ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು

Indian Stock Market Exponential Growth: ಭಾರತದ ಷೇರು ಮಾರುಕಟ್ಟೆ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. 19ನೇ ಶತಮಾನದಲ್ಲಿ ಆರಂಭವಾದ ಷೇರುಪೇಟೆ 2007ರಲ್ಲಿ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ಡಾಲರ್ ಮಾರುಕಟ್ಟೆ ಬಂಡವಾಳದ ಮಟ್ಟ ಮುಟ್ಟಿತು. 2017ರಲ್ಲಿ ಎರಡು ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪಿತು. 2021ರಲ್ಲಿ ಮೂರು ಟ್ರಿಲಿಯನ್ ಡಾಲರ್, 2023ರ ನವಂಬರ್​ನಲ್ಲಿ ನಾಲ್ಕು ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿತು. ಈಗ 2024ರ ಮೇ 21ರಂದು ಐದು ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪಿದೆ.

ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು
ಷೇರು ಮಾರುಕಟ್ಟೆ
Follow us
|

Updated on: May 21, 2024 | 4:32 PM

ಮುಂಬೈ, ಮೇ 21: ಇತ್ತೀಚಿನ ಕೆಲ ವರ್ಷಗಳಿಂದ ಭಾರತದ ಷೇರು ಮಾರುಕಟ್ಟೆ ಅದ್ವಿತೀಯ ವೇಗದಲ್ಲಿ (exponential growth) ಬೆಳೆಯುತ್ತಿದೆ. ಕಳೆದ ಆರು ತಿಂಗಳಲ್ಲಿ ಷೇರುಮಾರುಕಟ್ಟೆಯ ಸಂಪತ್ತಿಗೆ ಒಂದು ಟ್ರಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಇಷ್ಟೊಂದು ವೇಗದಲ್ಲಿ ಬೆಳವಣಿಗೆ ಹೊಂದಿರುವುದು ಇತಿಹಾಸದಲ್ಲಿ ಇದೇ ಮೊದಲು. ವಿದೇಶೀ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿದ್ದರೂ ಷೇರುಪೇಟೆ ಓಟ ಮಂದಗೊಂಡಿಲ್ಲದಿರುವುದು ಆಶ್ಚರ್ಯ. ಬಿಎಸ್​ಇನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಇಂದು ಮಂಗಳವಾರ 414.75 ಲಕ್ಷ ಕೋಟಿ ರೂ (5 ಟ್ರಿಲಿಯನ್ ಡಾಲರ್) ಆಗಿದೆ.

ಆಶ್ಚರ್ಯ ಎಂದರೆ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಕಳೆಗುಂದಿವೆ. ಆದರೆ, ಬೇರೆ ಸ್ಟಾಕ್​ಗಳ ಮೇಲೆ ಹೂಡಿಕೆ ಹೆಚ್ಚುತ್ತಿರುವುದು ಇದು ಸ್ಪಷ್ಟಪಡಿಸುತ್ತಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಈ ತಿಂಗಳಲ್ಲಿ ಷೇರು ಮಾರುಕಟ್ಟೆಯಿಂದ 28,000 ಕೋಟಿ ರೂ ಬಂಡವಾಳ ಹಿಂತೆಗೆದುಕೊಂಡಿವೆ. ಆದಾಗ್ಯೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ), ರೀಟೇಲ್, ಎಚ್​ಎನ್​1 ಹೂಡಿಕೆದಾರರು ಹೆಚ್ಚು ಹಣ ಸುರಿಯುತ್ತಿದ್ದಾರೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಲು ಬೇಕು ಡೀಮ್ಯಾಟ್ ಖಾತೆ? ಈ ಅಕೌಂಟ್ ತೆರೆಯುವ ಮುನ್ನ ಕೆಲ ಅಂಶಗಳು ತಿಳಿದಿರಲಿ

10, 4, 2… ಸೂಪರ್ ಫಾಸ್ಟ್ ಮಾರುಕಟ್ಟೆ; ಮೇ ತಿಂಗಳುಗಳಲ್ಲೇ ಮೈಲಿಗಲ್ಲು

ಭಾರತದ ಷೇರು ಮಾರುಕಟ್ಟೆಗೆ ಹೆಚ್ಚೂಕಡಿಮೆ 150 ವರ್ಷಗಳ ಇತಿಹಾಸ ಇದೆ. 1875ರಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಆರಂಭವಾಗಿದ್ದು. ಅದು ಭಾರತದ ಮೊದಲ ಷೇರು ಮಾರುಕಟ್ಟೆ. 2007ರ ಮೇ 28ರಂದು ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳ ಹೊಂದಿತು. 132 ವರ್ಷಗಳು ಬೇಕಾದವು ಈ ಮೈಲಿಗಲ್ಲಿಗೆ.

ಒಂದರಿಂದ ಎರಡು ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ್ದು 2017ರ ಮೇ 16ರಂದು. ಅಂದರೆ ಎರಡನೇ ಮೈಲಿಗಲ್ಲಿಗೆ ಬೇಕಾಗಿದ್ದು 10 ವರ್ಷ ಮಾತ್ರ.

ಎರಡರಿಂದ ಮೂರು ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಿದ್ದು 2021ರ ಮೇ 24ರಂದು. ಅಂದರೆ ಈ ಮೂರನೇ ಮೈಲಿಗಲ್ಲು ಮುಟ್ಟಿದ್ದು ಕೇವಲ ನಾಲ್ಕು ವರ್ಷದಲ್ಲಿ.

ಮುಂದಿನ ಒಂದು ಟ್ರಿಲಿಯನ್ ಡಾಲರ್ ಮಾರುಕಟ್ಟೆ ಸಂಪತ್ತು ಬಂದಿದ್ದು 2023ರ ನವೆಂಬರ್ 29ರಂದು. ನಾಲ್ಕನೇ ಮೈಲಿಗಲ್ಲಿಗೆ ಎರಡು ವರ್ಷ ಸಾಕಾಯಿತು. ಐದನೇ ಮೈಲಿಗಲ್ಲಾದ ಐದು ಟ್ರಿಲಿಯನ್ ಡಾಲರ್ ಮಟ್ಟವನ್ನು 2024ರ ಮೇ 21ರಂದು, ಅಂದರೆ ಕೇವಲ ಆರು ತಿಂಗಳಲ್ಲಿ ತಲುಪಲಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಕೇವಲ 3 ತಿಂಗಳ ಒಳಗೆ ಷೇರು ಮಾರುಕಟ್ಟೆ 6 ಟ್ರಿಲಿಯನ್ ಡಾಲರ್ ಆಗಿ ಹೋಗುತ್ತಾ..?

ಇದನ್ನೂ ಓದಿ: ಮೊದಲ ಬಾರಿಗೆ 3 ಲಕ್ಷಕೋಟಿ ರೂ ತಲುಪಿದ ಬ್ಯಾಂಕ್ ಲಾಭ; ಇದು ಹತ್ತು ವರ್ಷದ ಚಮತ್ಕಾರ ಎಂದ ಮೋದಿ

ಜಗತ್ತಿನ ಅತಿದೊಡ್ಡ ಷೇರು ಮಾರುಕಟ್ಟೆಗಳು

  1. ಅಮೆರಿಕ, 50 ಟ್ರಿಲಿಯನ್ ಡಾಲರ್
  2. ಚೀನಾ, 11 ಟ್ರಿಲಿಯನ್ ಡಾಲರ್
  3. ಜಪಾನ್, 5.4 ಟ್ರಿಲಿಯನ್ ಡಾಲರ್
  4. ಭಾರತ, 5 ಟ್ರಿಲಿಯನ್ ಡಾಲರ್
  5. ಹಾಂಕಾಂಗ್, 4 ಟ್ರಿಲಿಯನ್ ಡಾಲರ್

ಅತಿಹೆಚ್ಚು ಮಾರುಕಟ್ಟೆ ಬಂಡವಾಳದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಅತಿಹೆಚ್ಚು ಕಂಪನಿಗಳು ಲಿಸ್ಟ್ ಆಗಿರುವುದನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಭಾರತ ಅಗ್ರಸ್ಥಾನ ಪಡೆಯುತ್ತದೆ. ಇಲ್ಲಿ 5,400 ಕಂಪನಿಗಳು ಲಿಸ್ಟ್ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ