ಯಾರೇ ಅಧಿಕಾರಕ್ಕೆ ಬಂದರೂ ನಿಫ್ಟಿ ಕುಸಿಯುತ್ತದೆ: ವಾಸ್ತವ ಬಿಚ್ಚಿಟ್ಟ ಷೇರುಮಾರುಕಟ್ಟೆ ಉದ್ಯಮಿ

|

Updated on: May 20, 2024 | 4:32 PM

SALCO Mutual fund CEO Viraj Gandhi: ಜೂನ್ 4ರಿಂದ ಷೇರು ಮಾರುಕಟ್ಟೆ ಭರ್ಜರಿಯಾಗಿ ಬೆಳೆಯುತ್ತೆ. ಅಷ್ಟರೊಳಗೆ ಷೇರು ಖರೀದಿಸಿ ಇಟ್ಟುಕೊಳ್ಳಿ ಎಂದು ಅಮಿತ್ ಶಾ ಹೇಳಿದ್ದರು. ಪ್ರಧಾನಿ ಮೋದಿ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಆದರೆ, ಮಾರುಕಟ್ಟೆ ಉದ್ಯಮಿ ಮತ್ತು ಸ್ಯಾಲ್ಕೋ ಮ್ಯೂಚುವಲ್ ಫಂಡ್ ಸಿಇಒ ವಿರಾಜ್ ಗಾಂಧಿ ಪ್ರಕಾರ, ರಾಜಕೀಯ ವಿದ್ಯಮಾನಗಳು ಷೇರು ಮಾರುಕಟ್ಟೆಯನ್ನು ಪ್ರಭಾವಿಸುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ನಿಫ್ಟಿ ಓವರ್​ವ್ಯಾಲ್ಯೂಡ್ ಆಗಿದ್ದು, ಮುಂದಿನ ದಿನಗಳಲ್ಲಿ ಕುಸಿತ ಕಾಣಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಯಾರೇ ಅಧಿಕಾರಕ್ಕೆ ಬಂದರೂ ನಿಫ್ಟಿ ಕುಸಿಯುತ್ತದೆ: ವಾಸ್ತವ ಬಿಚ್ಚಿಟ್ಟ ಷೇರುಮಾರುಕಟ್ಟೆ ಉದ್ಯಮಿ
ಷೇರು ಮಾರುಕಟ್ಟೆ
Follow us on

ನವದೆಹಲಿ, ಮೇ 20: ಚುನಾವಣಾ ಫಲಿತಾಂಶ (lok sabha elections 2024) ಪ್ರಕಟವಾಗುವ ಜೂನ್ 4ರಂದು ಷೇರು ಮಾರುಕಟ್ಟೆ ಭರ್ಜರಿಯಾಗಿ ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಘಂಟಾಘೋಷವಾಗಿ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಮಾರುಕಟ್ಟೆ (stock market) ಬಯಸುತ್ತದೆ ಎಂಬುದು ಅವರ ಹೇಳಿಕೆ ಹಿಂದಿರುವ ಮರ್ಮ. ನಿಜವಾಗಿಯೂ ಮಾರುಕಟ್ಟೆಗೆ ಆ ರೀತಿಯ ಆದ್ಯತೆ ಅಥವಾ ಬಯಕೆ ಇರುತ್ತದಾ? ಸ್ಯಾಮ್​ಕೋ ಮ್ಯೂಚುವಲ್ ಫಂಡ್​ನ ಸಿಇಒ ವಿರಾಜ್ ಗಾಂಧಿ ಪ್ರಕಾರ ಈ ರೀತಿ ರಾಜಕೀಯ ವಿದ್ಯಮಾನಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳುತ್ತಾರೆ.

ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಮಾರುಕಟ್ಟೆ ಮೇಲೆ ಪರಿಣಾಮ ಹೆಚ್ಚಿರುವುದಿಲ್ಲ. ಮಾರುಕಟ್ಟೆ ಬೆಲೆ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಕಾರಾತ್ಮಕ ಅಚ್ಚರಿಯ ಸಾಧ್ಯತೆ ಕಡಿಮೆ ಇದೆ. ಕುಸಿತ ಕಂಡರೂ ಅಚ್ಚರಿ ಪಡುವಂತಿಲ್ಲ ಎಂದು ವಿರಾಜ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿರಾಜ್ ಗಾಂಧಿ ಅವರು ನಿಫ್ಟಿ ಸೂಚ್ಯಂಕ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನುತ್ತಾರೆ.

ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ನಿಫ್ಟಿ ತುಸು ಹೆಚ್ಚುವರಿಮೌಲ್ಯ ಹೊಂದಿದೆ. ಆದ್ದರಿಂದ ಚುನಾವಣಾ ಫಲಿತಾಂಶವು ಸಕಾರಾತ್ಮಕ ಅಚ್ಚರಿ ಮೂಡಿಸುವ ಸಾಧ್ಯತೆ ಕಡಿಮೆ ಎನ್ನುವುದು ಅವರ ಅನಿಸಿಕೆ.

ಇದನ್ನೂ ಓದಿ: ಮೋದಿಯ ಶೇ. 95ರಷ್ಟು ವೈಯಕ್ತಿಕ ಸಂಪತ್ತು ಎಫ್​ಡಿಗಳಲ್ಲಿ; ಫಿಕ್ಸೆಡ್ ಡೆಪಾಸಿಟ್​ನ ಲಾಭಗಳೇನು, ತಿಳಿದಿರಿ

ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದರೂ ಅಂಥದ್ದೇನೂ ಬದಲಾವಣೆ ಆಗದು. ಮಾರುಕಟ್ಟೆ ದರಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೂಡಿಕೆದಾರರ ವೈಯಕ್ತಿಕ ಗುರಿಗಳು ಮುಖ್ಯವೆನಿಸುತ್ತವೆ. ದೀರ್ಘಾವಧಿ ದೃಷ್ಟಿಯಿಂದ ಹೆಚ್ಚುವರಿ ಸೇವಿಂಗ್ಸ್ ಅನ್ನು ಹೂಡಿಕೆ ಮಾಡಬಹುದು. ಅಲ್ಪಾವಧಿ ಹೂಡಿಕೆ ದೃಷ್ಟಿಯ ಟ್ರೇಡರ್ಸ್​ಗೆ ಈ ಅನಿಶ್ಚಿತ ಪರಿಸ್ಥಿತಿಯು ಲಾಭದ ಅವಾಶ ಹೆಚ್ಚಿಸಬಹುದು. ಆದರೂ ಕೂಡ ಜಾಗ್ರತೆಯಾಗಿರಬೇಕು ಎಂದು ಎಚ್ಚರಿಸಿದ್ದಾರೆ.

ಮಿಶ್ರ ಹೂಡಿಕೆ ಇರಲಿ: ವಿರಾಜ್

ಇವತ್ತಿನ ಸಂದರ್ಭದಲ್ಲಿ ಹೂಡಿಕೆಗಳಲ್ಲಿ ವೈವಿಧ್ಯತೆ ಇರಬೇಕು. ವಿವಿಧ ಬಾಂಡ್​ಗಳು, ಈಕ್ವಟಿ, ಚಿನ್ನ ಮತ್ತಿತರ ಅಮೂಲ್ಕ ವಸ್ತುಗಳ ಮೇಲೆ ಹೂಡಿಕೆ ಮಾಡಬಹುದಾ ನೋಡಿ ಎಂದು ಸಾಲ್ಕೋ ಮ್ಯೂಚುವಲ್ ಫಂಡ್​ನ ಸಿಇಒ ವಿರಾಜ್ ಗಾಂಧಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ

ವಿರಾಜ್ ಪ್ರಕಾರ ಸೌರ ಶಕ್ತಿ, ವಾಯು ಶಕ್ತಿ ಮತ್ತಿತರ ಪರ್ಯಾಯ ಇಂಧನ ಮೂಲಗಳ ವಿದ್ಯುತ್ ತಯಾರಿಕೆಯಲ್ಲಿರುವ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುವು. 2024-25ರ ವರ್ಷದಲ್ಲಿ ಈ ಕ್ಷೇತ್ರದ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಬಹುದು ಎಂದು ವಿರಾಜ್ ತಿಳಿಸುತ್ತಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Mon, 20 May 24