AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

India plans to open Insurance sector to co-operatives: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ಸಹಕಾರಿ ಇನ್ಷೂರೆನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಪ್ರಕಟಿಸಿದ್ದಾರೆ. ಇಫ್​ಕೋ-ಟೋಕಿಯೋ ಇನ್ಷೂರೆನ್ಸ್ ಸೇವೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರ ಸಹಕಾರಿ ವಿಮಾ ಸೇವೆಗೆ ಕೈಹಾಕಿದೆ. ಕ್ಯಾಬ್ ಅಗ್ರಿಗೇಟರ್ ಆಗಿರುವ ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಯುಟಿಲಿಟಿ ಅಗ್ರಿಗೇಟರ್ ಸ್ಥಾಪಿಸಲಿದೆ ಸರ್ಕಾರ.

ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ
ಆರೋಗ್ಯ ವಿಮೆ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 08, 2026 | 3:29 PM

Share

ಮುಖ್ಯಾಂಶಗಳು

  • ಅಮಿತ್ ಶಾ ಅವರು ಹೊಸ ಸಹಕಾರಿ ಇನ್ಷೂರೆನ್ಸ್ ಸಂಸ್ಥೆ ಸ್ಥಾಪಿಸುವ ಇರಾದೆ ಪ್ರಕಟಿಸಿದ್ದಾರೆ.
  • ಇಫ್​ಕೋ-ಟೋಕಿಯೋ ಇನ್ಷೂರೆನ್ಸ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರ ಸಹಕಾರಿ ವಿಮಾ ಸೇವೆಗೆ ಯೋಜಿಸಿದೆ.
  • ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಯುಟಿಲಿಟಿ ಅಗ್ರಿಗೇಟರ್ ಸ್ಥಾಪಿಸಲಿದೆ ಸರ್ಕಾರ.

ನವದೆಹಲಿ, ಜುಲೈ 8: ಇನ್ಷೂರೆನ್ಸ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳು (Co-operative societies) ಎಂಟ್ರಿ ಕೊಡಲಿವೆ. ಭಾರತದಲ್ಲಿ ಕೃಷಿ ಮತ್ತು ಸಾಲ ಸೇವೆಗಳಿಗೆ ಸೀಮಿತವಾಗಿದ್ದ ಸಹಕಾರಿ ಕ್ಷೇತ್ರದ ವ್ಯಾಪ್ತಿ ಈಗ ವಿಸ್ತರಣೆ ಆಗಲಿದೆ. ಸಹಕಾರಿ ಸಂಸ್ಥೆಗಳು ಸೇರಿ ಭಾರತ್ ಟ್ಯಾಕ್ಸಿಯನ್ನು (Bharat Taxi) ನಡೆಸುತ್ತಿರುವ ರೀತಿಯಲ್ಲಿ ಸಹಕಾರಿ ಸಂಸ್ಥೆಗಳಿಗೆ ಇನ್ಷೂರೆನ್ಸ್ ಸೇವೆ ಒದಗಿಸುವ ಅವಕಾಶ ನೀಡಲು ಸರ್ಕಾರ ಯೋಜಿಸಿದೆ. ರೈತರ ಸಹಕಾರಿ ಸಂಸ್ಥೆಯಾದ IFFCO ಮತ್ತು ಟೋಕಿಯೋ ಇನ್ಷೂರೆನ್ಸ್ ಕಂಪನಿಗಳ ಸಹಭಾಗಿತ್ವದಲ್ಲಿ ಸ್ಥಾಪನೆಯಾದ IFFCO ಟೋಕಿಯೋ ಜನರಲ್ ಇನ್ಷೂರೆನ್ಸ್ ಕಂಪನಿ ಒಳ್ಳೆಯ ಯಶಸ್ಸು ಪಡೆದಿದೆ. ಇದೇ ಸ್ಫೂರ್ತಿಯಲ್ಲಿ ಸರ್ಕಾರವು ಸಹಕಾರಿ ಸಂಸ್ಥೆಗಳ ಸಹಯೋಗದಲ್ಲಿ ಹೊಸ ಇನ್ಷೂರೆನ್ಸ್ ಕಂಪನಿ ಸ್ಥಾಪಿಸುವ ಇರಾದೆ ಹೊಂದಿದೆ.

ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮೊನ್ನೆಯಷ್ಟೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸೋಮವಾರ ನಡೆದ ಸಹಕಾರ ಸಚಿವಾಲಯದ ಐದನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಎರಡು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಒಂದು, ಸಹಕಾರಿ ತತ್ವದಲ್ಲಿ ಇನ್ಷೂರೆನ್ಸ್ ಸಂಸ್ಥೆ ಸ್ಥಾಪಿಸುವುದು. ಮತ್ತೊಂದು, ಯುಟಿಲಿಟಿ ಅಗ್ರಿಗೇಟರ್ ಕೋಆಪರೇಟಿವ್ ಸೇವೆ ಆರಂಭಿಸುವುದು. ಇನ್ಷೂರೆನ್ಸ್ ನಿಯಂತ್ರಣ ಪ್ರಾಧಿಕಾರವಾದ ಐಆರ್​ಡಿಎಐನ ಅನುಮೋದನೆ ಪಡೆದ ಬಳಿಕ ಕೆಲವೇ ತಿಂಗಳಲ್ಲಿ ಸಹಕಾರಿ ವಿಮಾ ಸಂಸ್ಥೆ ಆರಂಭಗೊಳ್ಳಬಹುದು.

ಇದನ್ನೂ ಓದಿ: ಎಸ್ಸೆಮ್ಮೆಸ್ ಅಲರ್ಟ್​ಗಳಿಗೆ ಗ್ರಾಹಕರಿಂದ ಹಣ ಪಡೆಯುವಂತಿಲ್ಲ; ಆರ್​ಬಿಐ ನಿಯಮದಿಂದ ಬ್ಯಾಂಕುಗಳಿಗೆ 300 ಕೋಟಿ ರೂ ಆದಾಯನಷ್ಟ?

ಸಹಕಾರಿ ಇನ್ಷೂರೆನ್ಸ್ ಕಂಪನಿ ಯಶಸ್ವಿಯಾಗುವುದಾ?

ಭಾರತದಲ್ಲಿ ಸಹಕಾರಿ ಕ್ಷೇತ್ರ ಬಹಳ ಬಲವಾಗಿದೆ. ಇಲ್ಲಿ ಎಂಟೂವರೆ ಲಕ್ಷ ಸಹಕಾರಿ ಸಂಸ್ಥೆಗಳಿವೆ. ಇದು ಬಹಳ ಬೃಹತ್ತಾದ ಸಂಖ್ಯೆ. ಸಣ್ಣ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಹಕಾರಿ ಸಂಸ್ಥೆಗಳು ಬಹಳ ಶಕ್ತಿ ಹೊಂದಿವೆ. ಸಹಕಾರಿ ಬ್ಯಾಂಕುಗಳಲ್ಲಿ 22 ಕೋಟಿಗೂ ಅಧಿಕ ಡೆಪಾಸಿಟ್ ಅಕೌಂಟ್​ಗಳಿವೆ. 150ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಇನ್ಷೂರೆನ್ಸ್ ಉತ್ಪನ್ನಗಳನ್ನು ಮಾರಲು ಕಾರ್ಪೊರೇಟ್ ಏಜೆಂಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿವೆ.

ಇತ್ತೀಚೆಗೆ ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿತ್ತು. ಅದರಲ್ಲಿ ಇನ್ಷೂರೆನ್ಸ್ ಉತ್ಪನ್ನಗಳನ್ನು ಮಾರುವ ವಿಚಾರದಲ್ಲಿ ಸಹಕಾರಿ ಸಂಸ್ಥೆಗಳು ಮಧ್ಯವರ್ತಿ ಪಾತ್ರಕ್ಕೆ ಸೀಮಿತವಾಗದೆ, ಖುದ್ದಾಗಿ ಇನ್ಷೂರೆನ್ಸ್ ಕಂಪನಿಗಳನ್ನು ಸ್ಥಾಪಿಸುವ ಅವಕಾಶ ಹೊಂದಿರುತ್ತವೆ.

ಇದನ್ನೂ ಓದಿ: ವಿಶ್ವ ಬ್ಯಾಂಕ್​ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು

ಭಾರತದ ವಿಮಾ ಕ್ಷೇತ್ರಕ್ಕೆ ಮತ್ತಷ್ಟು ಬಲ

2047ರೊಳಗೆ ದೇಶದ ಪ್ರತಿಯೊಬ್ಬರನ್ನೂ ವಿಮಾ ವ್ಯಾಪ್ತಿ ತರಬೇಕೆನ್ನುವುದು ಸರ್ಕಾರದ ಮಹತ್ವಾಕಾಂಕ್ಷೆ. ದಶಕದ ಹಿಂದೆ ಇನ್ಷೂರೆನ್ಸ್ ಸೆಕ್ಟರ್ ಅನ್ನು ಖಾಸಗಿ ಕ್ಷೇತ್ರಕ್ಕೆ ತೆರೆಯಲಾಗಿತ್ತು. ಇದರಿಂದ ಸೀಮಿತ ಮಟ್ಟದಲ್ಲಿ ಇನ್ಷೂರೆನ್ಸ್ ತಲುಪುವಿಕೆ ಸಾಧ್ಯವಾಗಿದೆ. ಅವುಗಳ ವ್ಯಾಪ್ತಿ ನಗರ ಪ್ರದೇಶಗಳಿಗೆ ಹೆಚ್ಚು ಸೀಮಿತವಾಗಿದೆ. ಆದರೆ, ಸಹಕಾರಿ ಸಂಸ್ಥೆಗಳು ಈ ಕ್ಷೇತ್ರಕ್ಕೆ ಇಳಿದರೆ ಹೆಚ್ಚಿನ ಜನರಿಗೆ ಇನ್ಷೂರೆನ್ಸ್ ಸೇವೆ ತಲುಪಿಸಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Wed, 8 July 26

Follow Us
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ
ಇಂಡೋನೇಷ್ಯಾದ ಭವ್ಯ 'ಪ್ರಂಬಾನನ್' ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ
ಭಾರತ-ಇಂಡೋನೇಷ್ಯಾ ಸ್ನೇಹ ಅತ್ಯಂತ ಗಟ್ಟಿ ಮತ್ತು ರೋಮಾಂಚಕ: ಮೋದಿ
ಭಾರತ-ಇಂಡೋನೇಷ್ಯಾ ಸ್ನೇಹ ಅತ್ಯಂತ ಗಟ್ಟಿ ಮತ್ತು ರೋಮಾಂಚಕ: ಮೋದಿ