AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲೂಗಡ್ಡೆಯಿಂದ ಎಥನಾಲ್ ಇಂಧನ; ಸಿಪಿಆರ್​ಐನಿಂದ ಸದ್ಯದಲ್ಲೇ ಪ್ರಾಯೋಗಿಕ ಘಟಕ

Ethanol from potato waste: ಪೆಟ್ರೋಲ್​ಗೆ ಪರ್ಯಾಯವಾಗಿ ಎಥನಾಲ್ ಇಂಧನ ತಯಾರಿಸಲಾಗುತ್ತಿದೆ. ಕಬ್ಬು ಮತ್ತು ಮುಸುಕಿನ ಜೋಳದಿಂದ ಎಥನಾಲ್ ಉತ್ಪಾದನೆ ಆಗುತ್ತಿದೆ. ಈಗ ಆಲೂಗಡ್ಡೆಯಿಂದಲೂ ತಯಾರಿಸುವ ಕಾರ್ಯ ಶುರುವಾಗುತ್ತಿದೆ. ಸೆಂಟ್ರಲ್ ಪೊಟಾಟೋ ರೀಸರ್ಚ್ ಇನ್ಸ್​ಟಿಟ್ಯೂಟ್​ನಿಂದ ಪ್ರಾಯೋಗಿಕ ಘಟಕ ಸ್ಥಾಪನೆಗೆ ಪ್ರಸ್ತಾಪ ಬಂದಿದೆ. ಉತ್ತರಪ್ರದೇಶ ಅಥವಾ ಪಶ್ಚಿಮ ಬಂಗಾಳದಲ್ಲಿ ಘಟಕ ಆರಂಭಿಸಬಹುದು.

ಆಲೂಗಡ್ಡೆಯಿಂದ ಎಥನಾಲ್ ಇಂಧನ; ಸಿಪಿಆರ್​ಐನಿಂದ ಸದ್ಯದಲ್ಲೇ ಪ್ರಾಯೋಗಿಕ ಘಟಕ
ಆಲೂಗಡ್ಡೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2024 | 6:11 PM

Share

ನವದೆಹಲಿ, ಸೆಪ್ಟೆಂಬರ್ 24: ಪೆಟ್ರೋಲ್, ಡೀಸೆಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಪರಿಸರಕ್ಕೆ ಹಾನಿಯಾಗದ ಇತರ ಪರ್ಯಾಯ ಇಂಧನಗಳಿಗೆ ಒತ್ತು ಕೊಡುತ್ತಿದೆ. ಈ ಪರ್ಯಾಯ ಇಂಧನಗಳಲ್ಲಿ ಎಥನಾಲ್ ಕೂಡ ಒಂದು. ಸದ್ಯ ಕಬ್ಬು ಮತ್ತು ಜೋಳದಿಂದ ಎಥನಾಲ್ ಅನ್ನು ಹೆಚ್ಚಾಗಿ ತಯಾರಿಸಲಾಗುತ್ತಿದೆ. ಹಾಗೆಯೇ, ಸ್ಟಾರ್ಚ್ ಅಂಶ ಇರುವ ಆಲೂಗಡ್ಡೆ, ಮರಗೆಣಸು, ತರಕಾರಿಗಳಿಂದಲೂ ಎಥನಾಲ್ ಉತ್ಪಾದನೆ ಮಾಡಬಹುದು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದೀಗ ಆಲೂಗಡ್ಡೆಯಿಂದ ಎಥನಾಲ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಕೇಂದ್ರೀಯ ಆಲೂ ಸಂಶೋಧನಾ ಸಂಸ್ಥೆ (ಸಿಪಿಆರ್​ಐ) ಅಭಿವೃದ್ಧಿಪಡಿಸಿದೆ. ಇದರ ಪ್ರಾಯೋಗಿಕ ಘಟಕ ಸದ್ಯದಲ್ಲೇ ಸ್ಥಾಪನೆ ಆಗಲಿದೆ.

ಶಿಮ್ಲಾ ಮೂಲದ ಸಿಪಿಆರ್​ಐ ಸಂಸ್ಥೆ ಆಲೂಗಡ್ಡೆ ತ್ಯಾಜ್ಯವನ್ನು ಎಥನಾಲ್ ಆಗಿ ಹೇಗೆ ಪರಿವರ್ತಿಸಬಹುದು ಎಂದು ಲ್ಯಾಬ್​ನಲ್ಲಿ ಯಶಸ್ವಿ ಪರೀಕ್ಷೆಗಳನ್ನು ಮಾಡಿದೆ. ಈ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡುತ್ತದಾ ಇಲ್ಲವಾ ಎಂಬುದನ್ನು ಪರೀಕ್ಷಿಸಲು ಉತ್ತರಪ್ರದೇಶ ಅಥವಾ ಪಶ್ಚಿಮ ಬಂಗಾಳದಲ್ಲಿ ಒಂದು ಪ್ರಾಯೋಗಿಕ ಘಟಕ ಸ್ಥಾಪಿಸಲು ಯೋಜಿಸಿದೆ.

ಇದನ್ನೂ ಓದಿ: ಈ ವರ್ಷ ಜಿಡಿಪಿ ಹೆಚ್ಚಳ ಶೇ. 6.8; ಮುಂದಿನ ಸಭೆಯಲ್ಲೇ ಆರ್​ಬಿಐನಿಂದ ಬಡ್ಡಿ ಇಳಿಕೆ: ಎಸ್ ಅಂಡ್ ಪಿ ನಿರೀಕ್ಷೆ

ಆಲೂಗಡ್ಡೆ ಉತ್ಪಾದನೆ ಚೀನಾ ಬಿಟ್ಟರೆ ಭಾರತದಲ್ಲೇ ಹೆಚ್ಚು. ವರ್ಷಕ್ಕೆ ಸರಾಸರಿಯಾಗಿ 5.6 ಕೋಟಿ ಟನ್ ಆಲೂಗಡ್ಡೆಯನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ತ್ಯಾಜ್ಯದ ಹಾಗೆ ಬಿಸಾಡಲಾಗುತ್ತಿರುವ ಆಲೂಗಡ್ಡೆ ಶೇ. 15ರಷ್ಟಿದೆ. ಫಸಲಿನ ಹಂತದಿಂದ ಹಿಡಿದು ಮಾರುಕಟ್ಟೆ ಬರುವವರೆಗೆ ಹಾಳಾಗುವ ಆಲೂಗಡ್ಡೆ ಪ್ರಮಾಣ ಇನ್ನೂ ಹೆಚ್ಚಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಆಲೂಗಡ್ಡೆಯು ಎಥನಾಲ್ ಉತ್ಪಾದನೆಗೆ ಹೇಳಿ ಮಾಡಿಸಿದಂತಿರುತ್ತದೆ ಎಂಬುದು ತಜ್ಞರ ಅನಿಸಿಕೆ.

ಭಾರತದಲ್ಲಿ ಬೆಳೆಯಲಾಗುವ ಆಲೂಗಡ್ಡೆಯಲ್ಲಿ ಶೇ. 8-10ರಷ್ಟವು ಚಿಪ್ಸ್, ಫ್ರೈ ಇತ್ಯಾದಿ ಉತ್ಪನ್ನಗಳ ತಯಾರಿಕೆಗೆ ಬಳಕೆ ಆಗುತ್ತವೆ. ಕಟಾವು ಆದ ಬಳಿಕ ಅಸಮರ್ಪಕವಾದ ಉಗ್ರಾಣ ವ್ಯವಸ್ಥೆ, ಸಾಗಾಣಿಕೆ, ನಿರ್ವಹಣೆ ಇತ್ಯಾದಿ ಕಾರಣಗಳಿಂದ ಶೇ. 20-25ರಷ್ಟು ಆಲೂಗಡ್ಡೆ ಹಾಳಾಗಿ ಹೋಗುತ್ತವೆ ಎನ್ನುವ ಅಂದಾಜಿದೆ.

ಆಲೂಗಡ್ಡೆ ಹೆಚ್ಚಾಗಿ ಬೆಳೆಯಲಾಗುವ ಉತ್ತರಪ್ರದೇಶ ಅಥವಾ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಿಪಿಆರ್​ಐನ ಪ್ರಾಯೋಗಿಕ ಘಟಕವು ಸ್ಥಾಪನೆಯಾಗಬಹುದು. ಆಲೂಗಡ್ಡೆಯ ಸಿಪ್ಪೆ, ತ್ಯಾಜ್ಯ, ಕೊಳೆತ ಆಲೂಗಡ್ಡೆ, ಕಳಪೆ ಗುಣಮಟ್ಟದ ಆಲೂಗಡ್ಡೆಗಳನ್ನು ಸಂಗರಹಿಸಿ ಅದರಿಂದ ಎಥನಾಲ್ ಅನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ಭಾರತದ ಶಕ್ತಿ..! ಅಮೆರಿಕದ ಸಹಭಾಗಿತ್ವದಲ್ಲಿ ಮೊದಲ ರಾಷ್ಟ್ರೀಯ ಭದ್ರತಾ ಸೆಮಿಕಂಡಕ್ಟರ್ ಫ್ಯಾಬ್ ಘಟಕ

ಸದ್ಯ ಪೆಟ್ರೋಲ್​ಗೆ ಸೀಮಿತ ಪ್ರಮಾಣದಲ್ಲಿ ಎಥನಾಲ್ ಅನ್ನು ಮಿಶ್ರಣ ಮಾಡಿ ಮಾರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್​ಗೆ ಶೇ. 90ಕ್ಕಿಂತಲೂ ಹೆಚ್ಚು ಎಥನಾಲ್ ಮಿಶ್ರಣ ಮಾಡುವ ಯೋಜನೆ ಅಥವಾ ಗುರಿ ಸರ್ಕಾರದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್