Facebook: ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ ಫೇಸ್​ಬುಕ್ ಎನ್ನುತ್ತಿವೆ ಮೂಲಗಳು

| Updated By: Srinivas Mata

Updated on: Oct 20, 2021 | 12:41 PM

ದ ವರ್ಜ್ ಮಾಡಿರುವ ವರದಿ ಪ್ರಕಾರ ಫೇಸ್​ಬುಕ್ ತನ್ನ ಹೆಸರನ್ನು ಬದಲಿಸುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಸಂಸ್ಥೆಗಳು ಪ್ರಯತ್ನಿಸಿದ್ದು, ಯಾವುದೇ ಸ್ಪಂದನೆ ಸಿಕ್ಕಿಲ್ಲ.

Facebook: ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ ಫೇಸ್​ಬುಕ್ ಎನ್ನುತ್ತಿವೆ ಮೂಲಗಳು
ಸಾಂದರ್ಭಿಕ ಚಿತ್ರ
Follow us on

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್​ಬುಕ್ ಇಂಕ್ ಮುಂದಿನ ವಾರ ಕಂಪೆನಿಯನ್ನು ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಮಾಡಲು ಯೋಜಿಸುತ್ತಿದೆ, ಎಂದು ಈ ವಿಷಯದ ನೇರವಾದ ಮಾಹಿತಿ ಹೊಂದಿರುವ ಮೂಲವನ್ನು ಉಲ್ಲೇಖಿಸಿ ಅಕ್ಟೋಬರ್ 19 ರಂದು “ವರ್ಜ್” ವರದಿ ಮಾಡಿದೆ.

ಫೇಸ್‌ಬುಕ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ, ಆದರೆ ಅದನ್ನು ಶೀಘ್ರದಲ್ಲೇ ಅನಾವರಣಗೊಳಿಸಬಹುದು ಎಂದು ವರ್ಜ್ ವರದಿ ಹೇಳಿದೆ.

ಮರುಬ್ರ್ಯಾಂಡ್ ಫೇಸ್‌ಬುಕ್‌ನ ಸಾಮಾಜಿಕ ಮಾಧ್ಯಮ ಅಪ್ಲಿಕೇಷನ್ ಅನ್ನು ಪೋಷಕ ಕಂಪೆನಿಯ ಅಡಿಯಲ್ಲಿರುವ ಅನೇಕ ಉತ್ಪನ್ನಗಳಲ್ಲಿ ಒಂದಾಗಿ ಇರಿಸುತ್ತದೆ. ಇದು Instagram, WhatsApp, Oculus ಮತ್ತು ಹೆಚ್ಚಿನವುಗಳಂತಹ ಗುಂಪುಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ ಎಂದು ವರದಿಯಲ್ಲಿ ಸೇರಿಸಲಾಗಿದೆ.

ಪ್ರತಿಕ್ರಿಯೆಯ ಕೋರಿಕೆಗೆ ಫೇಸ್‌ಬುಕ್ ತಕ್ಷಣ ಸಂದನೆ  ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Facebook Outage: ಫೇಸ್​ಬುಕ್​ನ 6 ಗಂಟೆ ವ್ಯತ್ಯಯದಿಂದ ಝುಕರ್​ಬರ್ಗ್​ನ 44,713 ಕೋಟಿ ರೂಪಾಯಿ ಖಲ್ಲಾಸ್