AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

INR Vs USD Value: ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಪಾತಾಳಕ್ಕೆ: 1 ಡಾಲರ್ = 79.11 ರೂಪಾಯಿ

ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಜುಲೈ 1ನೇ ತಾರೀಕಿನ ಶುಕ್ರವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 79.11 ಮುಟ್ಟಿದೆ.

INR Vs USD Value: ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಪಾತಾಳಕ್ಕೆ: 1 ಡಾಲರ್ = 79.11 ರೂಪಾಯಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jul 01, 2022 | 1:24 PM

Share

ನಿರಂತರ ವಿದೇಶಿ ನಿಧಿಯ ಹೊರಹರಿವು ಹೂಡಿಕೆದಾರರ ಭಾವನೆಗಳ ಮೇಲೆ ತೂಗುತ್ತಿರುವ ಕಾರಣ ಅಮೆರಿಕ ಡಾಲರ್ (America Dollar) ವಿರುದ್ಧ ರೂಪಾಯಿ ಮೌಲ್ಯ ಜುಲೈ 1ನೇ ತಾರೀಕಿನ ಶುಕ್ರವಾರದಂದು ಹಿಂದಿನ 78.97ರ ಅಂತ್ಯದ ವಿರುದ್ಧ ದಾಖಲೆಯ 79.11ಕ್ಕೆ ತಲುಪಿದೆ. ಈ ವರ್ಷ ಇಲ್ಲಿಯವರೆಗೆ ಭಾರತದ ರೂಪಾಯಿ ವಿರುದ್ಧ ಅಮೆರಿಕ ಡಾಲರ್ ಶೇ 6ಕ್ಕಿಂತ ಹೆಚ್ಚಾಗಿದೆ. ಅಮೆರಿಕದ ಡಾಲರ್‌ನಲ್ಲಿನ ವ್ಯಾಪಕ ಶಕ್ತಿಯೂ ರೂಪಾಯಿ ಮೇಲೆ ಪ್ರಭಾವ ಬೀರಿದೆ. ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು 104.90ರಲ್ಲಿ ಹೆಚ್ಚಿನ ವಹಿವಾಟು ನಡೆಸುತ್ತಿದೆ.

“ನಗದು ಡಾಲರ್‌ಗಳ ಕೊರತೆ ಮತ್ತು 1-ವರ್ಷದ ಫಾರ್ವರ್ಡ್ ಪ್ರೀಮಿಯಂಗಳಲ್ಲಿನ ಕುಸಿತವು ರೂಪಾಯಿಯ ಮೇಲೆ ಭಾರವನ್ನು ಉಂಟುಮಾಡಿದೆ. ಇನ್ನು ಮುಂದೆ, ಅವಳಿ ಕೊರತೆಗಳ ವಿಸ್ತರಣೆ ಕಾರಣದಿಂದ ವರ್ಷಾಂತ್ಯದ ವೇಳೆಗೆ ರೂಪಾಯಿ ಮೌಲ್ಯವು 80.5/81 ಮಟ್ಟಕ್ಕೆ ಕುಸಿಯುವುದನ್ನು ನಾವು ನೋಡಬಹುದು. ಮೇ ತಿಂಗಳಲ್ಲಿ ದಾಖಲೆಯ ಹೆಚ್ಚಿನ ಕೊರತೆ ಯುಎಸ್​ಡಿ 24.29 ಶತಕೋಟಿಗೆ ಏರಿದ ನಂತರ ಏರುತ್ತಿರುವ ಕಚ್ಚಾ ತೈಲ ಬೆಲೆಗಳು ನಿವ್ವಳ ಆಮದುದಾರರ ವ್ಯಾಪಾರ ಕೊರತೆ ಮೇಲೆ ತೂಕವನ್ನು ಮುಂದುವರಿಸಬಹುದು,” ಎಂದು ವಿಶ್ಲೇಷಕರು ಹೇಳಿದ್ದಾರೆ.

“ಈ ಮಧ್ಯೆ ಅಮೆರಿಕದ ಫೆಡ್ ಜುಲೈನಲ್ಲಿ 75 ಬಿಪಿಎಸ್ ಅನ್ನು ಹೆಚ್ಚಿಸಲು ಸಿದ್ಧವಾಗಿರುವುದರಿಂದ ಸೆಂಟ್ರಲ್ ಬ್ಯಾಂಕ್​ಗಳ ಮಧ್ಯೆ ಬಡ್ಡಿದರದ ವ್ಯತ್ಯಾಸಗಳನ್ನು ಕಿರಿದಾಗಿಸುವುದು ಬಂಡವಾಳದ ಹೊರಹರಿವುಗಳನ್ನು ಹೆಚ್ಚಿಸಬಹುದು. ಇದು ಬಂಡವಾಳ ಖಾತೆ ಮೇಲೆ ಒತ್ತಡವನ್ನು ಸೇರಿಸುತ್ತದೆ. ನಷ್ಟವನ್ನು ನಿಗ್ರಹಿಸಲು ಆರ್‌ಬಿಐ ವಿದೇಶೀ ವಿನಿಮಯ ಮಾರುಕಟ್ಟೆಗಳಲ್ಲಿ ಮಧ್ಯಪ್ರವೇಶಿಸಬಹುದಾದರೂ ಮೂಲಭೂತ ಅಂಶಗಳು ದುರ್ಬಲವಾಗಿರುವುದರಿಂದ ದೊಡ್ಡ ಬದಲಾವಣೆ ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ ಯುಎಸ್​ಡಿ 110ರ ಸಮೀಪದಲ್ಲಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯ 30-ಷೇರುಗಳ ಗುಚ್ಛ ಬಿಎಸ್​ಇ ಸೆನ್ಸೆಕ್ಸ್ 500 ಪಾಯಿಂಟ್‌ಗಳಷ್ಟು ಇಳಿಕೆಯಲ್ಲಿ ವಹಿವಾಟು ನಡೆಸುತ್ತಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ಅವರು ಷೇರು ವಿನಿಮಯದ ಮಾಹಿತಿಯ ಪ್ರಕಾರ ರೂ. 1,138.05 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.

ರೂಪಾಯಿ ಕುಸಿತವನ್ನು ತಡೆಯಲು ಸರ್ಕಾರವು ತೈಲ ರಫ್ತು ಮತ್ತು ಚಿನ್ನದ ಆಮದನ್ನು ಬಿಗಿಗೊಳಿಸಿದೆ. ಆದ್ದರಿಂದ ಚಿನ್ನದ ಮೇಲೆ ಆಮದು ತೆರಿಗೆಗಳನ್ನು ಹೆಚ್ಚಿಸಿತು, ಆದರೆ ವೇಗವಾಗಿ ಹೆಚ್ಚುತ್ತಿರುವ ಕರೆನ್ಸಿ ಕೊರತೆಯನ್ನು ನಿಯಂತ್ರಿಸಲು ಪೆಟ್ರೋಲ್ ಮತ್ತು ಡೀಸೆಲ್ ರಫ್ತುಗಳ ಮೇಲಿನ ಸುಂಕಗಳನ್ನು ಹೆಚ್ಚಿಸಿತು. ಈ ಕ್ರಮಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳನ್ನು ಶೇ 5ಕ್ಕಿಂತ ಹೆಚ್ಚು ಕುಸಿತಕ್ಕೆ ಕಾರಣವಾದವು. ಕರೆನ್ಸಿಯ ಕುಸಿತವನ್ನು ತಮಣಿ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಹೋರಾಡುತ್ತಿದೆ. ಜೂನ್ 30ರ ಸೂಚನೆಯ ಪ್ರಕಾರ, ಸರ್ಕಾರವು ಶುಕ್ರವಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 7.5ರಿಂದ ಶೇ 12.5​​ಕ್ಕೆ ಏರಿಸಿದೆ.

ಇದನ್ನೂ ಓದಿ: INR USD Exchange Rate: ಜೂನ್ 28ಕ್ಕೆ ಅಮೆರಿಕ ಡಾಲರ್ ಸೇರಿದಂತೆ ಯಾವ ದೇಶದ ವಿರುದ್ಧ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ?

Published On - 1:24 pm, Fri, 1 July 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!