AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್​ಗೆ ಸರ್ಕಾರ ಮನವಿ

Govt Requests Indian oil refiners to jointly negotiate for Russian oil: ರಷ್ಯಾ ದೇಶದಿಂದ ಕಡಿಮೆ ಬೆಲೆಗೆ ತೈಲ ಪಡೆಯಲು ಸಾಧ್ಯವಾಗುವಂತೆ ಜಂಟಿಯಾಗಿ ಹೋಗಿ ಸಂಧಾನ ನಡೆಸುವಂತೆ ಸರ್ಕಾರಿ ತೈಲ ಸಂಸ್ಕರಣೆ ಸಂಸ್ಥೆಗಳು ಹಾಗೂ ಖಾಸಗಿ ವಲಯದ ರಿಲಾಯನ್ಸ್​ಗೆ ಸರ್ಕಾರ ಮನವಿ ಮಾಡಿದೆ. ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಮತ್ತು ರಿಲಾಯನ್ಸ್ ಸಂಸ್ಥೆಗಳು ಒಗ್ಗಟ್ಟಿನಿಂದ ಇದ್ದು ರಷ್ಯಾ ತೈಲವನ್ನು ಕಡಿಮೆ ಬೆಲೆಗೆ ಬಾರ್ಗೈನ್ ಮಾಡಬೇಕು ಎಂದು ಸರ್ಕಾರ ಅಪೇಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ.

ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್​ಗೆ ಸರ್ಕಾರ ಮನವಿ
ತೈಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 5:34 PM

ನವದೆಹಲಿ, ಮೇ 21: ಪೆಟ್ರೋಲ್ ಬೆಲೆ ಏರಿಕೆ ತಡೆಯುವ ಧಾವಂತದಲ್ಲಿರುವ ಸರ್ಕಾರಕ್ಕೆ ರಷ್ಯಾದ ಅಗ್ಗದ ದರದ ತೈಲ (Russian oil) ಪ್ರಮುಖ ಆಶಾಕಿರಣವಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಪಡೆಯುವಂತೆ ತನ್ನ ತೈಲ ಸಂಸ್ಕರಣ ಸಂಸ್ಥೆಗಳಿಗೆ (oil processors) ಸರ್ಕಾರ ಮನವಿ ಮಾಡಿದೆ. ಈ ರೀತಿಯ ಮನವಿ ಬಹಳ ಅಪರೂಪದ್ದಾದ್ದರಿಂದ ಮಹತ್ವ ಪಡೆದಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣ ಕಂಪನಿಗಳು ಹಾಗೂ ಖಾಸಗಿ ವಲಯದ ರಿಲಾಯನ್ಸ್ ಸಂಸ್ಥೆಗೆ ಈ ಮನವಿ ಮಾಡಿಕೊಂಡಿದೆ. ದೀರ್ಘಾವಧಿಗೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಪಡೆಯಲು ಜಂಟಿಯಾಗಿ ಸಂಧಾನ ನಡೆಸುವಂತೆ ಈ ಮನವಿ ಮಾಡಲಾಗಿರುವುದು.

ಈ ತೈಲ ಕಂಪನಿಗಳು ಮೂರನೇ ಒಂದು ಭಾಗದಷ್ಟು ತೈಲವನ್ನು ರಷ್ಯಾದಿಂದ ಪಡೆಯಬೇಕು ಎನ್ನುವುದು ಸರ್ಕಾರ ಅಪೇಕ್ಷೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಮಾಧ್ಯಮಗಳು ಅಧಿಕಾರಿಗಳ ಮಾಹಿತಿ ಆಧಾರದ ಮೇಲೆ ವರದಿ ಮಾಡಿವೆ. ಇಲ್ಲಿ ಸರ್ಕಾರಿ ತೈಲ ಸಂಸ್ಕರಣಾ ಕಂಪನಿಗಳೆಂದರೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳಿವೆ. ಖಾಸಗಿ ವಲಯದ ರಿಲಾಯನ್ಸ್ ಕೂಡ ಭಾರತದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾಗಿದೆ.

ಇದನ್ನೂ ಓದಿ: ಈ ವರ್ಷ ಸಿಪಿಎಸ್​ಇಯಿಂದ 53,000 ಕೋಟಿ ರೂ ಡಿವಿಡೆಂಡ್ ನಿರೀಕ್ಷೆಯಲ್ಲಿ ಹಣಕಾಸು ಸಚಿವಾಲಯ

ಜಂಟಿಯಾಗಿ ಸಂಧಾನ ಯಾಕೆ?

ತೈಲ ಸಂಸ್ಕರಣಾ ಕ್ಷೇತ್ರದಲ್ಲಿ ಬೇರೆ ಬೇರೆ ಕಂಪನಿಗಳಿವೆ ಎಂದರೆ ಅವು ಪರಸ್ಪರ ಪ್ರತಿಸ್ಪರ್ಧಿಗಳೆಂದೇ ಆಗುತ್ತದೆ. ಎಲ್ಲಾ ಸಂಸ್ಥೆಗಳು ರಷ್ಯಾದ ತೈಲ ಪಡೆಯಲು ಪ್ರತ್ಯೇಕವಾಗಿ ಪ್ರಯತ್ನಿಸಿದರೆ ಸ್ಪರ್ಧಾತ್ಮಕ ಬೆಲೆಗೆ ಪಡೆಯಬೇಕಾಗುತ್ತದೆ. ಅಂದರೆ ರಷ್ಯಾಗೆ ಹೆಚ್ಚು ಬಾರ್ಗೈನಿಂಗ್ ಪವರ್ ಸಿಗುತ್ತದೆ. ಇಲ್ಲಿ ಐಒಸಿಎಲ್, ಎಚ್​ಪಿಸಿಎಲ್, ಬಿಪಿಸಿಎಲ್, ರಿಲಾಯನ್ಸ್ ಕಂಪನಿಗಳು ಜಂಟಿಯಾಗಿ ಹೋಗಿ ಸಂಧಾನ ನಡೆಸಿದರೆ ಭಾರತಕ್ಕೆ ಬಾರ್ಗೈನಿಂಗ್ ಪವರ್ ಹೆಚ್ಚಾಗಬಹುದು ಎಂಬ ಆಲೋಚನೆಯು ಸರ್ಕಾರದ ಈ ನಡೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಒಂದು ಗೂಡಬಹುದಾದರೂ ರಿಲಾಯನ್ಸ್ ಸಂಸ್ಥೆ ಈ ಗುಂಪಿಗೆ ಸೇರುತ್ತದಾ ಎಂಬುದು ಅನುಮಾನ. ಅಂತೆಯೇ ಸರ್ಕಾರದ ವತಿಯಿಂದ ರಿಲಾಯನ್ಸ್​ಗೆ ವಿಶೇಷ ಮನವಿ ಹೋಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ 3 ಲಕ್ಷಕೋಟಿ ರೂ ತಲುಪಿದ ಬ್ಯಾಂಕ್ ಲಾಭ; ಇದು ಹತ್ತು ವರ್ಷದ ಚಮತ್ಕಾರ ಎಂದ ಮೋದಿ

ಐಒಸಿಎಲ್ ಇತ್ಯಾದಿ ಸರ್ಕಾರಿ ತೈಲ ಸಂಸ್ಥೆಗಳು ಈ ಹಿಂದೆ ಒಗ್ಗಟ್ಟು ತೋರಿ ಕಡಿಮೆ ಬೆಲೆಗೆ ತೈಲ ಪಡೆದ ಉದಾಹರಣೆಗಳಿವೆ. ಖಾಸಗಿ ಸಂಸ್ಥೆಯೂ ಕೂಡ ಜೊತೆ ಸೇರಿ ಬೆಲೆಗೆ ಒಟ್ಟಿಗೆ ಬಾರ್ಗೈನ್ ಮಾಡಿರುವ ಉದಾಹರಣೆ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ