ಪೆಪ್ಸಿ, ಮೆಕ್ಡೊನಾಲ್ಡ್, ಕೆಎಫ್ಸಿ ಬಾಯ್ಕಾಟ್ ಮಾಡಿ; ಅಮೆರಿಕಾ ತತ್ತರಿಸುವಂತೆ ಮಾಡಿ: ಬಾಬಾ ರಾಮದೇವ್
Baba Ramdev asks Indians to boycott US companies' products: ಯೋಗ ಗುರು ಬಾಬಾ ರಾಮದೇವ್ ಅವರು, ಭಾರತದಲ್ಲಿ ಅಮೆರಿಕನ್ ಉತ್ಪನ್ನಗಳನ್ನು ಜನರು ಬಾಯ್ಕಾಟ್ ಮಾಡಲಿ ಎಂದು ಕರೆ ನೀಡಿದ್ದಾರೆ. ಪೆಪ್ಸಿ, ಕೋಕಾ ಕೋಲಾ, ಮೆಕ್ಡೊನಾಲ್ಡ್ಸ್, ಸಬ್ವೇ ಕೌಂಟರ್ಗಳಿಗೆ ಜನರು ಹೋಗುವುದನ್ನು ನಿಲ್ಲಿಸಿದರೆ ಅಮೆರಿಕ ವಿಚಲಿತಗೊಳ್ಳುತ್ತದೆ ಎಂದಿದ್ದಾರೆ. ಅಮೆರಿಕ ಸರ್ಕಾರ ನಿನ್ನೆಯಿಂದ (ಆಗಸ್ಟ್ 27) ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಆಮದುಸುಂಕ ವಿಧಿಸುತ್ತಿದೆ.

ನವದೆಹಲಿ, ಆಗಸ್ಟ್ 28: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ (US tariffs) ವಿಧಿಸಿರುವ ಅಮೆರಿಕದ ಕ್ರಮವನ್ನು ದಬ್ಬಾಳಿಕೆ, ಬೆದರಿಕೆ, ಸರ್ವಾಧಿಕಾರ ಪ್ರವೃತ್ತಿ ಎಂದು ಯೋಗ ಗುರು ಬಾಬಾ ರಾಮದೇವ್ (Baba Ramdev) ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕನ್ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಭಾರತೀಯರಿಗೆ ಕರೆ ನೀಡಿದ್ದಾರೆ. ಭಾರತದಲ್ಲಿ ಪೆಪ್ಸಿ, ಕೋಕಾ ಕೋಲಾ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಮತ್ತಿತರ ಅಮೆರಿಕನ್ ಕಂಪನಿಗಳ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿದಲ್ಲಿ ಅಮೆರಿಕ ದೇಶ ತತ್ತರಿಸುತ್ತದೆ ಎಂದು ಪತಂಜಲಿ ಸಂಸ್ಥೆಯ ಸಹ-ಸಂಸ್ಥಾಪಕರಾದ ರಾಮದೇವ್ ಅಭಿಪ್ರಾಯಪಟ್ಟಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಿದ್ದ ಬಾಬಾ ರಾಮದೇವ್, ಅಮೆರಿಕದ ಶೇ. 50 ಟ್ಯಾರಿಫ್ ಹೇರಿಕೆಗೆ ಪ್ರತಿಯಾಗಿ ಎಲ್ಲಾ ಅಮೆರಿಕನ್ ಉತ್ಪನ್ನ ಮತ್ತು ಕಂಪನಿಗಳನ್ನು ಬಾಯ್ಕಾಟ್ ಮಾಡಬೇಕು. ಆಗ ಟ್ರಂಪ್ ಟ್ಯಾರಿಫ್ ವಾಪಸ್ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದ ಟ್ಯಾರಿಫ್ ಹೊಡೆತ ತಪ್ಪಿಸಲು ಯತ್ನ; 40 ದೇಶಗಳ ಮಾರುಕಟ್ಟೆಗಳತ್ತ ಭಾರತ ಚಿತ್ತ
‘ಭಾರತದ ವಿರುದ್ಧ ಸೆಟೆದು ನಿಂತು ಟ್ರಂಪ್ ಘೋರ ತಪ್ಪು ಮಾಡಿದ್ದಾರೆ. ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್ಸಿ, ಮೆಕ್ಡೊನಾಲ್ಡ್ಸ್ ಅನ್ನು ಯಾರೂ ಖರೀದಿಸಬಾರದು. ವ್ಯಾಪಕವಾಗಿ ಬಾಯ್ಕಾಟ್ ನಡೆಯಬೇಕು. ಇದೇನಾದರೂ ಆದಲ್ಲಿ ಅಮೆರಿಕದಲ್ಲಿ ಗಲಿಬಿಲಿಯಾಗುತ್ತದೆ. ಅಲ್ಲಿ ಹಣದುಬ್ಬರ ಹೆಚ್ಚಳಗೊಂಡು ಟ್ರಂಪ್ ಸರಿದಾರಿಗೆ ಬರುವಂತಾಗುತ್ತದೆ’ ಎಂದು ಬಾಬಾ ರಾಮದೇವ್ ವಿವರಿಸಿದ್ದಾರೆ.
ಭಾರತದ ಮೇಲೆ ಡಬಲ್ ಟ್ಯಾರಿಫ್ ಹಾಕಲು ಏನು ಕಾರಣ?
ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕುವುದರ ಹಿಂದೆ ಎರಡು ಸ್ಪಷ್ಟ ಕಾರಣಗಳು ಕಾಣಿಸುತ್ತಿವೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಮಾತ್ರವಲ್ಲ, ಬಹುತೇಕ ಎಲ್ಲಾ ದೇಶಗಳ ಮೇಲೆ ಮೂಲ ತೆರಿಗೆಯನ್ನು ಹಾಕಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡ ದೇಶಗಳಿಗೆ ಕಡಿಮೆ ಟ್ಯಾರಿಫ್ ಹಾಕಿದ್ದಾರೆ. ಒಪ್ಪಂದ ಮಾಡಿಕೊಳ್ಳದೇ ಇರುವ ದೇಶಗಳಿಗೆ ಅಧಿಕ ಟ್ಯಾರಿಫ್ ಹಾಕಿದ್ದಾರೆ.
ಇದನ್ನೂ ಓದಿ: 2038ಕ್ಕೆ ಆರ್ಥಿಕ ಶಕ್ತಿಯಲ್ಲಿ ಅಮೆರಿಕವನ್ನೇ ಮೀರಲಿಸದೆ ಭಾರತ: ಐಎಂಎಫ್ ಅಂದಾಜು
ರಷ್ಯನ್ ತೈಲ ಖರೀದಿಸುತ್ತಿದೆ ಎನ್ನುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿ ಟ್ಯಾರಿಫ್ ಹಾಕಲಾಗಿದೆ. ಇವೆರಡೂ ಸೇರಿ ಒಟ್ಟಾರೆ ಶೇ. 50ರಷ್ಟು ಟ್ಯಾರಿಫ್ ಭಾರತೀಯ ಉತ್ಪನ್ನಗಳ ಮೇಲೆ ಹಾಕಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




