ಈ ವೇಗದಲ್ಲಿ ಹೋದ್ರೆ ಭಾರತ ಶ್ರೀಮಂತ ದೇಶ ಆಗೋದು ಯಾವಾಗ?: ರಘುರಾಮ್ ರಾಜನ್
Raghuram Rajan speaks: ಭಾರತದ ಜನಸಂಖ್ಯಾ ಬಲ ಕಡಿಮೆ ಆಗುವುದರೊಳಗೆ ಶ್ರೀಮಂತ ದೇಶ ಆಗಲು ಸಾಧ್ಯವಾ ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ. ಈಗೇನೂ ಭಾರತಕ್ಕೆ ಜನಸಂಖ್ಯಾ ಬಲ ಇದೆ. ಇದರಿಂದ ಬಹಳ ಬೇಗ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆ ಆಗಬಹುದು. 1950ರ ಬಳಿಕ ಭಾರತದ ಹೆಚ್ಚಿನ ಜನರಿಗೆ ವಯಸ್ಸಾಗಿರುತ್ತದೆ. ಅಷ್ಟರೊಳಗೆ ಶ್ರೀಮಂತ ದೇಶವಾಗಬೇಕೆಂದರೆ ಶೇ. 6, ಶೇ. 6.5ರ ದರದ ಬೆಳವಣಿಗೆಯಿಂದ ಸಾಧ್ಯವಾಗುವುದಿಲ್ಲ ಎಂದು ರಾಜನ್ ಹೇಳಿದ್ದಾರೆ.
ನವದೆಹಲಿ, ಮೇ 20: ಜನಸಂಖ್ಯಾ ಬಲದಿಂದ (demographic dividend) ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಸ್ಥಗಿತ ಸ್ಥಿತಿಯಲ್ಲಿರುವ ಜಪಾನ್, ಜರ್ಮನಿಯನ್ನು ಹಿಂದಿಕ್ಕಿ ಭಾರತ ಮೂರನೇ ಅತಿದೊಡ್ಡ ಆರ್ಥಿಕ (Indian economy) ದೇಶವಾಗಬಹುದು. ಆದರೆ, ಭಾರತ ಶ್ರೀಮಂತ ದೇಶವಾಗುತ್ತಿದೆಯಾ (rich country) ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಮನ್ (Raghuram Rajan) ಪ್ರಶ್ನೆ ಮಾಡಿದ್ದಾರೆ. ಭಾರತಕ್ಕೆ ಈಗ ಜನಸಂಖ್ಯಾ ಬಲ ಸಿಕ್ಕಿದೆ. 2047-2050ರಲ್ಲಿ ಭಾರತದ ಹೆಚ್ಚಿನ ಜನಸಂಖ್ಯೆಗೆ ವಯಸ್ಸಾಗಿರುತ್ತದೆ. ಅಷ್ಟರೊಳಗೆ ಭಾರತ ಶ್ರೀಮಂತ ದೇಶವಾಗುತ್ತದಾ ಎಂದು ಅವರು ಕೇಳಿದ್ದಾರೆ.
ಶ್ರೀಮಂತ ದೇಶವಾಗಲು ಏನು ಮಾಡಬೇಕು?
ಶೇ. 6ರಿಂದ 6.5ರಷ್ಟು ದರದಲ್ಲಿ ಬೆಳೆದರೆ ಶ್ರೀಮಂತವಾಗಲು ಸಾಧ್ಯವಿಲ್ಲ. ಯುವ ಜನರಿಗೆ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿದರೆ ಆರ್ಥಿಕತೆಯ ಲಾಭವನ್ನು ಪಡೆಯಲು ಸಾಧ್ಯ. ಹೆಚ್ಚು ವೇಗದಲ್ಲಿ ಆರ್ಥಿಕತೆ ಬೆಳೆಯಲು ಸಾಧ್ಯ. ಇದರಿಂದ ದೇಶ ಶ್ರೀಮಂತವಾಗಬಹುದು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಜನಸಂಖ್ಯೆಯ ಒಂದು ಪ್ರಮುಖ ಭಾಗವನ್ನು ನಿರ್ಲಕ್ಷಿಸಬಾರದು
ಜನಸಂಖ್ಯೆಯ ಒಂದು ಪ್ರಮುಖ ಭಾಗವನ್ನು ನಿರ್ಲಕ್ಷಿಸದೇ, ಅದರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವ ಅವಶ್ಯಕತೆ ಇದೆ. ಬಹು ಜನರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಕಾಣುವ ಯಾವ ದೇಶವೂ ಯಶಸ್ಸು ಪಡೆದಿಲ್ಲ ಎಂದು ಮಾಜಿ ಆರ್ಬಿಐ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ
‘ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ, ಪ್ರಗತಿ ಹೊಂದುತ್ತಿದ್ದೇವೆ ಎಂದು ಅವರಿಗೆ ಅನಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ಇರುವ ಸಮಾನತೆಯ ವಾತಾವರಣವನ್ನು ನೀವು ನಿಲ್ಲಿಸಲು ಆಗುವುದಿಲ್ಲ,’ ರಾಜನ್ ಅವರು ಕೇಂದ್ರ ಸರ್ಕಾರಕ್ಕೆ ತಿಳಿಹೇಳಿದ್ದಾರೆ. ಇಲ್ಲಿ ಅವರು ಅಲ್ಪಸಂಖ್ಯಾತರ ವಿಚಾರದ ಬಗ್ಗೆ ವ್ಯಕ್ತಪಡಿಸಿದ ಅನಿಸಿಕೆಯೋ ಸ್ಪಷ್ಟವಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ