AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rozgar Mela: ದೀಪಾವಳಿಗೆ ಮೋದಿ ಸರ್ಕಾರದ ಗಿಫ್ಟ್ – ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ ಪ್ರಲ್ಹಾದ್ ಜೋಶಿ

Pralhad Joshi: ದೇಶಾದ್ಯಂತ 75 ಸಾವಿರ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ನೀಡುವ ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಬೆಂಗಳೂರಿನಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ್, ಸಂಸದ ಪಿ.ಸಿ ಮೋಹನ್, ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

Rozgar Mela: ದೀಪಾವಳಿಗೆ ಮೋದಿ ಸರ್ಕಾರದ ಗಿಫ್ಟ್ - ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ ಪ್ರಲ್ಹಾದ್ ಜೋಶಿ
ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
TV9 Web
| Edited By: |

Updated on:Oct 22, 2022 | 7:04 PM

Share

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ದೇಶದ ಯುವಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಬಂಪರ್ ಕೊಡುಗೆ ನೀಡಿದ್ದಾರೆ. ವರ್ಚುವಲ್ ಮೂಲಕ ಇಂದು 75 ಸಾವಿರ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನಲ್ಲೂ ಇಂದು ಶನಿವಾರ ರೋಜ್ ಗಾರ್ ಮೇಳ (Rozgar Mela) ನಡೆಯಿತು. ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಯುವಕರಿಗೆ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Rozgar Mela) ನೇಮಕಾತಿ ಪತ್ರವನ್ನು ವಿತರಿಸಿದರು.

ನೇಮಕಗೊಂಡ ಯುವಕರಿಗೆ ಶುಭ ಕೋರಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನುಡಿದಂತೆ ನಡೆದಿಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 10 ಲಕ್ಷ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆಯನ್ನು ನೀಡಿರುವ ಪ್ರಧಾನಿ ಮೋದಿಯವರು, ಅದನ್ನು ಶೀಘ್ರದಲ್ಲಿಯೇ ನೆರವೇರಿಸಲಿದ್ದಾರೆ. ಇದರ ಮೊದಲ ಹಂತವಾಗಿ ಇಂದು 75,000 ಯುವಕರಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ಅವರು ಖುದ್ದಾಗಿ ವರ್ಚುವಲ್ ವೇದಿಕೆಯ ಮೂಲಕ ಹಸ್ತಾಂತರಿಸಿದ್ದಾರೆ ಎಂದರು.

ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿದ್ದಾರೆ.‌ ಒಬ್ಬ ದೂರ ದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದೇ ಉದಾಹರಣೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶಾದ್ಯಂತ 75 ಸಾವಿರ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ನೀಡುವ ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಬೆಂಗಳೂರಿನಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ್, ಸಂಸದ ಪಿ.ಸಿ ಮೋಹನ್, ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

Published On - 4:37 pm, Sat, 22 October 22

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ