UAN: ಇಪಿಎಫ್​ನ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?

EPFO Updates: ಉದ್ಯೋಗಿ ಕೆಲಸ ಬದಲಿಸಿದಾಗೆಲ್ಲಾ ಪಿಎಫ್ ಖಾತೆ ಹೊಸದಾಗಿ ಸೃಷ್ಟಿಯಾಗುತ್ತದೆ. ಆದರೆ ಯುಎಎನ್ ನಂಬರ್ ಅಡಿಯಲ್ಲಿ ಎಲ್ಲಾ ಖಾತೆಗಳು ಇರುತ್ತವೆ. ಯೂನಿವರ್ಸಲ್ ಅಕೌಂಟ್ ನಂಬರ್ ಮರೆತುಹೋಗಿದ್ದರೆ ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ಅದನ್ನು ಪಡೆಯಬಹುದು. ಯುಎಎನ್ ನಂಬರ್ ಬಂದಿದ್ದು, ಅದಿನ್ನೂ ಆ್ಯಕ್ಟಿವೇಟ್ ಆಗಿಲ್ಲದಿದ್ದರೆ ಅದರ ಪ್ರಕ್ರಿಯೆ ಕೂಡ ಸರಳವಾಗಿದೆ.

UAN: ಇಪಿಎಫ್​ನ ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?
ಯೂನಿವರ್ಸಲ್ ಅಕೌಂಟ್ ನಂಬರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2024 | 10:32 AM

ಉದ್ಯೋಗಿಗಳ ಭವಿಷ್ಯದ ಜೀವನ ಭದ್ರತೆಗೆಂದು ಸರ್ಕಾರ ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ (EPF) ಯೋಜನೆ ನಡೆಸುತ್ತಿದೆ. ಉದ್ಯೋಗಿ, ಹಾಗೂ ಅವರು ಕೆಲಸ ಮಾಡುವ ಸಂಸ್ಥೆ ಮತ್ತು ಸರ್ಕಾರ ಇಷ್ಟೂ ಕಡೆಯಿಂದ ಇಪಿಎಫ್ ಖಾತೆಗೆ ಹಣ ಜಮೆ ಆಗುತ್ತಾ ಹೋಗುತ್ತದೆ. ಉದ್ಯೋಗಿ ನಿವೃತ್ತರಾದಾಗ ಅವರಿಗೆ ಲಂಪ್​ಸಮ್ ಆಗಿ ಒಂದಷ್ಟು ಹಣ ಸಿಗುತ್ತದೆ. ಉದ್ಯೋಗಿ ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಆದರೆ, ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ (UAN- Universal Account Number) ಅನ್ನು ತಂದಿದೆ. ಇದು ಒಬ್ಬ ವ್ಯಕ್ತಿಗೆ ಸಿಗುವ ಅನನ್ಯ ನಂಬರ್. ಇದೇ ನಂಬರ್ ಅಡಿಯಲ್ಲಿ ಆ ವ್ಯಕ್ತಿಯ ಎಲ್ಲಾ ಪಿಎಫ್ ಖಾತೆಗಳು ಜೋಡಿತವಾಗಿರುತ್ತವೆ. ಒಂದೇ ಸೂರಿನಲ್ಲಿ ಅವರ ಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಕೆಲಸ ಬದಲಿಸಿದಾಗ ಹಿಂದಿನ ಯುಎಎನ್ ನಂಬರ್ ಅನ್ನೇ ಬಳಸಬೇಕು.

ಒಂದು ವೇಳೆ ನಿಮಗೆ ಯುಎಎನ್ ನಂಬರ್ ಕಳೆದುಹೋಗಿದ್ದರೆ ಅಥವಾ ಮರೆತುಹೋಗುವ ಸಾಧ್ಯತೆಯೂ ಇರುತ್ತದೆ. ಇಂಥ ಸಂದರ್ಭದಲ್ಲಿ ನೀವು ಮನೆಯಲ್ಲೇ ಕೂತು ಯುಎಎನ್ ನಂಬರ್ ಅನ್ನು ತಿಳಿದುಕೊಳ್ಳಬಹುದು.

ಆನ್​ಲೈನ್​ನಲ್ಲಿ ಯುಎಎನ್ ನಂಬರ್ ತಿಳಿಯುವ ವಿಧಾನ

  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಬೇಕು. ಅದರ ವಿಳಾಸ: www.epfindia.gov.in
  • ಈ ವೆಬ್​ಸೈಟ್​ನ ಮುಖ್ಯಪುಟದಲ್ಲಿ ಸರ್ವಿಸಸ್ ಟ್ಯಾಬ್ ಅಡಿಯಲ್ಲಿ ‘ಫಾರ್ ಎಂಪ್ಲಾಯೀಸ್’ ಸೆಕ್ಷನ್​ನಲ್ಲಿ ‘ಮೆಂಬರ್ ಯುಎಎನ್ / ಆನ್​ಲೈನ್ ಸರ್ವಿಸ್’ ಅನ್ನು ಕ್ಲಿಕ್ ಮಾಡಿ
  • ಹೊಸ ಪುಟ ತೆರೆದುಕೊಳ್ಳುತ್ತದೆ. ಬಲ ಬದಿಯಲ್ಲಿ ನೀವು ಇಂಪಾರ್ಟೆಂಟ್ ಲಿಂಕ್ಸ್ ಅನ್ನುವ ಸೆಕ್ಷನ್ ನೋಡಬಹುದು. ಅದರಲ್ಲಿ ‘ನೋ ಯುವರ್ ಯುಎಎನ್’ ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಹಾಕಿ ಕ್ಲಿಕ್ ಮಾಡಿ.
  • ಮೊಬೈಲ್ ನಂಬರ್​ಗೆ ಬರುವ ಒಟಿಪಿಯನ್ನು ಹಾಕಿ.
  • ನಿಮ್ಮ ಹೆಸರು, ಜನ್ಮದಿನಾಂಕ, ಪಿಎಫ್ ಮೆಂಬರ್ ಐಡಿ, ಆಧಾರ್ ನಂಬರ್ / ಪ್ಯಾನ್ ನಂಬರ್ ಅನ್ನು ಹಾಕಿರಿ.
  • ‘ಶೋ ಮೈ ಯುಎಎನ್’ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ನಂಬರ್​ಗೆ ಯುಎಎನ್ ನಂಬರ್ ವಿವರ ಇರುವ ಸಂದೇಶ ಬರುತ್ತದೆ.

ಇದನ್ನೂ ಓದಿ: Krutrim Record: ಒಂದು ಬಿಲಿಯನ್ ಡಾಲರ್ ಮೌಲ್ಯದ ಭಾರತದ ಮೊದಲ ಎಐ ಕಂಪನಿ; ಓಲಾ ಸ್ಥಾಪಕರ ಹೊಸ ಸಾಹಸಕ್ಕೆ ಫಲಶೃತಿ

ಇವಲ್ಲದೇ ನಿಮ್ಮ ಸ್ಯಾಲರಿ ಸ್ಲಿಪ್​ನಲ್ಲಿ ಯುಎಎನ್ ನಂಬರ್ ನಮೂದಾಗಿರುತ್ತದೆ. ಯೂನಿವರ್ಸಲ್ ಅಕೌಂಟ್ ನಂಬರ್ ಅನ್ನು ಉದ್ಯೋಗಿ ಕೆಲಸ ಮಾಡುವ ಸಂಸ್ಥೆಯ ವತಿಯಿಂದ ಸೃಷ್ಟಿ ಮಾಡಲಾಗುತ್ತದೆ. ಒಮ್ಮೆ ಒಂದು ಯುಎಎನ್ ನಂಬರ್ ರಚನೆಯಾದರೆ ಆ ಉದ್ಯೋಗಿ ಅದನ್ನು ಖಾಯಂ ಆಗಿ ಉಪಯೋಗಿಸಬೇಕು.

ಯುಎಎನ್ ನಂಬರ್ ಸಕ್ರಿಯಗೊಳಿಸುವುದು ಹೇಗೆ?

ನಿಮಗೆ ಈಗ ಯುಎಎನ್ ನಂಬರ್ ಸಿಕ್ಕಿದ್ದು, ಅದಿನ್ನೂ ಆ್ಯಕ್ಟಿವೇಟ್ ಆಗಿಲ್ಲವಾದಲ್ಲಿ ಅದೂ ಕೂಡ ಸುಲಭ ಕ್ರಿಯೆಯಲ್ಲಿ ಮಾಡಬಹುದು.

  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ಅಲ್ಲಿ ‘ಫಾರ್ ಎಂಪ್ಲಾಯೀ’ ಮೇಲೆ ಕ್ಲಿಕ್ ಮಾಡಿ.
  • ಸರ್ವಿಸಸ್ ಪುಟದಲ್ಲಿ ಮೆಂಬರ್ ಯುಎಎನ್ / ಆನ್​ಲೈನ್ ಸರ್ವಿಸ್’ ಅನ್ನು ಆಯ್ದುಕೊಳ್ಳಿ.
  • ಆಕ್ಟಿವೇಟ್ ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಆಯ್ದುಕೊಳ್ಳಿ
  • ಯುಎಎನ್ ನಂಬರ್, ಜನ್ಮದಿನಾಂಕ, ಮೊಬೈಲ್ ನಂಬರ್, ಕ್ಯಾಪ್ಚಾ ಹಾಕಿರಿ. ಬಳಿಕ ‘ಗೆಟ್ ಆಥರೈಸೇಶನ್ ಪಿನ್’ ನಮೂದಿಸಿ.
  • ನೊಂದಾಯಿತ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಹಾಕಿರಿ. ನಿಯಮಗಳಿಗೆ ಒಪ್ಪಿಗೆ ನೀಡಿ ಕ್ಲಿಕ್ ಮಾಡಿದಾಗ ಯುಎಎನ್ ಸಕ್ರಿಯಗೊಳ್ಳುತ್ತದೆ.

ಸಾಮಾನ್ಯವಾಗಿ ಯುಎಎನ್ ಆ್ಯಕ್ಟಿವೇಶನ್ ಆಗಲು 6 ಗಂಟೆ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ