ನವದೆಹಲಿ: ಏಪ್ರಿಲ್ 18ರಂದು ಮುಂಬೈನಲ್ಲಿ ಭಾರತದ ಮೊದಲ ಆ್ಯಪಲ್ ಸ್ಟೋರ್ (Apple BKC Store) ಉದ್ಘಾಟನೆ ಆಗಿತ್ತು. ಎರಡು ದಿನಗಳ ಬಳಿಕ, ಏಪ್ರಿಲ್ 20ರಂದು ದೆಹಲಿಯ ಸಾಕೇತ್ನಲ್ಲಿ ಇನ್ನೊಂದು ಆ್ಯಪಲ್ ಸ್ಟೋರ್ (Apple Saket Store) ಅನಾವರಣಗೊಂಡಿದೆ. ಗುರುವಾರ ಬೆಳಗ್ಗೆ 10 ಗಂಟೆಗೆ ಟಿಮ್ ಕುಕ್ ಅವರು ಆ್ಯಪಲ್ ಸ್ಟೋರ್ ಉದ್ಘಾಟನೆ ಮಾಡಿದರು. ಮುಂಬೈನ ಆ್ಯಪಲ್ ಬಿಕೆಸಿ ಸ್ಟೋರ್ಗಿಂತ ಚಿಕ್ಕದಾಗಿರುವ ಸಾಕೇತ್ ಆ್ಯಪಲ್ ಸ್ಟೋರ್ನಲ್ಲಿ 70 ಮಂದಿ ಸಿಬ್ಬಂದಿ ಇದ್ದಾರೆ. ವಿಶ್ವದ ಇತರೆಡೆಯ ಆ್ಯಪಲ್ ಸ್ಟೋರ್ಗಳಲ್ಲಿರುವ ಎಲ್ಲಾ ಸೇವೆಗಳು ಸಾಕೇತ್ ಆ್ಯಪಲ್ ಸ್ಟೋರ್ನಲ್ಲೂ ಲಭ್ಯ ಇರಲಿವೆ. ನಿನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮ ನೋಡಲು ಮತ್ತು ಆ್ಯಪಲ್ ಸ್ಟೋರ್ ಕಣ್ತುಂಬಿಸಿಕೊಳ್ಳಲು ಹೊರಗೆ ಜನರ ದೊಡ್ಡ ದಂಡೇ ನೆರೆದಿತ್ತು. ಸ್ಟೋರ್ ಉದ್ಘಾಟಿಸಿದ ಸಿಇಒ ಟಿಮ್ ಕುಕ್ (Apple CEO Tim Cook) ಅವರು ಗ್ರಾಹಕರನ್ನು ನಮಸ್ತೆ ಮಾಡುತ್ತಾ ಬರಮಾಡಿಕೊಂಡು ಗಮನ ಸೆಳೆದರು. ಗುರುವಾರ ಸಾಕೇತ್ ಸ್ಟೋರ್ ಒಳಗೆ ಮತ್ತು ಹೊರಗೆ ಹಬ್ಬದ ವಾತಾವರಣವೇ ಮೇಳೈಸಿತ್ತು.
ದೆಹಲಿಯ ಸಾಕೇತ್ ಪ್ರದೇಶದ ಮಾಲ್ವೊಂದರಲ್ಲಿ ಸ್ಥಾಪನೆಯಾಗಿರುವ ಆ್ಯಪಲ್ ಸ್ಟೋರ್ನಲ್ಲಿ 70 ಮಂದಿ ಸಿಬ್ಬಂದಿ ಇದ್ದಾರೆ. ಇವರು ಕರ್ನಾಟಕದ ಸೇರಿದಂತೆ 18 ಬೇರೆ ಬೇರೆ ರಾಜ್ಯಗಳಿಂದ ಬಂದರಾಗಿದ್ದಾರೆ. ಇವರಲ್ಲಿ 15 ಭಾಷೆಗಳನ್ನು ಬಲ್ಲವರು ಇದ್ದಾರೆ. ಅಂದರೆ 15 ಭಾಷೆಗಳಲ್ಲಿನ ಯಾವುದೇ ಗ್ರಾಹಕರು ಬಂದರೂ ಆ ಭಾಷೆಯಲ್ಲಿ ಸಂವಾದ ನಡೆಸುವ ಯಾವುದಾದರೂ ಸಿಬ್ಬಂದಿ ಈ ಸ್ಟೋರ್ನಲ್ಲಿ ಇರುತ್ತಾರೆ. ಮುಂಬೈನ ಆ್ಯಪಲ್ ಬಿಕೆಸಿ ಸ್ಟೋರ್ನಲ್ಲಿ 20ಕ್ಕೂ ಹೆಚ್ಚು ಭಾಷೆಗಳನ್ನು ಬಲ್ಲ ಸಿಬ್ಬಂದಿ ಇದ್ದಾರೆ.
ಮಂಗಳವಾರ ಮುಂಬೈನ ಆ್ಯಪಲ್ ಸ್ಟೋರ್ ಉದ್ಘಾಟನೆ ವೇಳೆ ಒಬ್ಬ ವ್ಯಕ್ತಿ ಹಲವು ದಶಕಗಳ ಹಿಂದಿನ ಆ್ಯಪಲ್ನ ಮೆಸಿಂಟೋಸ್ ಕಂಪ್ಯೂಟರ್ ಅನ್ನು ತಂದು ಗಮನ ಸೆಳೆದಿದ್ದರು. ಈಗ ದೆಹಲಿಯ ಆ್ಯಪಲ್ ಸ್ಟೋರ್ ಉದ್ಘಾಟನೆಯ ದಿನ ಒಬ್ಬ ವ್ಯಕ್ತಿ 1999ರ ಐಬುಕ್ವೊಂದನ್ನು (Apple iBook Laptop) ತಂದು ಗಮನ ಸೆಳೆದರು.
ಆ್ಯಪಲ್ ಸ್ಟೋರ್ನಲ್ಲಿ ಪ್ರತ್ಯಕ್ಷವಾಗಿದ್ದು ಐಬುಕ್ ಜಿ3. ಅ್ಯಪಲ್ನ ಈಗಿನ ಮ್ಯಾಕ್ಬುಕ್ ಬರುವ ಮುನ್ನ ಐ ಸೀರೀಸ್ನ ಲ್ಯಾಪ್ಟಾಪ್ಗಳಿದ್ದವು. ಈ ಐ ಸರಣಿಯ ಮೊದಲಿನ ಸರಣಿಗಳಲ್ಲಿ ಐಬುಕ್ ಜಿ3ಯೂ ಒಂದು. ಇದರ ವಿಶೇಷ ಎಂದರೆ ವೈಫೈ ಸಪೋರ್ಟ್ ನೀಡುವ ಆ್ಯಪಲ್ನ ಮೊದಲ ಲ್ಯಾಪ್ಟಾಪ್ ಅದಾಗಿತ್ತು.
ಇದನ್ನೂ ಓದಿ: Koo Layoffs: ಆದಾಯ 14 ಲಕ್ಷ, ನಷ್ಟ 197 ಕೋಟಿ; ಶೇ. 30ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಕೂ
This guy got his MacBook from 1999. #Apple fan boys are wild! I tell ya! 😀 #AppleSaket pic.twitter.com/shmcAwxPGZ
— Sulabh Puri (@sulabhpuri) April 20, 2023
ಈ ಐಬುಕ್ ಸರಣಿಯ ಆ್ಯಪಲ್ ಲ್ಯಾಪ್ಟಾಪ್ ಶುರುವಾಗಿದ್ದೇ 1999ರಲ್ಲಿ. ಇದು 2006ರವರೆಗೂ ಸರಣಿ ರೂಪದಲ್ಲಿ ಮಾರಾಟದಲ್ಲಿತ್ತು. ಇದಾದ ಬಳಿಕ ಆ್ಯಪಲ್ ಕಂಪನಿ ತನ್ನ ಕಂಪ್ಯೂಟರ್ನ ಪ್ರೋಸಸರ್ ಅನ್ನು ಇಂಟೆಲ್ಗೆ ಬದಲಾಯಿಸಿತು. ಆಗ ಐಬುಕ್ ಸರಣಿ ನಿಂತು 2006ರಲ್ಲಿ ಮ್ಯಾಕ್ಬುಕ್ ಸರಣಿ ಆರಂಭವಾಯಿತು.