ನವದೆಹಲಿ, ಆಗಸ್ಟ್ 4: ಭಾರತದ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಗಳಿಸಿದ ಹಲವು ಹಿರಿಯರು ಬೇರೆ ಸಂಸ್ಥೆಗಳನ್ನು ಸೇರಿ ಸಿಇಒಗಳಾಗಿರುವುದು ಇದು. ಈಗ ಈ ಪಟ್ಟಿಗೆ ಇನ್ಫೋಸಿಸ್ನ ಮಾಜಿ ಹಿರಿಯ ಉದ್ಯೋಗಿಯೊಬ್ಬರು ಸೇರಿದ್ದಾರೆ. ಇನ್ಫೋಸಿಸ್ನ ಮಾಜಿ ಹಿರಿಯ ಉಪಾಧ್ಯಕ್ಷ ಚಾರ್ಲ್ಸ್ ಸಲಾಮೆಹ್ (Charles Salameh) ಅವರು ಕೆನಡಾ ಮೂಲದ ಸಂಗೋಮ ಟೆಕ್ನಾಲಜೀಸ್ ಕಾರ್ಪೊರೇಶನ್ (Sangoma Technologies Corporation) ಸಂಸ್ಥೆಗೆ ಸಿಇಒ ಆಗಿದ್ದಾರೆ. ಚಾರ್ಲ್ಸ್ ಸಲಾಮೆಹ್ ಸೆಪ್ಟೆಂಬರ್ 1ರಂದು ನೂತನ ಸಿಇಒ ಆಗುವುದನ್ನು ಸಂಗೋಮ ಟೆಕ್ನಾಲಜೀಸ್ ಸಂಸ್ಥೆ ಅಮೆರಿಕದ ಷೇರು ಮತ್ತು ವಿನಿಮಯ ಪ್ರಾಧಿಕಾರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ. ಮಾಜಿ ಇನ್ಫೋಸಿಸ್ ಉದ್ಯೋಗಿಯು ಆ ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯರೂ ಆಗಲಿದ್ದಾರೆ.
ಚಾರ್ಲ್ಸ್ ಸಲಾಮೆಹ್ ಅವರು ಇನ್ಫೋಸಿಸ್ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದರು. ಅಕೌಂಟ್ ಎಕ್ಸ್ಪ್ಯಾನ್ಷನ್ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದ ಅವರು ಇನ್ಫೋಸಿಸ್ ವ್ಯವಹಾರ ವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದರು. ಇನ್ಫೋಸಿಸ್ಗೆ ಮುನ್ನ ಅವರು ಬೆಲ್ ಕೆನಡಾ, ನಾರ್ಟೆಲ್ ನೆಟ್ವರ್ಕ್ಸ್, ಎಚ್ಪಿ, ಡಿಎಸ್ಸಿ ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪಿ ಅಂಡ್ ಪಿ ಡಬಲ್ ಡೆಕರ್ ರೈಲು; ಕೆಳಗೆ ಸರಕು, ಮೇಲೆ ಜನರು
ಕಾರ್ಪೊರೇಟ್ ವಲಯದಲ್ಲಿ ಸಿಇಒಗಳದ್ದು ಜವಾಬ್ದಾರಿಯುತ ಸ್ಥಾನ. ವ್ಯವಹಾರ ಚತುರತೆ ಮತ್ತು ಸಾಂಘಿಕ ಶಕ್ತಿ ಇರುವ ತಂಡವನ್ನು ಮುನ್ನಡೆಸುವ ಶಕ್ತಿ ಇರುವ ಸಿಇಒಗಳಿಗೆ ಬಹಳ ಬೇಡಿಕೆ ಇದೆ. ಅನುಭವಿಗಳಾದ ಹಲವು ಹಿರಿಯರು ಬೇರೆ ಬೇರೆ ಕಂಪನಿಗಳನ್ನು ಸೇರಿ ಸಿಇಒಗಳಾಗಿರುವುದುಂಟು. ಇನ್ಫೋಸಿಸ್ನಿಂದಲೇ ಹಲವು ಉನ್ನತ ಅಧಿಕಾರಿಗಳು ಬೇರೆಡೆಗೆ ವಲಸೆ ಹೋಗಿ ನಿರ್ಣಾಯಕ ಹುದ್ದೆ ಪಡೆದಿರುವುದುಂಟು.
ಇನ್ಫೋಸಿಸ್ನ ಮಾಜಿ ಅಧ್ಯಕ್ಷ ರವಿಕುಮಾರ್ ಈ ವರ್ಷದ ಆರಂಭದಲ್ಲಿ ಕಾಗ್ನೈಜೆಂಟ್ ಕಂಪನಿಯ ಸಿಇಒ ಆಗಿ ನೇಮಕವಾದರು.
ಇನ್ಫೋಸಿಸ್ನ ಮತ್ತೊಬ್ಬ ಮಾಜಿ ಅಧ್ಯಕ್ಷ ಮೋಹಿತ್ ಜೋಷಿ ಅವರು ಟೆಕ್ ಮಹೀಂದ್ರಗೆ ಸಿಇಒ ಆಗಿದ್ದಾರೆ.
ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಎಷ್ಟು ವೇಗದಲ್ಲಿ ಬೆಳೆಯಬೇಕು ಗೊತ್ತಾ? ಇಲ್ಲಿದೆ ಸಂಶೋಧಾನಾ ವರದಿ
ಇನ್ಫೋಸಿಸ್ನ ಚೀಫ್ ಇನ್ಫಾರ್ಮೇಶನ್ ಸ್ಟ್ರಾಟಿಜಿ ಆಫೀಸರ್ ಆಗಿದ್ದ ವಿಶಾಲ್ ಸಳವಿ ಅವರು ಕ್ವಿಕ್ ಹೀಲ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಗೆ ಕಳೆದ ತಿಂಗಳು ಸಿಇಒ ಆಗಿ ಸೇರಿದ್ದಾರೆ.
ವಿಪ್ರೋದ ಅಮೆರಿಕ ಮಾರುಕಟ್ಟೆ ಯೂನಿಟ್ನ ಸಿಇಒ ಆಗಿದ್ದ ಆಂಗನ್ ಗುಹಾ ಅವರು ಬಿರ್ಲಾ ಸಾಫ್ಟ್ ಕಂಪನಿಯ ಸಿಇಒ ಮತ್ತು ಎಂಡಿ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ