AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತಾ ಬಳಿಕ ದೆಹಲಿಯಲ್ಲಿ ಊಬರ್​ನಿಂದ ಬಸ್ ಸೇವೆ; ಸಾರಿಗೆ ಇಲಾಖೆಯಿಂದ ಸಿಕ್ಕಿತು ಲೈಸೆನ್ಸ್

Uber shuttle service in Delhi: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಊಬರ್ ಸಂಸ್ಥೆ ತನ್ನ ಶಟಲ್ ಸರ್ವಿಸ್ ಅನ್ನು ಈಗ ದೆಹಲಿಗೆ ವಿಸ್ತರಿಸಲು ಹೊರಟಿದೆ. ಕೋಲ್ಕತಾದಲ್ಲಿ ಕಳೆದ ವರ್ಷ ಬಸ್ ಸರ್ವಿಸ್ ಆರಂಭಿಸಿದ್ದ ಊಬರ್ ಈಗ ದೆಹಲಿಯಲ್ಲೂ ಲೈಸನ್ಸ್ ಪಡೆದಿದೆ. ಪ್ರೀಮಿಯಮ್ ಬಸ್ ಯೋಜನೆಯಲ್ಲಿ ಲೈಸೆನ್ಸ್ ಪಡೆದಿರುವ ಊಬರ್ ಈಗಾಗಲೇ ಪರೀಕ್ಷಾರ್ಥ ಸೇವೆ ನಡೆಸಿ ಯಶಸ್ವಿಯಾಗಿದೆ. ಒಂದು ವಾರದವರೆಗೂ ಮುಂಗಡವಾಗಿ ಬಸ್ ಮತ್ತು ಸೀಟುಗಳನ್ನು ಕಾಯ್ದಿರಿಸಬಹುದು. ಈ ಬಸ್ಸುಗಳು ಎಸಿ ಮೊದಲಾದ ಹಲವು ಸೌಲಭ್ಯಗಳನ್ನು ಹೊಂದಿರುತ್ತವೆ.

ಕೋಲ್ಕತಾ ಬಳಿಕ ದೆಹಲಿಯಲ್ಲಿ ಊಬರ್​ನಿಂದ ಬಸ್ ಸೇವೆ; ಸಾರಿಗೆ ಇಲಾಖೆಯಿಂದ ಸಿಕ್ಕಿತು ಲೈಸೆನ್ಸ್
ಊಬರ್ ಬಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 11:25 AM

Share

ಬೆಂಗಳೂರು, ಮೇ 21: ಊಬರ್ ಈಗ ಕೋಲ್ಕತಾ ಬಳಿಕ ದೆಹಲಿಯಲ್ಲಿ ಬಸ್ ಸರ್ವಿಸ್ (Uber bus service) ಆರಂಭಿಸುತ್ತಿದೆ. ದೆಹಲಿ ಸಾರಿಗೆ ಸಂಸ್ಥೆಯಿಂದ ಲೈಸೆನ್ಸ್ ಪಡೆದಿರುವ ಊಬರ್ ಈಗ ರಾಷ್ಟ್ರ ರಾಜಧಾನಿಯಲ್ಲಿ ಶಟಲ್ ಸರ್ವಿಸ್ ಚಾಲನೆಗೊಳಿಸಲಿದೆ. ದೆಹಲಿಯ ಪ್ರೀಮಿಯಮ್ ಬಸ್ ಸ್ಕೀಮ್ ಬಳಸಿ ಊಬರ್ ಈ ಸೇವೆ ಆರಂಭಿಸಲಿರುವುದು ಗೊತ್ತಾಗಿದೆ. ಕಳೆದ ಒಂದು ವರ್ಷದಿಂದಲೂ ಕೋಲ್ಕತಾದಲ್ಲಿ ಊಬರ್ ಶಟಲ್ ಸೇವೆ ಚಾಲನೆಯಲ್ಲಿದೆ. ದೆಹಲಿಯಲ್ಲಿ ಊಬರ್ ಈಗಾಗಲೇ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಪ್ರಯೋಗದ ವೇಳೆ ಈ ಸರ್ವಿಸ್​ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯದಲ್ಲೇ ಇಲ್ಲಿಯೂ ಬಸ್ ಸರ್ವಿಸ್ ಶುರುವಾಗಲಿದೆ. ದೆಹಲಿಯಲ್ಲಿ ಊಬರ್ ಮಾತ್ರವಲ್ಲ ಆವೆಗ್ ಎಂಬ ಮತ್ತೊಂದು ಆ್ಯಪ್ ಆಧಾರಿತ ಬಸ್ ಸರ್ವಿಸ್ ಸಂಸ್ಥೆಗೂ ಲೈಸೆನ್ಸ್ ಸಿಕ್ಕಿದೆ.

ಊಬರ್ ಆ್ಯಪ್​ನಲ್ಲಿ ದೆಹಲಿ ಮತ್ತು ಕೋಲ್ಕತಾ ಪ್ರದೇಶದ ಜನರು ಶಟಲ್ ಸರ್ವಿಸ್ ಅನ್ನು ಕಾಣಬಹುದು. ಅದರಲ್ಲಿ ಒಂದು ವಾರದವರೆಗೂ ಮುಂಗಡವಾಗಿ ಬಸ್ ಮತ್ತು ಸೀಟುಗಳನ್ನು ಬುಕ್ ಮಾಡಬಹುದು. ನಿಮ್ಮ ಬಸ್​ನ ಲೈವ್ ಲೊಕೇಶನ್ ಅನ್ನು ಟ್ರ್ಯಾಕ್ ಮಾಡಬಹುದು. ಬಸ್ ಬರುವ ಸಮಯ ಇತ್ಯಾದಿ ವಿವರ ಕಾಣಬಹುದು.

ಊಬರ್ ಶಟಲ್ ಸರ್ವಿಸ್​ನಲ್ಲಿರುವ ಬಸ್ಸು ಎಸಿ ಇರುವ ಲಕ್ಷುರಿ ಬಸ್ ಆಗಿರಲಿವೆ. ವೈಫೈ, ಜಿಪಿಎಸ್, ಸಿಸಿಟಿವಿ, ಪ್ಯಾನಿಕ್ ಬಟನ್, 2×2 ರೀಕ್ಲೈನಿಂಗ್ ಸೀಟ್ ಇತ್ಯಾದಿ ಸೌಲಭ್ಯಗಳು ಇದರಲ್ಲಿ ಇರಲಿವೆ. ಪ್ರತೀ ಬಸ್ಸಿನಲ್ಲಿ 19ರಿಂದ 50 ಸೀಟುಗಳಿರಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ

ವರ್ಷದ ಬಳಿಕ ಲಾಭ ಸಿಗುವ ನಿರೀಕ್ಷೆ…

ಊಬರ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಅದರ ಬಸ್ ಸರ್ವಿಸ್ ಒಂದಷ್ಟು ಜನಪ್ರಿಯತೆ ಅಥವಾ ಜನಬಳಕೆ ಗಳಿಸಬೇಕಾದರೆ 12 ತಿಂಗಳಾಗಬಹುದು. ಎರಡು ವರ್ಷದೊಳಗೆ ಲಾಭ ಸಿಗಬಹುದು ಎಂದು ಊಬರ್ ನಿರೀಕ್ಷಿಸಿದೆ. ಅಮೆರಿಕ ಮೂಲದ ಊಬರ್ ಸಂಸ್ಥೆಯ ಈ ಶಟಲ್ ಸರ್ವಿಸ್ ಭಾರತ ಸೇರಿ ಮೂರು ದೇಶಗಳಲ್ಲಿವೆ. ಬ್ರೆಜಿಲ್ ಮತ್ತು ಈಜಿಪ್ಟ್​ನಲ್ಲಿ ಊಬರ್​ನಿಂದ ಈ ಸೇವೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲೂ ಊಬರ್ ಶಟಲ್ ಸರ್ವಿಸ್ ಆರಂಭಿಸಲು ಹೊರಡಲಾಗಿತ್ತು. ಊಬರ್ ಸಿಇಒ ಕೂಡ ಬೆಂಗಳೂರಿಗೆ ಬಂದು ಊಬರ್ ಬಸ್​ನಲ್ಲಿ ಪ್ರಯಾಣಿಸಿದ್ದರು. ಏರ್ಪೋರ್ಟ್ ಮಾರ್ಗದಲ್ಲಿ ಇದರ ಸೇವೆ ಆರಂಭಿಸಬಹುದು ಎಂದು ಹೇಳಲಾಗಿತ್ತು. ಅದಿನ್ನೂ ಕೈಗೂಡಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ