ವಿಪ್ರೋ, ಐಐಎಸ್ಸಿದಿಂದ ಸ್ವಯಂಚಾಲಿತ ಕಾರಿನ ಪ್ರೋಟೋಟೈಪ್; ಆರ್ವಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಸುತ್ತಿದ ಡ್ರೈವರ್ಲೆಸ್ ಕಾರು
RV College of Engineering sees driverless car running in its campus: ವಿಪ್ರೋ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಜಂಟಿಯಾಗಿ ಡ್ರೈವರ್ಲೆಸ್ ಕಾರನ್ನು ಅಭಿವೃದ್ಧಿಪಡಿಸಿವೆ. ಈ ಕಾರಿನ ಪ್ರೋಟೋಟೈಪ್ ಅನಾವರಣಗೊಂಡ ಸುದ್ದಿ ಕೇಳಿಬಂದಿದೆ. ಉತ್ತರಾದಿಮಠದ ಸ್ವಾಮೀಜಿ ಕೂತಿದ್ದ ಈ ಪ್ರೋಟೋಟೈಪ್ ಕಾರು ಆರ್ವಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಸುತ್ತಾಡಿತು.

ಬೆಂಗಳೂರು, ಅಕ್ಟೋಬರ್ 28: ಆರು ವರ್ಷಗಳ ಪರಿಶ್ರಮ ಫಲ ಕೊಟ್ಟಂತಿದೆ. ಬೆಂಗಳೂರಿನ ಆರ್ವಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಡ್ರೈವರ್ಲೆಸ್ ಕಾರು ಅಥವಾ ಸ್ವಯಂಚಾಲಿತ ಕಾರಿನ (driverless car) ಪ್ರೋಟೋಟೈಪ್ ಅನ್ನು ಅನಾವರಣಗೊಳಿಸಲಾಗಿದೆ. ವಿಪ್ರೋ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಆರ್ವಿ ಎಂಜಿನಿಯರಿಂಗ್ ಕಾಲೇಜುಗಳ (RV College of Engineering) ಸಹಯೋಗದಲ್ಲಿ ಈ ಪ್ರೋಟೋಟೈಪ್ ಕಾರನ್ನು ನಿರ್ಮಿಸಲಾಗಿದೆ.
ಮೈಸೂರು ರಸ್ತೆಯಲ್ಲಿರುವ ಆರ್ವಿ ಕಾಲೇಜು ಕ್ಯಾಂಪಸ್ನಲ್ಲಿ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮಿಗಳು ಈ ಡ್ರೈವರ್ಲೆಸ್ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇದರ ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ನಿನ್ನೆ (ಅಕ್ಟೋಬರ್ 27) ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಖುಷಿ; ಟರ್ಮ್ಸ್ ಆಫ್ ರೆಫರೆನ್ಸ್ ಜಾರಿ, ಗ್ರಾಚುಟಿ ಮಿತಿ ಹೆಚ್ಚಳ
ಈ ಡ್ರೈವರ್ಲೆಸ್ ಪ್ರೋಟೋಟೈಪ್ ಕಾರನ್ನು ಅನಾವರಣಗೊಳಿಸಿರುವ ಬಗ್ಗೆ ಐಐಎಸ್ಸಿಯಿಂದಾಗಲೀ, ವಿಪ್ರೋ ಸಂಸ್ಥೆಯಿಂದಾಗಲೀ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ಆರ್ವಿ ಎಂಜಿನಿಯರಿಂಗ್ ಕಾಲೇಜು ವತಿಯಿಂದಲೂ ಪತ್ರಿಕಾ ಹೇಳಿಕೆ ಬಂದಿಲ್ಲ. ಈ ಪ್ರೋಟೋಟೈಪ್ ಇನ್ನೂ ಪ್ರಾಯೋಗಿಕ ಹಂತದಲ್ಲಿ ಇರುವ ಸಾಧ್ಯತೆ ಇಲ್ಲದಿಲ್ಲ.
ಎಕ್ಸ್ನಲ್ಲಿ ಬಂದ ಪೋಸ್ಟ್
Sri Sri Satyatmateertha Swamiji of Uttaradimath travelling in Driverless Car At RV College.Projected Funded by Wipro Engineering,Jointly Developed By Wipro,IISc & RV College Of Engineering Bengaluru…🙂👌👏 Superb Technology. 🤘@anandmahindra @elonmusk @nikhilkamathcio . pic.twitter.com/m3khFWgEQU
— Adarsh Hegde (@adarshahgd) October 27, 2025
ಡ್ರೈವರ್ಲೆಸ್ ಕಾರು ಅಭಿವೃದ್ಧಿಗೆ 2019ರಲ್ಲೇ ಕೈಜೋಡಿಸಿದ್ದ ವಿಪ್ರೋ ಮತ್ತು ಐಐಎಸ್ಸಿ
2019ರಲ್ಲಿ ವಿಪ್ರೋ ಸಂಸ್ಥೆಯು ಆಟೊನೊಮಸ್ ಸಿಸ್ಟಮ್ಸ್, ರೋಬೋಟಿಕ್ಸ್ ಮತ್ತು 5ಜಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಐಐಎಸ್ಸಿ ಜೊತೆ ಕೈಜೋಡಿಸಿತ್ತು. ವಿಪ್ರೋ ಐಐಎಸ್ಸಿ ರಿಸರ್ಚ್ ಅಂಡ್ ಇನ್ನೋವೇಶನ್ ನೆಟ್ವರ್ಕ್ (WIRIN) ಅನ್ನು ವಿಪ್ರೋ ಸ್ಥಾಪಿಸಿತು. ಎಐ, ಮೆಷಿನ್ ಲರ್ನಿಂಗ್, ವಿಷುವಲ್ ಕಂಪ್ಯೂಟಿಂಗ್, ಎಚ್ಸಿಐ, ವೆಹಿಕಲ್ ಟು ಎವಿರಿಥಿಂಗ್ ಕಮ್ಯೂನಿಕೇಶನ್ ಇತ್ಯಾದಿ ತಂತ್ರಜ್ಞಾನಗಳ ಮೇಲೆ ಗಮನ ಹರಿಸಲಾಗಿದೆ.
ಇದನ್ನೂ ಓದಿ: ಎಸ್ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್ಎಎಲ್ನಿಂದ ಒಪ್ಪಂದ
ಸಂಪೂರ್ಣ ಹೊಸದಾಗಿ ಸಿದ್ಧವಾಗಿರುವ ಡ್ರೈವರ್ಲೆಸ್ ಕಾರು…
ವಿಪ್ರೋ ಸಂಸ್ಥೆಯು ಕೆಲ ಜಾಗತಿಕ ಡ್ರೈವರ್ಲೆಸ್ ಕಾರು ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡ ಅನುಭವ ಇದೆ. 2019ರಲ್ಲಿ WIRIN ಸ್ಥಾಪಿಸಿದಾಗ ಭಾರತದಲ್ಲೂ ಡ್ರೈವರ್ಲೆಸ್ ಕಾರನ್ನು ನಿರ್ಮಿಸುವ ಗುರಿ ಹೊಂದಿತ್ತು. ಆದರೆ, ಈಗಾಗಲೇ ರೂಪಿತವಾದ ವಿನ್ಯಾಸ ಬಿಟ್ಟು ಸಂಪೂರ್ಣ ಹೊಸದಾಗಿ ಡಿಸೈನ್ ಮಾಡಲಾಗಿದೆ. ಭಾರತದ ರಸ್ತೆಗಳ ನಡುವೆ ಡ್ರೈವರ್ಲೆಸ್ ಕಾರುಗಳು ಸಾಗಲು ಎದುರಾಗುವ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರನ್ನು ನಿರ್ಮಿಸಲಾಗಿದೆ. 2020ರಲ್ಲೇ ಪ್ರೋಟೋಟೈಪ್ ಬರುವ ನಿರೀಕ್ಷೆ ಇತ್ತು. ನಾಲ್ಕೈದು ವರ್ಷ ವಿಳಂಬವಾದರೂ ಆಗಮಿಸಿದೆ. ಈ ಪ್ರಾಜೆಕ್ಟ್ನಲ್ಲಿ ಆರ್ವಿ ಎಂಜಿನಿಯರಿಂಗ್ ಕಾಲೇಜು ಕೂಡ ಕೈಜೋಡಿಸಿದೆ. ಕಾಲೇಜಿನ ವಿದ್ಯಾರ್ಥಿಗಳೂ ಕೂಡ ಈ ಪ್ರಾಜೆಕ್ಟ್ನಲ್ಲಿ ಭಾಗಿಯಾಗಿರುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




