AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಸಿಪಿಎಸ್​ಇಯಿಂದ 53,000 ಕೋಟಿ ರೂ ಡಿವಿಡೆಂಡ್ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ

Dividend from CPSE: 2024-25ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಸಿಪಿಎಸ್​ಇಗಳಿಂದ ಹೆಚ್ಚು ಡಿವಿಡೆಂಡ್ ಸಿಗುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್​ನಲ್ಲಿ 48,000 ಕೋಟಿ ರೂ ಡಿವಿಡೆಂಡ್ ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಈಗ 5,000 ಕೋಟಿ ರೂನಷ್ಟು ಹೆಚ್ಚು ಡಿವಿಡೆಂಡ್ ನಿರೀಕ್ಷಿಸುವ ಸಾಧ್ಯತೆ ಇದೆ. ಅಂದರೆ ಡಿವಿಡೆಂಡ್ ಟಾರ್ಗೆಟ್ ಅನ್ನು 53,000 ಕೋಟಿ ರೂಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿರುವುದು ತಿಳಿದುಬಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ 63,000 ಕೋಟಿ ರೂನಷ್ಟು ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರ ಪಡೆದಿತ್ತು.

ಈ ವರ್ಷ ಸಿಪಿಎಸ್​ಇಯಿಂದ 53,000 ಕೋಟಿ ರೂ ಡಿವಿಡೆಂಡ್ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 2:55 PM

ನವದೆಹಲಿ, ಮೇ 21: ಈ ಹಣಕಾಸು ವರ್ಷದಲ್ಲಿ (2024-25) ಕೇಂದ್ರ ಸರ್ಕಾರಿ ಉದ್ದಿಮೆಗಳಿಂದ ಬರಬಹುದಾದ ಡಿವಿಡೆಂಡ್ ಅಥವಾ ಲಾಭಾಂಶಗಳು (dividend) ಹೆಚ್ಚಾಗಬಹುದು ಎಂದು ಹಣಕಾಸು ಸಚಿವಾಲಯ (finance ministry) ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ. ವರ್ಷದ ಡಿವಿಡೆಂಡ್ ಟಾರ್ಗೆಟ್ ಅನ್ನು 5,000 ಕೋಟಿ ರೂಗಳಷ್ಟು ಹೆಚ್ಚಿಸಲು ಯೋಜಿಸಲಾಗಿದೆ. ಚುನಾವಣೆಗೆ ಮುನ್ನ ಫೆಬ್ರುವರಿ 1ರಂದು ನಡೆದ ಮಧ್ಯಂತರ ಬಜೆಟ್​ನಲ್ಲಿ ಸಿಪಿಎಸ್​ಇಗಳಿಂದ 48,000 ಕೋಟಿ ರೂ ಡಿವಿಡೆಂಡ್ ನಿರೀಕ್ಷಿಸಲಾಗಿತ್ತು. ಈಗ ಅದನ್ನು 53,000 ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜುಲೈನಲ್ಲಿ ಮಂಡಿಸಲಾಗುವ ಪೂರ್ಣಪ್ರಮಾಣದ ಬಜೆಟ್​ನಲ್ಲಿ ಇದರ ಎಸ್ಟಿಮೇಟ್ ಅನ್ನು ಅಧಿಕೃತವಾಗಿ ಪ್ರಕಟಿಸಬಹುದು.

ಡಿಸೆಂಬರ್ ಮತ್ತು ಜನವರಿಯಲ್ಲಿ ಮಾಡಲಾದ ಅಂದಾಜಿನ ಆಧಾರದ ಮೇಲೆ ಇಂಟೆರಿಮ್ ಬಜೆಟ್​ನಲ್ಲಿ ಡಿವಿಡೆಂಡ್ ಎಸ್ಟಿಮೇಶನ್ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರಿ ಉದ್ದಿಮೆಗಳ ಲಾಭಗಳ ಬಗ್ಗೆ ಉತ್ತಮ ನೋಟ ಸಿಕ್ಕಿರುವುದರಿಂದ ಹೆಚ್ಚು ನಿಖರವಾಗಿ ಎಸ್ಟಿಮೇಟ್ ಮಾಡಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.

2022-23ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಿ ಉದ್ದಿಮೆಗಳಿಂದ ಸರ್ಕಾರಕ್ಕೆ ಬಂದ ಡಿವಿಡೆಂಡ್ ಮೊತ್ತ 59,953 ಕೋಟಿ ರೂ ಇತ್ತು. 2023-24ರಲ್ಲಿ ಇದು 63,000 ಕೋಟಿ ರೂಗೆ ಏರಿದೆ. ಈ ವರ್ಷವೂ ಇಷ್ಟೇ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ. ಈ ವರ್ಷ ಇಲ್ಲಿಯವರೆಗೆ ಈ ಉದ್ದಿಮೆಗಳಿಂದ ಸರ್ಕಾರಕ್ಕೆ ಬಂದಿರುವ ಲಾಭಾಂಶ 4,837.25 ಕೋಟಿ ರೂ ಇದೆ.

ಇದನ್ನೂ ಓದಿ: ಈ ವೇಗದಲ್ಲಿ ಹೋದ್ರೆ ಭಾರತ ಶ್ರೀಮಂತ ದೇಶ ಆಗೋದು ಯಾವಾಗ?: ರಘುರಾಮ್ ರಾಜನ್

ಡಿವಿಡೆಂಡ್ ಎಂದರೆ ಏನು?

ಡಿವಿಡೆಂಡ್ ಎಂದರೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ ತನ್ನ ಪ್ರತೀ ಷೇರಿಗೆ ನೀಡುವ ಲಾಭಾಂಶವಾಗಿದೆ. ಸರ್ಕಾರಿ ಉದ್ದಿಮೆಗಳಲ್ಲಿ ಸರ್ಕಾರದ ಪಾಲು ಅತ್ಯಧಿಕ ಇರುತ್ತದೆ. ಹೀಗಾಗಿ, ಹೆಚ್ಚಿನ ಲಾಭಾಂಶವು ಸರ್ಕಾರಕ್ಕೆ ಹೋಗುತ್ತದೆ. ಹಲವು ಸರ್ಕಾರಿ ಉದ್ದಿಮೆಗಳು ಆರೋಗ್ಯಕರ ರೀತಿಯಲ್ಲಿ ನಡೆಯುತ್ತಿದ್ದು ಷೇರುಬೆಲೆ ಕೂಡ ಅಧಿಕ ಮಟ್ಟದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ