ನವದೆಹಲಿ, ಮಾರ್ಚ್ 17: ಭಾರತದಲ್ಲಿ ಈ ಹಣಕಾಸು ವರ್ಷ ಸಖತ್ ಟ್ಯಾಕ್ಸ್ ಕಲೆಕ್ಷನ್ಸ್ ಆಗುತ್ತಿದೆ. ನಿನ್ನೆಯವರೆಗೂ, ಅಂದರೆ 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 16ರವರೆಗೂ 25.86 ಲಕ್ಷ ಕೋಟಿ ರೂನಷ್ಟು ನೇರ ತೆರಿಗೆಗಳು (Direct tax collection) ಸಂಗ್ರಹ ಆಗಿವೆ. ಸಿಬಿಡಿಟಿ ಇಂದು ಸೋಮವಾರ ದತ್ತಾಂಶ ಪ್ರಕಟಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್ನಲ್ಲಿ ಶೇ 16.15ರಷ್ಟು ಹೆಚ್ಚಳ ಆಗಿದೆ. ಆದಾಯಕ್ಕೆ ವಿಧಿಸುವ ವಿವಿಧ ತೆರಿಗೆಗಳು ಡೈರೆಕ್ಟ್ ಟ್ಯಾಕ್ಸ್ ಎನಿಸುತ್ತವೆ. ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ ಇತ್ಯಾದಿ ಈ ಗುಂಪಿಗೆ ಸೇರುತ್ತವೆ. ಜಿಎಸ್ಟಿ ಇತ್ಯಾದಿ ಸರಕುಗಳಿಗೆ ವಿಧಿಸುವ ತೆರಿಗೆಯು ಇನ್ಡೈರೆಕ್ಟ್ ಅಥವಾ ಪರೋಕ್ಷ ತೆರಿಗೆ ಎನಿಸುತ್ತದೆ.
ಕಾರ್ಪೊರೇಟ್ ತೆರಿಗೆಗಳು ಹಿಂದಿನ ಹಣಕಾಸು ವರ್ಷದಲ್ಲಿ 10.1 ಲಕ್ಷ ಕೋಟಿ ರೂನಷ್ಟು ಸಿಕ್ಕಿದ್ದವು. ಈ ವರ್ಷ ಇಲ್ಲಿಯವರೆಗೆ 12.40 ಲಕ್ಷ ಕೋಟಿ ರೂನಷ್ಟು ಕಾರ್ಪೊರೇಟ್ ಟ್ಯಾಕ್ಸ್ ಅನ್ನು ಸರ್ಕಾರ ಪಡೆದಿದೆ.
ಇದನ್ನೂ ಓದಿ: ಭಾರತದ ಟ್ರೇಡ್ ಡೆಫಿಸಿಟ್ನಲ್ಲಿ ಗಣನೀಯ ಇಳಿಕೆ; ನಾಲ್ಕು ವರ್ಷದ ಕನಿಷ್ಠ ಮಟ್ಟ
ನಾನ್-ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹ 10.91 ಲಕ್ಷ ಕೋಟಿ ರೂನಿಂದ 12.90 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ. ಷೇರು ವಹಿವಾಟಿನಲ್ಲಿ ಸಂಗ್ರಹಿಸಲಾಗುವ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್ಟಿಟಿ) ಹೈಜಂಪ್ ಆಗಿದೆ. ಹಿಂದಿನ ವರ್ಷದಲ್ಲಿ 34,131 ಕೋಟಿ ರೂ ಇದ್ದ ಎಸ್ಟಿಟಿ ಈ ಬಾರಿ ಇಲ್ಲಿಯವರೆಗೆ 53,096 ಕೋಟಿ ರೂ ಆಗಿದೆ. ವೆಲ್ತ್ ಟ್ಯಾಕ್ಸ್ನಲ್ಲಿ ಈ ಬಾರಿ ತುಸು ಕಡಿಮೆ ಆಗಿದೆ. 3,656 ಕೋಟಿ ರೂ ಇದ್ದ ವೆಲ್ತ್ ಟ್ಯಾಕ್ಸ್ ಈಗ 3,399 ಕೋಟಿ ರೂ ಮೊತ್ತದಷ್ಟು ಮಾತ್ರವೇ ಸಂಗ್ರಹ ಆಗಿರುವುದು.
ವ್ಯಕ್ತಿಗಳು ಮತ್ತು ಬಿಸಿನೆಸ್ ಸಂಸ್ಥೆಗಳು ಸರ್ಕಾರಕ್ಕೆ ನೇರವಾಗಿ ಪಾವತಿಸುವ ತೆರಿಗೆಯೇ ಡೈರೆಕ್ಟ್ ಟ್ಯಾಕ್ಸ್. ಇದರಲ್ಲಿ ಪರ್ಸನಲ್ ಇನ್ಕಮ್ ಟ್ಯಾಕ್ಸ್, ಕಾರ್ಪೊರೇಟ್ ಟ್ಯಾಕ್ಸ್, ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್, ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್, ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ ಮೊದಲಾದವರು ಒಳಗೊಳ್ಳುತ್ತವೆ.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಹೋಲ್ಸೇಲ್ ಹಣದುಬ್ಬರ ಶೇ. 2.38; ಜನವರಿಗೆ ಹೋಲಿಸಿದರೆ ಅಲ್ಪ ಹೆಚ್ಚಳ
ಭಾರತದಲ್ಲಿ ತೆರಿಗೆ ಸಂಗ್ರಹ ಹೆಚ್ಚಿರುವುದು ದೇಶದ ಹಣಕಾಸು ಆರೋಗ್ಯದ ಸಂಕೇತವಾಗಿದೆ. ಸರ್ಕಾರದ ಆದಾಯ ಪ್ರಮಾಣ ಹೆಚ್ಚಾಗುತ್ತದೆ. ಸಾಲದ ಹೊರೆ ತಗ್ಗಿಸಲು ಸಹಾಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Mon, 17 March 25