ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಲು ಬೇಕು ಡೀಮ್ಯಾಟ್ ಖಾತೆ? ಈ ಅಕೌಂಟ್ ತೆರೆಯುವ ಮುನ್ನ ಕೆಲ ಅಂಶಗಳು ತಿಳಿದಿರಲಿ

Demat Account for share trading: ಇತ್ತೀಚಿನ ವರ್ಷಗಳಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಪ್ರಮುಖ ಕಾರಣ. ಇದಲ್ಲದೆ SEBIಯ ಪ್ರಯತ್ನಗಳು ಮತ್ತು ರಿಸ್ಕ್ ತೆಗೆದುಕೊಳ್ಳುವ ಆಲೋಚನೆಯಲ್ಲಿರುವ ವ್ಯಕ್ತಿಗಳು, ಮಾರ್ಕೆಟ್ ಕಡೆ ಮುಖ ಮಾಡುತ್ತಿರುವ ಯುವಕರು ಹೆಚ್ಚಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಡಿಮ್ಯಾಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದೆ.

ಷೇರುಪೇಟೆಯಲ್ಲಿ ಟ್ರೇಡಿಂಗ್ ಮಾಡಲು ಬೇಕು ಡೀಮ್ಯಾಟ್ ಖಾತೆ? ಈ ಅಕೌಂಟ್ ತೆರೆಯುವ ಮುನ್ನ ಕೆಲ ಅಂಶಗಳು ತಿಳಿದಿರಲಿ
ಡಿಮ್ಯಾಟ್ ಖಾತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 3:29 PM

ಹಿಂದೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ವರ್ಷಗಳವರೆಗೆ ಇಡುತ್ತಿದ್ದರು. ಆದರೆ ಈಗ ಅನೇಕರು ತಮ್ಮ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಜನವರಿ 2024 ರ ಹೊತ್ತಿಗೆ ದೇಶದಲ್ಲಿ 14.39 ಕೋಟಿ ಡಿಮ್ಯಾಟ್ ಖಾತೆಗಳಿರುವುದೆ ಇದಕ್ಕೆ ಸಾಕ್ಷಿ. ಡಿಮ್ಯಾಟ್ (Demat account) ಎಂದರೆ ಡಿಮೆಟಿರಿಯಲೈಸ್ಡ್ ಅಕೌಂಟ್. ಷೇರು ಮಾರುಕಟ್ಟೆಯಲ್ಲಿ ಖರೀದಿಸಿದ ಷೇರುಗಳು, ಡಿಬೆಂಚರ್‌ಗಳು, ಬಾಂಡ್‌ಗಳು, ಇಟಿಎಫ್‌ಗಳು ಮುಂತಾದ ಹಣಕಾಸು ಪ್ರಾಡಕ್ಟ್ ಗಳನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಸಂಗ್ರಹಿಸಿಡುವ ಅಕೌಂಟೇ ಡಿಮ್ಯಾಟ್ ಅಕೌಂಟ್. ಸರಳವಾಗಿ ಹೇಳುವುದಾದರೆ, ಡಿಮ್ಯಾಟ್ ಖಾತೆಯು ನಿಮ್ಮ ಷೇರುಗಳನ್ನು ಸುರಕ್ಷಿತವಾಗಿರಿಸುವ ಬ್ಯಾಂಕ್ ಲಾಕರ್‌ನಂತೆ ಕಾರ್ಯನಿರ್ವಹಿಸುತ್ತದೆ.

ಡಿಮ್ಯಾಟ್ ಖಾತೆ ಓಪನ್ ಮಾಡುವ ಸಂದರ್ಭ ಬಂದಾಗ ನೀವು ಸರಿಯಾದ ಡಿಪಾಸಿಟಿರಿ ಅಂದ್ರೆ ಡಿಪಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಸುಲಭ ಮತ್ತು ಸರಳ ಬ್ಯಾಂಕಿಂಗ್​ಗೆ ಯಾವ ರೀತಿ ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ಸರಿಯಾದ ಡಿಪಾಸಿಟಿರಿ ಆಯ್ಕೆ ಮಾಡಿಕೊಳ್ಳಬೇಕು. ಈ ನಿಮ್ಮ ಡಿಮ್ಯಾಟ್ ಖಾತೆಯ ಮುಖಾಂತರವೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ಡಿರೈವೇಟಿವ್ಸ್ ಟ್ರೇಡಿಂಗ್ ಮಾಡಲು, ಮ್ಯೂಚುವಲ್ ಫಂಡ್​ನಲ್ಲಿ ಇನ್ವೆಸ್ಟ್ ಮಾಡಲು ಸಾಧ್ಯವಾಗುತ್ತದೆ.

COVID ಸಮಯದಲ್ಲಿ ಡಿಮ್ಯಾಟ್ ಖಾತೆ ತೆರೆಯುವಿಕೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದಿತು. ಜನರು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ಇದೇ ಕಾರಣಕ್ಕೆ ಬ್ರೋಕರೇಜ್ ಆ್ಯಪ್ ಗಳಾದ ಪೇಟಿಎಂ ಮನಿ, Groww ಮತ್ತು Zerodhaದಂತವು ವೇಗವಾಗಿ ಬೆಳೆದವು. ಭಾರತದಲ್ಲಿ 40% ಕ್ಕಿಂತ ಹೆಚ್ಚು ಸಕ್ರಿಯ ಡಿಮ್ಯಾಟ್ ಖಾತೆಗಳನ್ನು ಈ ಅಪ್ಲಿಕೇಶನ್‌ಗಳ ಮೂಲಕ ತೆರೆಯಲಾಗಿದೆ. ಹಾಗಾದರೆ ಈಗ ನಮ್ಮ ಮುಂದೆ ಇರುವ ಪ್ರಶ್ನೆ ಏನೆಂದರೆ ಡಿಮ್ಯಾಟ್ ಖಾತೆ ಎಲ್ಲಿ ತೆರೆಯಬೇಕು. ಡಿಸ್ಕೌಂಟ್ ನೀಡುವ ಬ್ರೋಕರೇಜ್ ಕಂಪನಿಗಳಲ್ಲೋ? ಅಥವಾ ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳಲ್ಲಾ? ಇದಕ್ಕೂ ಸಹ ಉತ್ತರ ಕಂಡುಕೊಳ್ಳಬೇಕು.

ಇದನ್ನೂ ಓದಿ: ಯಾರೇ ಅಧಿಕಾರಕ್ಕೆ ಬಂದರೂ ನಿಫ್ಟಿ ಕುಸಿಯುತ್ತದೆ: ವಾಸ್ತವ ಬಿಚ್ಚಿಟ್ಟ ಷೇರುಮಾರುಕಟ್ಟೆ ಉದ್ಯಮಿ

ಕಳೆದ ಕಳೆದ 4 ವರ್ಷಗಳಲ್ಲಿ, ಡಿಮ್ಯಾಟ್ ಖಾತೆಗಳನ್ನು ತೆರೆಯುವ ವಿಷಯದಲ್ಲಿ ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳನ್ನು ಹಿಂದಕ್ಕೆ ಹಾಕಿವೆ.

ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಅತಿ ಕಡಿಮೆ ಬ್ರೋಕರೇಜ್ ಫೀ ಇಲ್ಲವೇ ಫ್ಲಾಟ್ ಫೀ ವಿಧಿಸುತ್ತವೆ. ಇಲ್ಲಿ ಡಿಮ್ಯಾಟ್ ಖಾತೆ ನಿರ್ವಹಿಸುವ ಶುಲ್ಕಗಳು ತುಂಬಾ ಕಡಿಮೆ ಅಥವಾ ಉಚಿತವಾಗಿದೆ. ಸ್ಟಾಕ್‌ಗಳು, ಮತ್ತು ಕಮಾಡಿಟಿ, ಪೋರೇಕ್ಸ್ ವಹಿವಾಟನ್ನು ಅತ್ಯಂತ ವೇಗವಾಗಿ ಮಾಡಿಕೊಡುತ್ತವೆ. ಇದಲ್ಲದೆ, ಈ ರಿಯಾಯಿತಿ ಬ್ರೋಕರೇಜ್ ಕಂಪನಿಗಳು ಡಿಮ್ಯಾಟ್ ಖಾತೆಗಳನ್ನು ತೆರೆಯುವ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿವೆ. ಕನಿಷ್ಠ ದಾಖಲೆ ಇಲ್ಲಿಮ ಸಾಕು. ಸ್ಮಾರ್ಟ್ ಪೋನ್ ಇದ್ದರೆ ಒಂದೇ ದಿನದಲ್ಲಿ ಖಾತೆ ತೆರೆದು ವಹಿವಾಟು ಆರಂಭಿಸಲು ಸಾಧ್ಯವಾಗುತ್ತದೆ. ಮೊಬೈಲ್ ಆ್ಯಪ್ ಮೂಲಕವೇ ಖಾತೆ ನಿರ್ವಹಿಸಬಹುದು.

ಮತ್ತೊಂದೆಡೆ, ಫುಲ್- ಸರ್ವೀಸ್ ಬ್ರೋಕರೇಜ್ ಕಂಪನಿಗಳು ಅಗಾಧ ಅನುಭವ ಹೊಂದಿವೆ. ರಿಯಾಯಿತಿ ಬ್ರೋಕರೇಜ್ ಕಂಪನಿಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾಲದಿಂದ ಇವೆ. ಹೆಸರೇ ಸೂಚಿಸುವಂತೆ, ಫುಲ್-ಸರ್ವೀಸ್ ಬ್ರೋಕರೇಜ್ ಕಂಪನಿಗಳು ಪ್ರಸ್ತುತ ಮಾರ್ಕೆಟ್ ಟ್ರೆಂಡ್, ಇಂಡಸ್ಟ್ರಿಗೆ ಸಂಬಂಧಿಸಿದ ಅಪ್ ಡೇಟ್, ರಿಸರ್ಚ್ ರಿಪೋರ್ಟ್ ಗಳನ್ನು ನೀಡುತ್ತವೆ. ಇದಲ್ಲದೆ ಅಸೆಟ್ ಮ್ಯಾನೇಜ್ ಮೆಂಟ್ ಸರ್ವೀಸ್ ನೀಡುತ್ತವೆ. ಪೆನ್ಶನ್ ಪ್ಲಾನಿಂಗ್ ಗೂ ಮಾರ್ಗದರ್ಶನ ನೀಡ್ತವೆ. ಹೂಡಿಕೆದಾರರು ವಿವಿಧ ಫೈನಾಶಿಯಲ್ ಪ್ರಾಡಕ್ಟ್ ಗಳಲ್ಲಿ ಹೂಡಿಕೆ ಮಾಡೋದಕ್ಕೆ ನೆರವು ನೀಡುತ್ತವೆ.

ಡಿಸ್ಕೌಂಟ್ ಬ್ರೋಕಿಂಗ್ ಅಥವಾ ಫುಲ್-ಸರ್ವೀಸ್ ಬ್ರೋಕಿಂಗ್: ಯಾವುದು ಸೂಕ್ತ?

ಕಡಿಮೆ ಬ್ರೋಕರೇಜ್ ಶುಲ್ಕಕ್ಕಾಗಿ ರಿಯಾಯಿತಿ ಬ್ರೋಕರೇಜ್ ಕಂಪನಿಗಳನ್ನು ಆಯ್ಕೆ ಮಾಡಬಹುದು. ಫುಲ್-ಟೈಮ್ ಟ್ರೇಡಿಂಗ್ ಮಾಡುವ ಜನರಿಗೆ ಕಡಿಮೆ ಬ್ರೋಕರೇಜ್ ಶುಲ್ಕಗಳು ಮೊದಲ ಆದ್ಯತೆಯಾಗುತ್ತದೆ. ಇದೇ ಕಾರಣಕ್ಕೆ ಅವರು ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳನ್ನು ಆಯ್ಕೆ ಮಾಡುತ್ತಾರೆ. ಕಾಲಾನಂತರ ದುಬಾರಿ ಶುಲ್ಕಗಳು ನಿಮ್ಮ ಒಟ್ಟಾರೆ ಲಾಭದ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ನೀವು ಶಾರ್ಟ್ ಟೈಮ್ ನಲ್ಲಿ ಅತಿ ಹೆಚ್ಚು ಸ್ಟಾಕ್ ಖರೀದಿ ಮತ್ತು ಮಾರಾಟ ಮಾಡಿದಾಗ ನಿಮ್ಮ ಲಾಭದ ಮೇಲೆ ಅದು ಪರಿಣಾಮ ಬೀರಬಹುದು. ಹಾಗಿದ್ದರೆ ಡಿಸ್ಕೌಂಟ್ ಬ್ರೋಕಿಂಗ್ ಪ್ಲಾಟ್‌ಫಾರ್ಮ್‌ಗಳು ಎಷ್ಟು ಪರಿಣಾಮಕಾರಿ? ಇದನ್ನು ಮೌಲ್ಯಮಾಪನ ಮಾಡುವುದು ಬಹಳ ಮುಖ್ಯ.

ಇದನ್ನೂ ಓದಿ: ಮೊದಲ ಬಾರಿಗೆ 3 ಲಕ್ಷಕೋಟಿ ರೂ ತಲುಪಿದ ಬ್ಯಾಂಕ್ ಲಾಭ; ಇದು ಹತ್ತು ವರ್ಷದ ಚಮತ್ಕಾರ ಎಂದ ಮೋದಿ

ನಿಧಾನವಾಗಿ ಕೆಲಸ ಮಾಡುವ ವ್ಯವಸ್ಥೆಯಾದರೆ ಕ್ವಿಕ್ ಆಗಿ ನೀವು ನಿಮ್ಮ ಸಮಯಕ್ಕೆ, ನಿಮಗೆ ಬೇಕಾದ ದರಕ್ಕೆ ಸ್ಟಾಕ್ ಬೈ ಅಥವಾ ಸೆಲ್ ಮಾಡಲು ಸಾಧ್ಯವಾಗದೇ ಹೋಗಬಹುದು. ಫುಲ್-ಸರ್ವೀಸ್ ಬ್ರೋಕಿಂಗ್ ಯಾರಿಗೆ ಸೂಕ್ತವಾಗಿದೆ ಎಂಬುದನ್ನು ಈಗ ಅರ್ಥಮಾಡಿಕೊಳ್ಳೋಣ. ನೀವು ಈಗಷ್ಟೆ ಮಾರ್ಕೆಟ್ ಗೆ ಕಾಲಿಟ್ಟಿದ್ದರೆ ಈ ಫುಲ್ -ಸರ್ವೀಸಿಂಗ್ ಬ್ರೋಕರೇಜ್ ಕಂಪನಿ ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಅವರು ನಿಮಗೆ ರಿಸರ್ಚ್ ರಿಪೋರ್ಟ್ ಮತ್ತು ಟ್ರೇಡಿಂಗ್ ಸಜೆಶನ್ ಕೊಡುತ್ತಾರೆ. ಆದಾಗ್ಯೂ ಡಿಸ್ಕೌಂಟ್ ಬ್ರೋಕರೇಜ್‌ಗೆ ಹೋಲಿಸಿದರೆ, ಫುಲ್-ಸರ್ವೀಸ್ ಬ್ರೋಕರೇಜ್ ಸಂಸ್ಥೆಗಳು ಸಾಮಾನ್ಯವಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಾರೆ. ಇವುಗಳ ಆಪರೇಶನಲ್ ಕಾಸ್ಟ್ ಜಾಸ್ತಿ ಇರುವುದರಿಂದ ಫೀ ಸಹ ಹೆಚ್ಚಿದೆ.

ಹಾಗಿದ್ದರೆ ಯಾರಿಗೆ ಯಾವುದು ಸರಿ? ಸ್ವತಂತ್ರವಾಗಿ ಇನ್ವೆಸ್ಟ್ ಮೆಂಟ್ ನಿರ್ಧಾರ ತೆಗೆದುಕೊಳ್ಳುವಂತವರಿಗೆ, ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡಿ ಒಂದು ಹಂತದ ಅನುಭವ ಇರೋರಿಗೆ ಡಿಸ್ಕೌಂಟ್ ಬ್ರೋಕರೇಜ್ ಕಂಪನಿಗಳು ಸೂಟ್ ಆಗುತ್ತವೆ. ಹೊಸದಾಗಿ ಟ್ರೇಡಿಂಗ್ ಆರಂಭಿಸಿರುವವರಿಗೆ ಫುಲ್-ಸರ್ವೀಸ್ ಬ್ರೋಕರಿಂಗ್ ಸಂಸ್ಥೆ ಸೂಟ್ ಆಗುತ್ತದೆ. ಯಾಕಂದ್ರೆ ಇವು ಮಾರ್ಗದರ್ಶನ, ಸಲಹೆ ಮತ್ತಿತರ ನೆರವು ನೀಡುತ್ತವೆ.

(ಮಾಹಿತಿ ಕೃಪೆ: ಮನಿ9)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ