ಯುಎಸ್ ಸೇರಿದಂತೆ ಇಡೀ ಜಗತ್ತಿಗೆ ಆರ್ಥಿಕ ಸಂಕಷ್ಟ: ಆಘಾತಕಾರಿ ಭವಿಷ್ಯ ನುಡಿದ ಖ್ಯಾತ ಅರ್ಥಶಾಸ್ತ್ರಜ್ಱ

ಶೀಘ್ರದಲ್ಲಿಯೇ ಜಗತ್ತಿಗೆ ಭಾರಿ ದೊಡ್ಡ ಆರ್ಥಿಕ ಹಿಂಜರಿತದ ಬಗ್ಗೆ ಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರು ಸ್ಫೋಟಕ ಸುಳಿವು ಕೊಟ್ಟಿದ್ದಾರೆ.

ಯುಎಸ್ ಸೇರಿದಂತೆ ಇಡೀ  ಜಗತ್ತಿಗೆ ಆರ್ಥಿಕ ಸಂಕಷ್ಟ: ಆಘಾತಕಾರಿ ಭವಿಷ್ಯ ನುಡಿದ ಖ್ಯಾತ ಅರ್ಥಶಾಸ್ತ್ರಜ್ಱ
Nouriel Roubini, Image Credit source: Mint
Follow us
TV9 Web
| Updated By: Digi Tech Desk

Updated on:Sep 24, 2022 | 2:45 PM

ನವದೆಹಲಿ: ದೊಡ್ಡಣ್ಣ ಅಮೇರಿಕಾ ಸೇರಿದಂತೆ ಇಡೀ ಜಗತ್ತಿನಾದ್ಯಂತ ಶೀಘ್ರದಲ್ಲಿಯೇ ಆರ್ಥಿಕ ಸಂಕಷ್ಟದ ಕೆಟ್ಟ ಕಾಲ ಬರುವ ಸಾಧ್ಯತೆ ಇದೆ. ಹೀಗಂತ ಖ್ಯಾತ ಅರ್ಥ ಶಾಸ್ತ್ರಜ್ಞ ನೌರಿಯಲ್ ರೌಬಿನಿ (Nouriel Roubini) ಮತ್ತೊಮ್ಮೆ ಆಘಾತಕಾರಿ  ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಅಂದ್ರೆ 2008ರಲ್ಲಿ ತಲೆದೂರಿದ್ದ ಆರ್ಥಿಕ ಸಂಕಷ್ಟದ ಕುರಿತು ನಿಖರ ಭವಿಷ್ಯ ನುಡಿದಿದ್ದರು. ಈ ಆರ್ಥಿಕ ಹಿಂಜರಿತದ ಬಳಿಕ ವಿಶ್ವಾದ್ಯಂತ ಇರುವ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಅನುಭವಿಸಿದ್ದವು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ನೌರಿಯಲ್ ರೌಬಿನಿ ಅವರು ಈ ಆರ್ಥಿಕ ಸಂಕಷ್ಟದ ಎಚ್ಚರಿಕೆ ನೀಡಿದ್ದು, ಆತಂಕ ಮೂಡಿಸಿದೆ.

Cocid-19 ನಂತಹ ಮಾರಕ ಸಾಂಕ್ರಾಮಿಕ ರೋಗ ಮತ್ತು ಉಕ್ರೇನ್‌- ರಷ್ಯಾ ನಡುವಿನ ಕಾದಾಟ ಸೇರಿದಂತೆ ಹಲವು ಬ್ಯಾಕ್-ಟು ಬ್ಯಾಕ್ ಹೊಡೆತಗಳಿಂದ ಹಣದುಬ್ಬರ ಬಳಿಕ ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ್ದಾರೆ.

 ಇದನ್ನೂ ಓದಿ: ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ, ಆದರೂ ಭಾರತದ ಆರ್ಥಿಕತೆ ಸ್ಥಗಿತಗೊಂಡಿತು; ಇನ್​ಫೋಸಿಸ್ ನಾರಾಯಣಮೂರ್ತಿ ವಿಷಾದ

ಅಮೇರಿಕಾ ಹಾಗೂ ಜಾಗತಿಕ ಮಟ್ಟದಲ್ಲಿ ಈ ವರ್ಷಾಂತ್ಯಕ್ಕೆ ಆರ್ಥಿಕ ಹಿಂಜರಿತದ ಕಾಲ ಆರಂಭಗೊಳ್ಳಲಿದೆ. ಅಲ್ಲದೇ ಅದು 2023ರವರೆಗೆ ಮುಂದುವರೆಯಲಿದೆ . ಇದೊಂದು ದೀರ್ಘ ಕಾಲದ ಹಿಂಜರಿತವಾಗಿರಲಿದ್ದು, ವಿಶ್ವಾದ್ಯಂತದ ಆರ್ಥಿಕತೆಯಲ್ಲಿ ಭಾರಿ ಕುಸಿತವನ್ನು ಗಮನಿಸಬಹುದಾಗಿದೆ. ಅಲ್ಲದೇ, ಯುಎಸ್ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾಗಿರುವ ಸ್ಟ್ಯಾಂಡರ್ಡ್ ಮತ್ತು ಪೂವರ್ಸ್- 500 (S&P 500) ನಲ್ಲಿ ಭಾರಿ ನಷ್ಟ ಗಮನಿಸಬಹುದಾಗಿದೆ ಎಂದು ರೌಬಿನಿ ಉದಾಹರಣೆ ಕೊಟ್ಟಿದ್ದಾರೆ.

S&P-500 30% ರಷ್ಟು ಕುಸಿಯಬಹುದು. ಈ ಕುಸಿತ ಮುಂದುವರಿದರೆ, ಸೂಚ್ಯಂಕವು ಶೇ. 40 ರಷ್ಟು ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಎಂದು ನೌರಿಯಲ್ ರೌಬಿನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಸ್ತುತ ಹಣದುಬ್ಬರಕ್ಕೆ ಕಡಿವಾಣ ಹಾಕಲು US ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡ್ ರಿಸರ್ವ್ ತನ್ನ ಬಡ್ಡಿದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದಕ್ಕೆ ನೌರಿಯಲ್ ರೌಬಿನಿ ಅವರು ಫೆಡ್ ರಿಸರ್ವ್ ಬಳಿ ಬೇರೆ ಆಯ್ಕೆಗಳಿಲ್ಲ ಎಂದು ತೋರುತ್ತದೆ ಎಂದಿದ್ದಾರೆ. ಫೆಡರಲ್ ರಿಸರ್ವ್ ಶೇ.2 ರಷ್ಟು ಹಣದುಬ್ಬರ ದರವನ್ನು ಹಾರ್ಡ್ ಲ್ಯಾಂಡಿಂಗ್ ಇಲ್ಲದೆ ಪಡೆಯಲು ಅಸಾಧ್ಯ ಎಂಬಂತೆ ತೋರುತ್ತಿದೆ ಎಂದು ಅವರು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಫೆಡ್ ಬಡ್ಡಿದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಳವನ್ನು ರೌಬಿನಿ ನಿರೀಕ್ಷಿಸುತ್ತಾರೆ. ಅನೇಕ ಜೋಂಬಿ ಸಂಸ್ಥೆಗಳು, ಬ್ಯಾಂಕ್‌ಗಳು, ಕಾರ್ಪೊರೇಟ್‌ಗಳು, ಶ್ಯಾಡೋ ಬ್ಯಾಂಕ್‌ಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂಬ ಆಘಾತಕಾರಿ ಸುಳಿವು ಕೊಟ್ಟಿದ್ದಾರೆ.

ಪ್ರಸ್ತುತ ಇಡೀ ಜಗತ್ತು ಆರ್ಥಿಕ ಹಿಂಜರಿತದ ಕಪಿಮುಷ್ಠಿಗೆ ಸಿಲುಕಿಕೊಳ್ಳುತ್ತಿದೆ. ಆದರೂ ಕೂಡ ಸರ್ಕಾರಗಳಿಂದ ಯಾವುದೇ ಹಣಕಾಸಿನ ಉತ್ತೇಜಕ ಕ್ರಮಗಳ ನಿರೀಕ್ಷೆ ಇಲ್ಲ. ಈಗಾಗಲೇ ಬಹುತೇಕ ಸರ್ಕಾರಗಳು ಹೆಚ್ಚುವರಿ ಸಾಲದಲ್ಲಿ ನಡೆಯುತ್ತಿವೆ. ಈ ಪರಿಸ್ಥಿತಿಯನ್ನು 1970ರ ಪರಿಸ್ಥಿತಿಯಂತೆಯೇ ನೋಡುತ್ತಿರುವುದಾಗಿ ರೌಬಿನಿ ಹೇಳಿದ್ದಾರೆ.

ದೊಡ್ಡ ಪ್ರಮಾಣದ ಸಾಲದ ಕೊರತೆಯನ್ನು ಕಾಣಬಹುದು ಮತ್ತು ಇದು ಅಲ್ಪಕಾಲಾವಧಿಯ ಆರ್ಥಿಕ ಹಿಂಜರಿತವಾಗಿರುವುದಿಲ್ಲ. ಇದೊಂದು ತೀವ್ರ ಮತ್ತು ದೀರ್ಘಕಾಲದ ಹಿಂಜರಿತವಾಗಿರಲಿದೆ ಎಂದು ಎಂದಿದ್ದಾರೆ.

ಆರ್ಥಿಕ ಹಿಂಜರಿತದ ಬಗ್ಗೆ ಆಘತಕಾರಿ ಅಂಶಗಳನ್ನು ಬಿಚ್ಚಿಟ್ಟಿರುವ ಖ್ಯಾತ ಅರ್ಥಶಾಸ್ತ್ರಜ್ಱ ರೌಬಿನಿ ಅವರು ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ. ಈಕ್ವಿಟಿ ಮೇಲೆ ಹೆಚ್ಚು ಹೂಡಿಕೆ ಮಾಡದಿರಿ. ಹಣದುಬ್ಬರ ಹೆಚ್ಚಾದರೆ ಈಕ್ವಿಟಿ ಮೌಲ್ಯ ಕೆಲವೊಮ್ಮೆ ಶೇ.10, 20 30ರಷ್ಟು ಕುಸಿಯುವ ಸಾಧ್ಯತೆ ಇರುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

Published On - 2:38 pm, Sat, 24 September 22

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?