AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dunzo: ಬೆಂಗಳೂರಿನ ಡುಂಜೋದಿಂದ ವಿಭಿನ್ನ ರೀತಿಯಲ್ಲಿ ಸ್ಯಾಲರಿ ಕಟ್; ಸಂಬಳ ಮಿತಿ 75,000 ರೂ

Salary Cut: ಈ ವರ್ಷ ಎರಡು ಬಾರಿ ಉದ್ಯೋಗಕಡಿತ ಮಾಡಿದ್ದ ಡುಂಜೋ ಸಂಸ್ಥೆ ಇದೀಗ ಜೂನ್ ತಿಂಗಳಿಗೆ ಉದ್ಯೋಗಿಗಳ ಸಂಬಳಕಡಿತಗೊಳಿಸಿದೆ. ಸಂಬಳಮಿತಿ 75,000 ರೂ ಎಂದು ನಿಗದಿ ಮಾಡಿ ಸಂಬಳಕಡಿತ ಮಾಡಲಾಗಿದೆ.

Dunzo: ಬೆಂಗಳೂರಿನ ಡುಂಜೋದಿಂದ ವಿಭಿನ್ನ ರೀತಿಯಲ್ಲಿ ಸ್ಯಾಲರಿ ಕಟ್; ಸಂಬಳ ಮಿತಿ 75,000 ರೂ
ಡುಂಜೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 12, 2023 | 4:23 PM

ನವದೆಹಲಿ: ರಿಲಾಯನ್ಸ್ ಬೆಂಬಲಿತ ಡುಂಜೋ ಸಂಸ್ಥೆ (Dunzo) ತನ್ನ ಹಣಕಾಸು ಸಂಕಷ್ಟ ಸರಿಪಡಿಸುವ ನಿಟ್ಟಿನಲ್ಲಿ ವೇತನಕಡಿತಕ್ಕೆ (Salary Cut) ಕೈಹಾಕಿದೆ. ಆದರೆ, ಎಲ್ಲರಿಗೂ ಏಕ ರೀತಿಯಲ್ಲಿ ವೇತನ ಕಡಿತ ಮಾಡದೇ ಹೆಚ್ಚಿನ ಸಂಬಳದಾರರನ್ನು ಮಾತ್ರ ಗುರಿ ಮಾಡಲಾಗಿದೆ. ಮನಿಕಂಟ್ರೋಲ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಡುಂಜೋದಲ್ಲಿ ಯಾರೇ ಉದ್ಯೋಗಿಗಳಾಗಿದ್ದರೂ ಸಂಬಳಮಿತಿ (Salary Cap) 75,000 ರೂ ಎಂದು ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದವರಿಗೆ ಸಂಬಳಕಡಿತವಾಗಲಿದೆ. 75,000 ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವವರಿಗೆ ಯಾವುದೇ ಕಡಿತ ಇರುವುದಿಲ್ಲ. ಆದರೆ, ಈ ಕ್ರಮ ಕೇವಲ ತಾತ್ಕಾಲಿಕ ಮಾತ್ರ. ತುರ್ತು ಹಣಕಾಸು ಸಂಕಷ್ಟ ಎದುರಿಸಲು ಡುಂಜೋ ಸಂಬಳಮಿತಿ ನಿರ್ಧಾರ ಕೈಗೊಂಡಿದೆ.

ವರದಿಯ ಪ್ರಕಾರ, ಶೇ. 50ರಷ್ಟು ಸಿಬ್ಬಂದಿಗೆ, ಅಂದರೆ 500 ಮಂದಿಗೆ ಮಾತ್ರ ಸಂಬಳಕಡಿತ ಇರಲಿದೆ. ಇದು ಜೂನ್ ತಿಂಗಳ ಸಂಬಳಕ್ಕೆ ಮಾತ್ರ ಆಗುವ ಕಡಿತ. ಆದರೆ, ಸಂಬಳಕಡಿತಗೊಂಡವರು ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಜುಲೈ 20ರೊಳಗೆ ಬಾಕಿ ಸಂಬಳವೆಲ್ಲವೂ ಜಮೆ ಆಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿCess: ಎಸ್​ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್​ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್​ಯುವಿ ಕಾರುಗಳು?

ಸಂಬಳಕಡಿತವಾದವರಲ್ಲಿ ಎಲ್ಲರೂ ಹಿರಿಯ ಉದ್ಯೋಗಿಗಳೇ. ಈ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸಿಬ್ಬಂದಿಗೂ ಮುಂಚಿತವಾಗಿ ತಿಳಿಸಿರಲಿಲ್ಲ. ಸಂಬಳ ಪಡೆಯುವ ದಿನದಂದು ಮಾತ್ರವೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವರದಿಗಳ ಪ್ರಕಾರ ಡುಂಜೋ ಸಂಬಳಕಡಿತದ ನಿರ್ಧಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದ್ದು. ಸಂಬಳದ ದಿನ ಸಮೀಪಿಸುತ್ತಿರುವಂತೆಯೇ ವ್ಯವಹಾರ ಉದ್ದೇಶಕ್ಕೆ ತುರ್ತಾಗಿ ಹಣ ಬೇಕಕದ್ದರಿಂದ ಕಂಪನಿ ಅನಿವಾರ್ಯವಾಗಿ ಸಂಬಳಕಡಿತಕ್ಕೆ ಕೈಹಾಕಿದ್ದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಡುಂಜೋ ಸಂಸ್ಥೆ ಆನ್​ಲೈನ್ ಆರ್ಡರ್ ಪಡೆದು ಮನೆಮನೆಗೆ ವಿವಿಧ ವಸ್ತುಗಳನ್ನು ಡೆಲಿವರಿ ಮಾಡುತ್ತದೆ. ಕೊರಿಯರ್, ಲಾಂಡ್ರಿ, ಔಷಧಿ ಇತ್ಯಾದಿಯನ್ನೂ ಡೆಲಿವರ್ ಮಾಡುತ್ತದೆ. ಬೆಂಗಳೂರಷ್ಟೇ ಅಲ್ಲದೇ ದೆಹಲಿ, ಗುರುಗ್ರಾಮ್, ಪುಣೆ, ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲೂ ಡುಂಜೋ ಕಾರ್ಯನಿರತವಾಗಿದೆ. ಗುರುಗ್ರಾಮ್​ನಲ್ಲಿ ಡುಂಜೋದಿಂದ ಬೈಕ್ ಟ್ಯಾಕ್ಸಿಯೂ ಇದೆ. 2022ರಲ್ಲಿ ರಿಲಾಯನ್ಸ್ ರೀಟೇಲ್ 240 ಮಿಲಿಯನ್ ಡಾಲರ್ ಮೊತ್ತಕ್ಕೆ ಡುಂಜೋದಲ್ಲಿ ಶೇ. 25.8ರಷ್ಟು ಪಾಲು ಖರೀದಿಸಿದೆ.

ಇಷ್ಟಾದರೂ ಡುಂಜೋಗೆ ನಿರೀಕ್ಷಿತ ಆದಾಯ ಬರದೇ ಹಣಕಾಸು ಸಂಕಷ್ಟ ಮುಂದುವರಿದಿದೆ. ಈ ವರ್ಷ ಎರಡು ಸುತ್ತುಗಳಲ್ಲಿ ಅದು ಉದ್ಯೋಗಿಗಳ ಲೇ ಆಫ್ ಮಾಡಿದೆ. ಒಟ್ಟು 380 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 12 July 23

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ