ನವದೆಹಲಿ, ಏಪ್ರಿಲ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಳೆದ ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇಪಿಎಫ್ ಸದಸ್ಯರನ್ನು ಸೇರಿಸುವುದರಿಂದ ಹಿಡಿದು, ಇಪಿಎಫ್ ಹಣ ವಿತ್ಡ್ರಾ (EPF money withdrawal) ಮಾಡುವವರೆಗೂ ಹಲವು ಪ್ರಕ್ರಿಯೆಗಳು ಹಿಂದಿನದಕ್ಕಿಂತಲೂ ಸರಳಗೊಳ್ಳುತ್ತಾ ಹೋಗುತ್ತಿವೆ. ಅವಶ್ಯಕತೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತಾ ಬರಲಾಗಿದೆ. ಈಗ ಇಪಿಎಫ್ ಖಾತೆ ಹೊಂದಿರುವವರು ಆನ್ಲೈನ್ನಲ್ಲೇ ಸುಲಭವಾಗಿ ಹಣ ವಿತ್ಡ್ರಾ ಮಾಡಬಹುದಾದಷ್ಟು ಸಲೀಸಾಗಿದೆ. ಇತ್ತೀಚೆಗೆ ಇಪಿಎಫ್ಒ ಸಂಸ್ಥೆ ಇಪಿಎಫ್ ವಿತ್ಡ್ರಾಯಲ್ ಪ್ರಕ್ರಿಯೆಯಲ್ಲಿ ಎರಡು ಕ್ರಮಗಳನ್ನು ಕೈಗೊಂಡಿತ್ತು. ಅದು ಒಟ್ಟಾರೆ ಪ್ರಕ್ರಿಯೆ ಸರಳಗೊಳ್ಳಲು ಮತ್ತು ಸುಲಭಗೊಳ್ಳಲು ಸಾಧ್ಯವಾಗಿದೆ.
ನೀವು ಇಪಿಎಫ್ ಹಣ ವಿತ್ಡ್ರಾ ಮಾಡಲು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆ ನಮೂದಿಸುವುದರ ಜೊತೆಗೆ ಚೆಕ್ ಲೀಫ್ನ ಫೋಟೋ ತೆಗೆದು ಅಪ್ಲೋಡ್ ಮಾಡಬೇಕಿತ್ತು. ಅಥವಾ ಬ್ಯಾಂಕ್ ಪಾಸ್ಬುಕ್ ಅನ್ನು ಅಟೆಸ್ಟ್ ಮಾಡಿಸಬೇಕಿತ್ತು.
ಇದನ್ನೂ ಓದಿ: ಎಸ್ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ
ಆದರೆ, ಯುಎಎನ್ ನಂಬರ್ ಸೀಡಿಂಗ್ ವೇಳೆ ಇಪಿಎಫ್ ಸದಸ್ಯರ ಹೆಸರು ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆ ನಡೆಸಲಾಗಿರುವುದರಿಂದ ಹೊಸದಾಗಿ ಚೆಕ್ ಲೀಫ್ ಅಪ್ಲೋಡ್ ಮಾಡುವ ಕ್ರಮ ಅವಶ್ಯಕ ಇರುವುದಿಲ್ಲ.
ಚೆಕ್ ಲೀಫ್ ಫೋಟೋ ಅಪ್ಲೋಡ್ ಮಾಡುವಾಗ ಸಾಕಷ್ಟು ಬಾರಿ ಫೋಟೋ ಗುಣಮಟ್ಟ ಸರಿಯಾಗಿ ಇರುವುದಿಲ್ಲ. ಇದರಿಂದ ಕ್ಲೇಮ್ ತಿರಸ್ಕೃತಗೊಳ್ಳುತ್ತಿದ್ದುದೇ ಹೆಚ್ಚು. ಹೀಗಾಗಿ, ಈ ಅನವಶ್ಯಕ ಪ್ರಕ್ರಿಯೆಯನ್ನು ನಿಲ್ಲಿಸಲು ಇಪಿಎಫ್ಒ ನಿರ್ಧರಿಸಿ, ಕಳೆದ ವರ್ಷ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತಂದಿತು. ಈಗ ಅದನ್ನು ಎಲ್ಲಾ ಇಪಿಎಫ್ ಖಾತೆದಾರರಿಗೂ ಜಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ: 2024-25ಕ್ಕೆ ಇಪಿಎಫ್ ಹಣಕ್ಕೆ ಶೇ. 8.25 ಬಡ್ಡಿ: ಸಿಬಿಟಿ ನಿರ್ಧಾರ; 1952ರಿಂದೀಚೆಗಿನ ಇಪಿಎಫ್ ಬಡ್ಡಿದರಗಳ ಪಟ್ಟಿ
ಯುಎಎನ್ಗೆ ಬ್ಯಾಂಕ್ ಅಕೌಂಟ್ ವಿವರವನ್ನು ಜೋಡಿಸುವುದು ಅವಶ್ಯಕತೆ ಇರುತ್ತದೆ. ಇಪಿಎಫ್ ಸದಸ್ಯರು ಬ್ಯಾಂಕ್ ಖಾತೆ ಸೀಡಿಂಗ್ಗೆ ಅರ್ಜಿ ಸಲ್ಲಿಸಿದ ಬಳಿಕ ಉದ್ಯೋಗದಾತರ (ಕಂಪನಿ) ಅನುಮೋದನೆ ಬೇಕಾಗುತ್ತದೆ. ಬ್ಯಾಂಕ್ನಿಂದ ವೆರಿಫಿಕೇಶನ್ ಆಗಲು 3 ದಿನ ಆಗುತ್ತದೆ. ಉದ್ಯೋಗದಾತರಿಂದ ವೆರಿಫೈ ಆಗಲು ಸರಾಸರಿ 13 ದಿನವಾಗುತ್ತಿದೆ. ಉದ್ಯೋಗದಾತರ ಅನುಮೋದನೆ ಅವಶ್ಯಕತೆ ಇಲ್ಲದಿರುವುದರಿಂದ ಆ ಪ್ರಕ್ರಿಯೆ ತೆಗೆದುಹಾಕಲು ನಿರ್ಧರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ