Duologue with Barun Das; ಮಾಧ್ಯಮ ಪ್ರವರ್ತಕ ಡಾ. ಸುಭಾಷ್ ಚಂದ್ರ ಬದುಕಿನ ಅನಾವರಣ

| Updated By: Ganapathi Sharma

Updated on: Jan 09, 2023 | 5:05 PM

ಇವರು ಸ್ವತಂತ್ರ ಚಿಂತನೆಯ ಉದ್ಯಮಿ. ಆರ್​ಎಸ್​ಎಸ್ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದ, ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಪರಿಣಾಮಕಾರಿತ್ವದ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ದಿಟ್ಟ ವ್ಯಕ್ತಿ. ಹಿಂದೊಮ್ಮೆ ತಾವೇ ಸ್ಥಾಪಿಸಿದ್ದ, ಸದ್ಯ ಕೈಜಾರಿಹೋಗಿರುವ ಝೀಲ್ ಕಂಪನಿಯ ಶೇಕಡಾ 25ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಎದುರುನೋಡುತ್ತಿರುವ ಇವರು ಸದಾ ಭರವಸೆ ಹೊಂದಿರುವ, ಛಲವಾದಿ ಉದ್ಯಮಿ.

Duologue with Barun Das; ಮಾಧ್ಯಮ ಪ್ರವರ್ತಕ ಡಾ. ಸುಭಾಷ್ ಚಂದ್ರ ಬದುಕಿನ ಅನಾವರಣ
‘ಡ್ಯುಯಲಾಗ್ ವಿದ್ ಬರುಣ್ ದಾಸ್’ನಲ್ಲಿ ಬರುಣ್ ದಾಸ್ ಮತ್ತು ಡಾ. ಸುಭಾಷ್​ ಚಂದ್ರ
Follow us on

ನೊಯ್ಡಾ: ಡಾ. ಸುಭಾಷ್​ ಚಂದ್ರ ಹಲವು ಹೊರೆಯನ್ನು ಹೊತ್ತವರು! ಅವರನ್ನು ಪ್ರೀತಿಸುವವರಿಗೇ ಇರಲಿ ದ್ವೇಷಿಸುವವರಿಗೇ ಇರಲಿ ಅತ್ಯಂತ ನಿಗೂಢ ವ್ಯಕ್ತಿ. ಭಾರತದಲ್ಲಿ ಖಾಸಗಿ ಟಿವಿ ಸ್ಥಾಪಿಸಿದ ಮೊದಲಿಗರಾಗಿ ಗುರುತಿಸಿಕೊಂಡ ಸುಭಾಷ್ ಚಂದ್ರ (Dr Subhash Chandra)  ‘ಡ್ಯುಯಲಾಗ್ ವಿದ್ ಬರುಣ್ ದಾಸ್’ನಲ್ಲಿ (Duologue with Barun Das) ಮಾತ್ರ ಮುಕ್ತವಾಗಿ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ತಮ್ಮ ರಾಜಕೀಯ, ಉದ್ಯಮ ಅಥವಾ ಮಾನವ ಸಂಪನ್ಮೂಲ ನಿರ್ವಹಣೆ ಬಗ್ಗೆ ಡಾ. ಚಂದ್ರ ಅವರು ಬರುಣದ್ ದಾಸ್ ಜತೆ ಈವರೆಗಿನ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹಿಂದೊಮ್ಮೆ ಜಗತ್ತು ಮಾಧ್ಯಮದ ದೊರೆ ಎಂದು ಬಣ್ಣಿಸಿದ್ದ ಚಂದ್ರ ಅವರು ಇಲ್ಲಿ ಮುಕ್ತವಾಗಿ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ.

ತಮ್ಮದೇ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸ್ತುತ ಟಿವಿ9 ಸಮೂಹದ ಸಿಇಒ ಆಗಿರುವ ಬರುಣ್ ದಾಸ್ ಜತೆ ಅಂತರಾಳವನ್ನು ತೆರೆದಿಟ್ಟಿರುವ ಡಾ. ಚಂದ್ರ, ಅಕ್ಕಿ ರಫ್ತುದಾರನಾಗಿ ಉದ್ಯಮ ಆರಂಭಿಸಿದ ದಿನಗಳಿಂದ ತೊಡಗಿ ಇಲ್ಲಿವರೆಗಿನ ಸುದೀರ್ಘ ಪಯಣದ ಬಗ್ಗೆ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಮಾಧ್ಯಮ ಮತ್ತು ಮನರಂಜನೆಯ ದೃಷ್ಟಿಕೋನ ಹೊಂದಿರುವ ಚಿಂತಕ ನಾಯಕನನ್ನು ‘ಡ್ಯುಯಲಾಗ್ ವಿದ್ ಬರುಣ್ ದಾಸ್’ ಹಿಂದೆಂದಿಗಿಂತಲೂ ಚೆನ್ನಾಗಿ ಅನಾವರಣಗೊಳಿಸಿದೆ.

ಇತ್ತೀಚಿನ ಚುನಾವಣೆ ಸೋಲಿನ ಬಗ್ಗೆ ‘ಡ್ಯುಯಲಾಗ್ ವಿದ್ ಬರುಣ್ ದಾಸ್’ನಲ್ಲಿ ಮಾತನಾಡಿದಾಗ ಅವರೊಬ್ಬ ತತ್ವಜ್ಞಾನಿಯಂತೆಯೇ ಕಂಡುಬಂದರು.

ಈ ಒಳನೋಟವುಳ್ಳ ಸಂಭಾಷಣೆಯು ಹರಿಯಾಣ ಮೂಲದ ಉದ್ಯಮಿಯ ಅಸಂಖ್ಯಾತ ಅಪ್ರಕಟಿತ ಭಾವನೆಗಳನ್ನು ಸೂಕ್ಷ್ಮವಾಗಿ ಎಳೆಎಳೆಯಾಗಿ ಬಿಡಿಸಿಟ್ಟಿದೆ.

ಸೃಷ್ಟಿಕರ್ತನೂ ವಿನಾಶಗೊಳಿಸಿದವರೂ ಹೌದೆಂದು ಬಣ್ಣಿಸಿದಾಗ ಡಾ. ಚಂದ್ರ ಅವರು ಅದೊಂದು ಅಭಿನಂದನೆ ಎಂಬಂತೆ ಸ್ವೀಕರಿಸಿ ಮುಗುಳ್ನಗುತ್ತಾರೆ. ‘ಡ್ಯುಯಲಾಗ್ ವಿದ್ ಬರುಣ್ ದಾಸ್’ ಕಾರ್ಯಕ್ರಮವು ಉದ್ಯಮಿಯಾಗಿ ಡಾ. ಚಂದ್ರ ಅವರ ವ್ಯಕ್ತಿತ್ವದ ಪರಾಮರ್ಶೆ ನಡೆಸಿದೆ. ವಿಶೇಷವಾಗಿ, ಮಾನವ ಸಂಪನ್ಮೂಲವನ್ನು ಅವರು ನಿರ್ವಹಿಸಿದ ಬಗೆ, ಒಳ್ಳೆಯ ಅಥವಾ ಕೆಟ್ಟ ಕಾರಣಗಳಿಗಾಗಿ ನಾಯಕತ್ವದಂಥ ಉನ್ನತ ಹುದ್ದೆಯಲ್ಲಿದ್ದವರು ಕಂಪನಿಯಿಂದ ನಿರ್ಗಮಿಸಿದ ಸಂದರ್ಭಗಳಲ್ಲಿ ಸುದ್ದಿಯಾದ ಸಂದರ್ಭಗಳ ವಿಶ್ಲೇಷಣೆ ನಡೆಸಿದೆ.

ರಾಜಕೀಯದೊಂದಿಗಿನ ಪಯಣ, ‘ಈಡಿಯಟ್ ಬಾಕ್ಸ್​​’ ಜತೆಗಿನ ಪ್ರೀತಿ, ನೇಮಕಾತಿಗೆ ಸಂಬಂಧಿಸಿದ ಕೆಲವೊಂದು ಕೆಟ್ಟ ನಿರ್ಧಾರಗಳಿಂದ ದಣಿಯುವಂತಾದ ಸಂದರ್ಭಗಳು, ಜಪಾನ್​ನ ಸೋನಿ ಜತೆಗಿನ ಪ್ರೀತಿ ಇವುಗಳೆಲ್ಲದರ ಬಗ್ಗೆ ಡಾ. ಚಂದ್ರ ಮನಬಿಚ್ಚಿ ಮಾತನಾಡಿದ್ದಾರೆ. ಝೀಲ್ ಮೇಲಿನ ನಿಯಂತ್ರಣ ಕಳೆದುಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಅಷ್ಟೇ ಶಾಂತವಾಗಿ, ‘ನಾನಿನ್ನೂ ಕಂಪನಿ’ ಮೇಲಿನ ಭರವಸೆ ಕೈಬಿಟ್ಟಿಲ್ಲ ಎನ್ನುತ್ತಾರೆ.

ಝೀಲ್ ಸ್ವಾಧೀನದ ವಿಚಾರ ಪ್ರಸ್ತಾಪವಾದ ಸಂದರ್ಭದಲ್ಲಿ ಬರುಣ್ ಕಡೆ ತಿರುಗಿ ನೋಡಿದ ಡಾ. ಚಂದ್ರ, ಝೀಯನ್ನು ಉಳಿಸಲು ಪ್ರಮಾಣಿಕ ಪ್ರಯತ್ನ ಮಾಡಿದವರನ್ನು ನೆನೆದು ಗದ್ಗದಿತರಾದರು. ಕಂಪನಿಯನ್ನು ಉಳಿಸಲು ಯತ್ನಿಸಿದ್ದವರನ್ನು ನೆನೆದು ಭಾವುಕರಾದರು. ಇದು ಗಮನ ಸೆಳೆದಿದೆ.

ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಕುರಿತಾದ ಪ್ರೀತಿ ಮತ್ತು ವಿರೋಧಗಳ ಬಗ್ಗೆ ‘ಡ್ಯುಯಲಾಗ್ ವಿದ್ ಬರುಣ್ ದಾಸ್’ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಡಾ. ಚಂದ್ರ, ದೇಶದ ರಾಜಕೀಯ ಸನ್ನಿವೇಶದ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದಾರೆ.

ಎಎಪಿ, ಅರವಿಂದ ಕೇಜ್ರಿವಾಲ್ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಸಬವಾಲೊಡ್ಡಲು ಮುಂದಾಗಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ಡಾ. ಚಂದ್ರ ಯಾವುದೇ ರೀತಿಯ ಹಿಂಜರಿಕೆ ಪ್ರದರ್ಶಿಸಲಿಲ್ಲ. ಅರವಿಂದ ಕೇಜ್ರಿವಾಲ್ ಮತ್ತು ಅವರ ಪಕ್ಷ ದೇಶಕ್ಕೆ ಏನಾದರೂ ಒಳಿತು ಮಾಡಲಿದೆ ಎಂಬ ಬಗ್ಗೆ ನನಗಂತೂ ಸಂದೇಹವಿದೆ ಎಂದು ಕಡ್ಡಿಮುರಿದಂತೆ ಹೇಳಿದರು.

ಮಾಧ್ಯಮಗಳ ಮೇಲೆ ಕಾರ್ಪೊರೇಟ್ ಹಿಡಿತದ (ಎನ್​ಡಿಟಿ ಮಾಲೀಕತ್ವ ಅದಾನಿ ಪಾಲಾದ ಉದಾಹರಣೆಯೊಂದಿಗೆ) ಕುರಿತು ಕೇಳಿದ ಪ್ರಶ್ನೆಗೆ, ಎನ್​ಡಿಟಿವಿ ಮಾಲೀಕತ್ವದ ಮೇಲೆ ಯಾವುದೇ ಬಲವಾದ ಟೀಕೆ ಮಾಡದೆಯೇ ಅವರು ನೇರ ಉತ್ತರ ನೀಡಿದರು.

‘ಡ್ಯುಯಲಾಗ್ ವಿದ್ ಬರುಣ್ ದಾಸ್’ ಎಂಬುದು ವೆಬ್​ ಸರಣಿಯಾಗಿದ್ದು, ಮೂರು ವೆಬಿಸೋಡ್​​ಗಳಲ್ಲಿ ಡಾ. ಸುಭಾಷ್ ಚಂದ್ರ ಅವರ ವ್ಯಕ್ತಿಚಿತ್ರಣವನ್ನು ಅನಾವರಣಗೊಳಿಸಿದೆ. ಅವುಗಳು ಹೀಗಿವ;

ಎಪಿಸೋಡ್ 1: ಸಹನಾಮಯಿ ನಿಗೂಢ ವ್ಯಕ್ತಿತ್ವದ ಅನಾವರಣ (An Enduring Enigma)
ಎಪಿಸೋಡ್ 2: ಉದ್ಯಮ ಜೀವನ (The Business of Life)
ಎಪಿಸೋಡ್ 3: ಸೃಷ್ಟಿಕರ್ತ ಮತ್ತು ವಿಧ್ವಂಸಕ (Creator & Destroyer)

‘ಡ್ಯುಯಲಾಗ್ ವಿದ್ ಬರುಣ್ ದಾಸ್’ ಜೀವಂತ ದಂಥಕತೆಗಳೊಂದಿಗಿನ ಮುಕ್ತ ಸಂವಾದ ಕಾರ್ಯಕ್ರಮ. ಶೀರ್ಷಿಕೆಯೇ ಸೂಚಿಸಿದಂತೆ ಇಬ್ಬರ ನಡುವಣ ಸಂವಾದ, ಸಂವಹನವಾಗಿದ್ದು, ವಿಚಾರಗಳ ವಿನಿಮಯವಾಗಿದೆ. ಇದು ಪ್ರಚೋದಿತ ಶೀರ್ಷಿಕೆಗಳಿಗಾಗಿ ನಡೆಸುವ ಸಂಭಾಷಣೆಯಲ್ಲ. ಬದಲಿಗೆ ಪ್ರಭಾವಶಾಲಿ ಸಂಭಾಷಣೆಗಳನ್ನೊಳಗೊಂಡಿದೆ.

ಎಪಿಸೋಡ್​ಗಳನ್ನು ನೋಡಲು, ನ್ಯೂಸ್​​9 ಪ್ಲಸ್ ಆ್ಯಪ್​ ಅನ್ನು ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಡೌನ್​ಲೋಡ್ ಮಾಡಿ; onelink.to/htmqpz

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Mon, 9 January 23