AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF withdraw: ಕೋವಿಡ್- 19 ಬಿಕ್ಕಟ್ಟಿಗೆ ಇಪಿಎಫ್​ನಿಂದ ಹಣ ವಿಥ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ

ಕೋವಿಡ್- 19 ಸಂದರ್ಭಕ್ಕೆ ಹಣಕಾಸು ಅಗತ್ಯ ಇದ್ದಲ್ಲಿ ಇಪಿಎಫ್​ ವಿಥ್​ಡ್ರಾ ಮಾಡುವುದಕ್ಕೆ ಅವಕಾಶ ಇಲ್ಲಿದೆ. ಡ್ರಾ ಮಾಡುವುದಕ್ಕೆ ಅನುಸರಿಸಬೇಕಾದ ಹಂತಗಳು ಇಲ್ಲಿವೆ.

EPF withdraw: ಕೋವಿಡ್- 19 ಬಿಕ್ಕಟ್ಟಿಗೆ ಇಪಿಎಫ್​ನಿಂದ ಹಣ ವಿಥ್ ಡ್ರಾ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on:May 24, 2021 | 1:38 PM

Share

ಕೋವಿಡ್- 19 ಬಿಕ್ಕಟ್ಟು ಇರುವುದರಿಂದ ತಂತಮ್ಮ ಇಪಿಎಫ್ ಖಾತೆಯಿಂದ ಹಣ ವಿಥ್​ ಡ್ರಾ ಮಾಡಿಕೊಳ್ಳುವುದಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ) ತನ್ನ ಚಂದಾದಾದರಿಗೆ ಅವಕಾಶ ನೀಡಿದೆ. ಆದರೆ ಈ ಬಗ್ಗೆ ಖಾತೆದಾರರಲ್ಲಿ ಹಲವು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಇದರಿಂದ ಹಣದ ತುರ್ತು ಅಗತ್ಯ ಇರುವವರಿಗೆ ಅನುಕೂಲ ಆಗಬಹುದು.

* ಇಪಿಎಫ್​ನಿಂದ ಗರಿಷ್ಠ ಎಷ್ಟು ಹಣ ವಿಥ್​ ಡ್ರಾ ಮಾಡಬಹುದು? ಕೋವಿಡ್- 19ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಣ ವಿಥ್ ಡ್ರಾ ಮಾಡುವಂತಿದ್ದರೆ ಮೂರು ತಿಂಗಳ ಮೂಲ ವೇತನ (ಬೇಸಿಕ್ ಪೇ) ಮತ್ತು ತುಟ್ಟಿ ಭತ್ಯೆ (ಡಿಎ) ಅಥವಾ ಖಾತೆಯಲ್ಲಿ ಇರುವಂಥ ಒಟ್ಟು ಮೊತ್ತದ ಶೇ 75ರಷ್ಟನ್ನು ತೆಗೆದುಕೊಳ್ಳಬಹುದು. ಒಂದು ಉದಾಹರಣೆ ನೋಡುವುದಾದರೆ ಬ್ಯಾಲೆನ್ಸ್ 3 ಲಕ್ಷ ರೂಪಾಯಿ ಇದೆ. ಬೇಸಿಕ್ ಹಾಗೂ ಡಿಎ ಸೇರಿ ತಿಂಗಳಿಗೆ 25 ಸಾವಿರ ರೂ. ಆಗುತ್ತದೆ. ಆಗ ಮೂರು ತಿಂಗಳ ಬೇಸಿಕ್ ಹಾಗೂ ಡಿಎ ಸೇರಿ 75 ಸಾವಿರ ರೂಪಾಯಿ ಹಾಗೂ ಪಿಎಫ್​ ಬಾಕಿಯಲ್ಲಿ ಶೇ 75ರಷ್ಟು ಅಂದರೆ 2.25 ಲಕ್ಷ ರೂ. ಆಗುತ್ತದೆ. ಆದ್ದರಿಂದ ಗರಿಷ್ಠ ಮೊತ್ತ 75 ಸಾವಿರ ರೂ. ಡ್ರಾ ಮಾಡಬಹುದು. ವಿಥ್​ ಡ್ರಾ ಮಾಡಬೇಕು ಅಂದುಕೊಂಡಾಗ ಯುನುವರ್ಸಲ್ ಅಕೌಂಟ್ ನಂಬರ್ (ಯುಎಎನ್), ಆಧಾರ್ ಕಾರ್ಡ್ ಸಂಖ್ಯೆ ಮತ್ತು ಚೆಕ್​ನ ಸ್ಕ್ಯಾನ್ಡ್ ಕಾಪಿ ಇಟ್ಟುಕೊಂಡಿರಬೇಕು.

ಇಪಿಎಫ್ ವಿಥ್​ ಡ್ರಾ ಮಾಡುವ ಹಂತಗಳಾವುವು? ಹಣಕಾಸಿನ ತುರ್ತು ಎಂಬುದು ಕುತ್ತಿಗೆ ತನಕ ಬಂದಾಗ ಪರ್ಸನಲ್ ಲೋನ್​ನಂಥ ದುಬಾರಿ ಸಾಲಗಳಿಗೆ ತೆರಳುವ ಬದಲಿಗೆ ಇಪಿಎಫ್​ನಿಂದ ವಿಥ್​ಡ್ರಾ ಮಾಡವುದು ಉತ್ತಮ ಆಯ್ಕೆಯಾಗುತ್ತದೆ. ಕೋವಿಡ್​ಗೆ ಸಂಬಂಧಿಸಿದ ಹಣಕಾಸು ತುರ್ತಿನ ಸಂದರ್ಭದಲ್ಲಿ ಇಪಿಎಫ್ ಹಣ ವಿಥ್ ಡ್ರಾ ಮಾಡುವ ನಿಯಮಾವಳಿಗಳು ಹೀಗಿವೆ.

ಹಂತ 1: https://unifiedportal-mem.epfindia.gov.in/memberinterface/ ಈ ವೆಬ್​ಸೈಟ್​ಗೆ ಲಾಗಿನ್ ಆಗಿ. ಹಂತ 2: ಲಾಗಿನ್ ಆದ ಮೇಲೆ UAN ಸಂಖ್ಯೆ ನಮೂದಿಸಿ, ಅದು ನಿಮ್ಮ ಪೇ ಸ್ಲಿಪ್​ನಲ್ಲಿ ಇರುತ್ತದೆ. ಒಂದು ವೇಳೆ ನೋಂದಣಿ ಆಗಿದ್ದಲ್ಲಿ ಪಾಸ್​ವರ್ಡ್ ಹಾಕಿ ಮತ್ತು Captchaವನ್ನು ಸಹ ನಮೂದಿಸಿ. ಹಂತ 3: ಮೇಲ್ಭಾಗದ ಟಾಪ್​ನಲ್ಲಿ “ಆನ್​ಲೈನ್ ಸರ್ವೀಸ್” ಎಂಬುದು ಇರುತ್ತದೆ. ONLINE CLAIM (FORM 31, 19, 10C ಮತ್ತು 10D). ಅದರ ಮೇಲೆ ಕ್ಲಿಕ್ ಮಾಡಿ. ಹಂತ 4: ಹೊಸ ವೆಬ್​ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಜನ್ಮ ದಿನಾಂಕ, ಆಧಾರ್​ನ ಕೊನೆಯ ನಾಲ್ಕು ಸಂಖ್ಯೆ ಇರುತ್ತದೆ. ವೆಬ್​ ಪೇಜ್​ನಲ್ಲಿ ಬ್ಯಾಂಕ್ ಖಾತೆಯನ್ನು ನಮೂದಿಸಬೇಕು. ಒಂದು ಸಲ ಭರ್ತಿ ಮಾಡಿದ ಮೇಲೆ Verify ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ವೆರಿಫೈ ಆದ ಮೇಲೆ “Certificate Of Undertaking” ಕೇಳಿ ಪಾಪ್- ಅಪ್ ಒಂದು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಹಂತ 5: ಆ ನಂತರ Proceed for online claim ಮೇಲೆ ಕ್ಲಿಕ್ ಮಾಡಿ. ಹಂತ 6: ಡ್ರಾಪ್ – ಡೌನ್ ಮೆನುದಲ್ಲಿ EPF advance (Form 31) ಅಂತ ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು. ಹಂತ 7: ಹಣ ಡ್ರಾ ಮಾಡುವ ಉದ್ದೇಶ ತಿಳಿಸಬೇಕು ಮತ್ತು ಅಲ್ಲಿ ಕೋವಿಡ್-19 ಎಂಬುದನ್ನು ನಮೂದಿಸಬೇಕು. ಹಂತ 8: ವಿಥ್​ಡ್ರಾ ಮೊತ್ತವನ್ನು ನಮೂದಿಸಬೇಕು ಮತ್ತು ಚೆಕ್​ನ ಸ್ಕ್ಯಾನ್ಡ್​ ಕಾಪಿಯನ್ನು ಅಪ್​ಲೋಡ್ ಮಾಡಬೇಕು. ಹಂತ 9: ಒನ್​ ಟೈಮ್ ಪಾಸ್​ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಅದನ್ನು ಭರ್ತಿ ಮಾಡಿ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.

ಅರ್ಜಿಯನ್ನು ಹಾಕಿದ ಮೇಲೆ ಅದರ ಸ್ಥಿತಿಗತಿಯನ್ನು ತಿಳಿಯಬಹುದು. ಅದೇ ಪುಟದಲ್ಲಿ ಆನ್​ಲೈನ್ ಸರ್ವೀಸ್ ಇದ್ದು, ಅಲ್ಲಿ ಸರ್ವೀಸ್ ಟ್ರಾಕ್ ಮಾಡಬಹುದು. ಟ್ರಾಕ್ ಸರ್ವೀಸಸ್ ಎಂಬುದರ ಮೇಲೆ ಕ್ಲಿಕ್ ಮಾಡಿ, ಅರ್ಜಿಯ ಸ್ಥಿತಿಗತಿ ತಿಳಿಯಬಹುದು. ಅಂದಹಾಗೆ ಬಹಳ ವೇಗವಾಗಿ ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಏಕೆಂದರೆ, ಕೋವಿಡ್- 19 ಆರ್ಥಿಕ ಬಿಕ್ಕಟ್ಟು ಇರುವುದರಿಂದ ಬೇಗ ವಿಲೇವಾರಿ ಆಗುತ್ತದೆ.

ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್​ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು

(Here is the step by step details for money withdraw and amount limit that can be withdrawn from EPFO for Covid- 19 crisis)

Published On - 1:35 pm, Mon, 24 May 21

Follow Us
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು