Gold Silver Price on 23rd October 2022 | ಬೆಂಗಳೂರು: ದೀಪಾವಳಿ (Diwali) ಹಬ್ಬ ಹಾಗೂ ಧನ್ತೇರಸ್ (Dhanteras 2022) ಸಂಭ್ರಮದ ಮಧ್ಯೆ ಚಿನ್ನ (Gold Price) ಮತ್ತು ಬೆಳ್ಳಿಯ ದರ (Silver Price) ತುಸು ಏರಿಕೆ ಕಂಡಿವೆ. ಕಳೆದ ಕೆಲವು ದಿನಗಳಿಂದ ಸಣ್ಣ ಪ್ರಮಾಣದ ಏರಿಳಿತ ಕಾಣುತ್ತಿದ್ದ ಉಭಯ ಲೋಹಗಳ ದರ ಇಂದು ಅದೇ ಟ್ರೆಂಡ್ ಅನ್ನು ಮುಂದುವರಿಸಿವೆ. ದೀಪಾವಳಿ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುವ ನಿರೀಕ್ಷೆಯೂ ಮಾರುಕಟ್ಟೆಯಲ್ಲಿ ಕಂಡುಬಂದಿದೆ.
ಚಿನ್ನದ ದರ 10 ಗ್ರಾಂಗೆ 750 ರೂ. ಏರಿಕೆಯಾಗಿದೆ. ಬೆಳ್ಳಿಯ ದರ ಕೂಡ ಒಂದು ಕೆಜಿಗೆ 1,550 ರೂ. ಹೆಚ್ಚಳ ದಾಖಲಿಸಿದೆ.
ದೇಶದ ಪ್ರಮುಖ ನಗರಗಳ ಚಿನ್ನ ಹಾಗೂ ಬೆಳ್ಳಿ ದರದ ಮಾಹಿತಿ ಇಲ್ಲಿದೆ;
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 750 ರೂಪಾಯಿ ಏರಿಕೆಯಾಗಿದ್ದು, 47,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 830 ರೂ. ಹೆಚ್ಚಳವಾಗಿ 51,280 ರೂ. ಆಗಿದೆ. ಬೆಳ್ಳಿ ದರ ಕೆಜಿಗೆ 1,550 ಹೆಚ್ಚಳವಾಗಿ 57,700 ಆಗಿದೆ.
ಇದನ್ನೂ ಓದಿ: Dhanteras 2022: ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಐದು ಆಯ್ಕೆಗಳು
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,400 ರೂ. ಮುಂಬೈ- 47,000 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,050 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,030 ರೂ, ಮಂಗಳೂರು- 47,050 ರೂ, ಮೈಸೂರು- 47,050 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,710 ರೂ, ಮುಂಬೈ- 51,280 ರೂ, ದೆಹಲಿ- 51,440 ರೂ, ಕೊಲ್ಕತ್ತಾ- 51,280 ರೂ, ಬೆಂಗಳೂರು- 51,330 ರೂ, ಹೈದರಾಬಾದ್- 51,280 ರೂ, ಕೇರಳ- 51,280 ರೂ, ಪುಣೆ- 51,310 ರೂ, ಮಂಗಳೂರು- 51,330 ರೂ, ಮೈಸೂರು- 51,330 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 63,200 ರೂ, ಮೈಸೂರು- 63,200 ರೂ., ಮಂಗಳೂರು- 63,200 ರೂ., ಮುಂಬೈ- 57,700 ರೂ, ಚೆನ್ನೈ- 63,200 ರೂ, ದೆಹಲಿ- 57,700 ರೂ, ಹೈದರಾಬಾದ್- 63,200 ರೂ, ಕೊಲ್ಕತ್ತಾ- 57,700 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ