಾಗೂ 100 ಕೋಟಿ ರೂ ಮೀರುವಂತಿಲ್ಲ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿಗಳ ಆರ್ಥಿಕ ಸಲಹೆಗಾರರ ಮಂಡಳಿಯ ಸದಸ್ಯ ಹಾಗೂ ಆರ್ಥಿಕ ತಜ್ಞರಾದ ಸಂಜೀವ್ ಸಾನ್ಯಾಲ್ ಅವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಸರ್ಕಾರದ ಈ ಸುಧಾರಣಾ ಕ್ರಮವು ದೊಡ್ಡ ಸಂಖ್ಯೆಯ ಎಂಎಸ್​ಎಂಇಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಸಂಜೀವ್ ಸಾನ್ಯಾಲ್ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್

ಸಣ್ಣ ಉದ್ದಿಮೆಗಳಿಗೆ ಏನು ಅನುಕೂಲ?

ದೊಡ್ಡ ಕಂಪನಿಗಳಿಗೆ ನಾಡಿನ ಕಾನೂನು ಕಟ್ಟಳೆಗಳು ಸಂಕೀರ್ಣವಾಗಿವೆ. ಅದಕ್ಕೆ ಹೋಲಿಸಿದರೆ ಸಣ್ಣ ಉದ್ದಿಮೆಗಳಿಗೆ ಕಟ್ಟಳೆಗಳು, ನಿರ್ಬಂಧಗಳು ಕಡಿಮೆ. ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದಲೂ ವಿವಿಧ ಉತ್ತೇಜನಗಳು ಸಿಗುತ್ತವೆ. ಹೀಗಾಗಿ, ಸಣ್ಣ ಕಂಪನಿಯ ಕೆಟಗರಿಯಲ್ಲಿ ಉಳಿಯಲು ಬಹಳ ಸಂಸ್ಥೆಗಳು ಪ್ರಯತ್ನಿಸುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ