
ನವದೆಹಲಿ, ಜುಲೈ 8: ಇಪಿಎಫ್‌ಒ (EPFO – ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ತನ್ನ ಡಿಜಿಟಲ್ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ‘EPFO 2.01’ ಎಂಬ ಹೊಸ ಸ್ವರೂಪದಲ್ಲಿ ಈ ವಾರದಲ್ಲಿ ಪ್ರಾರಂಭಿಸಲಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ತಾಂತ್ರಿಕ ಬದಲಾವಣೆಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದೆ ಇಪಿಎಫ್ ಡಿಜಿಟಲ್ ಪ್ಲಾಟ್ಫಾರ್ಮ್ ಸಾರ್ವಜನಿಕವಾಗಿ ಅಲಭ್ಯವಾಗಿದ್ದು ಇದೇ ಕಾರಣಕ್ಕೆ. ಹೊಸ ಕೇಂದ್ರೀಕೃತ ಸಿಸ್ಟಂ ಅಳವಡಿಕೆಯಾಗುತ್ತಿದ್ದುದರಿಂದ ಇಪಿಎಫ್‌ಒ ಡಿಜಿಟಲ್ ಪ್ಲಾಟ್ಫಾರ್ಮ್ ಪುನಾರಂಭಗೊಳ್ಳುವುದು ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಸೈಟ್ಸ್ (CITES- Centralised IT Enabled Services) ಅಡಿಯಲ್ಲಿ ಪ್ಲಾಟ್ಫಾರ್ಮ್ಗೆ ಉನ್ನತ ತಂತ್ರಜ್ಞಾನದ ಸ್ಪರ್ಶ ತರಲಾಗಿದೆ. ಇಪಿಎಫ್ ಸೇವೆಗಳು ಹೆಚ್ಚು ವೇಗ, ಹೆಚ್ಚು ಪಾರದರ್ಶಕ ಮತ್ತು ಹೆಚ್ಚು ಸುಲಭವಾಗಿರುವಂತೆ ಈ ತಂತ್ರಜ್ಞಾನ ನೆರವಾಗಿದೆ. ಹೊಸ ಸ್ವರೂಪದ EPFO 2.01 ದಲ್ಲಿ ಏನೆಲ್ಲಾ ಬದಲಾವಣೆ ಇದೆ?
ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ
ಈ ಮೇಲ್ದರ್ಜೆಯು ಇಪಿಎಫ್‌ಒ ಸೇವೆಗಳನ್ನು ಹೆಚ್ಚು ಪಾರದರ್ಶಕ, ವೇಗವಾದ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ಇಪಿಎಫ್ ಅಕೌಂಟ್ಗಳಿಗೆ 2025-26ನೇ ಸಾಲಿನ 8.25% ಬಡ್ಡಿಯು (EPF interest ಮುಂದಿನ ವಾರದಲ್ಲಿ ಜಮೆಯಾಗಲಿದೆ. ಸುಮಾರು 34 ಕೋಟಿ ಖಾತೆಗಳಿಗೆ ಒಟ್ಟು ₹1.44 ಲಕ್ಷ ಕೋಟಿ ಬಡ್ಡಿ ಹಣ ಜಮೆಯಾಗಲಿದೆ. ಸದಸ್ಯರು ಜುಲೈ 15 ರ ವೇಳೆಗೆ ತಮ್ಮ ಪಾಸ್‌ಬುಕ್‌ನಲ್ಲಿ ಈ ಹಣವನ್ನು ನೋಡಬಹುದು.
ಇಪಿಎಫ್‌ಒ ಸಿಸ್ಟಂ ಅಪ್ಗ್ರೇಡ್ ಆಗಿರುವುದು ಯುಪಿಐ ಫೀಚರ್ ಜಾರಿ ಕುರಿತು ನಿರೀಕ್ಷೆ ಹೆಚ್ಚಿದೆ. ವರದಿ ಪ್ರಕಾರ, ಯುಪಿಐ ಮತ್ತು ಎಟಿಎಂ ಮೂಲಕ ಇಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಬಹುದು ಎನ್ನಲಾಗಿದೆ. ಆದರೆ, ಯಾವ ದಿನದೊಳಗೆ ಇದು ಆಗುತ್ತದೆ ಗೊತ್ತಿಲ್ಲ.
ಪ್ರಶ್ನೆ: ಇಪಿಎಫ್ ಬಡ್ಡಿಹಣ ಯಾವಾಗ ಜಮೆ ಆಗುತ್ತದೆ?
ಉತ್ತರ: 2025-26ರ ವರ್ಷಕ್ಕೆ ಇಪಿಎಫ್ ಅಕೌಂಟ್ಗಳಿಗೆ ಬಡ್ಡಿ ಸಂದಾಯ 2026ರ ಜುಲೈ 2ನೇ ವಾರದಲ್ಲಿ ಆಗುತ್ತದೆ.
ಪ್ರಶ್ನೆ: ಪರಿಷ್ಕೃತ EPFO ಪೋರ್ಟಲ್ನ ವಿಶೇಷತೆ ಏನು?
ಉತ್ತರ: Unified Member Portal ನಲ್ಲಿ ಬ್ಯಾಲೆನ್ಸ್ ಪರಿಶೀಲನೆ, ಕ್ಲೈಮ್ ಸ್ಥಿತಿ, ಪಿಂಚಣಿ ಎಲ್ಲ ವಿವರವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪಡೆಯಬಹುದು.
ಪ್ರಶ್ನೆ: ಇಪಿಎಫ್ ಅಕೌಂಟ್ನಲ್ಲಿ ಸಮಸ್ಯೆಯಾದರೆ ನಿಗದಿತ ಪ್ರಾದೇಶಿಕ ಕಚೇರಿಗೆ ಹೋಗಬೇಕಾ?
ಉತ್ತರ: ಹೊಸ ಇಪಿಎಫ್ ಸಿಸ್ಟಂನಲ್ಲಿ ಕೇಂದ್ರೀಕೃತ ವ್ಯವಸ್ಥೆ ತರಲಾಗಿದೆ. ದೇಶದ ಯಾವುದೇ ಇಪಿಎಫ್ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಳ್ಳಬಹುದು.
ಪ್ರಶ್ನೆ: ಇಪಿಎಫ್ನಲ್ಲಿ ಯುಪಿಐ, ಎಟಿಎಂ ಫೀಚರ್ ಯಾವಾಗ?
ಉತ್ತರ: ಇಪಿಎಫ್ ಹಣವನ್ನು ಯುಪಿಐ ಅಥವಾ ಎಟಿಎಂನಲ್ಲಿ ವಿತ್ಡ್ರಾ ಮಾಡುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಲಿದೆ.
Published On - 5:58 pm, Wed, 8 July 26