Fact Check: ಯುಪಿಐ ಪಾವತಿ ಮೇಲೆ ಶೇ. 18 ಜಿಎಸ್​​ಟಿ: ಇದು ನಿಜವಾ? ಇಲ್ಲಿದೆ ಫ್ಯಾಕ್ಟ್ ಚೆಕ್

Fact check on GST on UPI transactions: ಎರಡು ಸಾವಿರ ರೂಗಿಂತ ಅಧಿಕ ಮೊತ್ತದ ಯುಪಿಐ ಪಾವತಿ ಮೇಲೆ ಸರ್ಕಾರ ಶುಲ್ಕ ವಿಧಿಸಲು ಹೊರಟಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಆದರೆ, ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ ಈ ಸುದ್ದಿ ಸುಳ್ಳು. ಸರ್ಕಾರವು ಸಾಮಾನ್ಯ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ಹಾಕುತ್ತಿಲ್ಲ. ಡಿಜಿಟಲ್ ವ್ಯಾಲಟ್ ರೀತಿಯ ಪಿಪಿಐಗಳ ಮೂಲಕ ಮಾಡುವ ವಹಿವಾಟಿಗೆ ಶುಲ್ಕ ವಿಧಿಸಬಹುದು ಎಂದಿದೆ.

Fact Check: ಯುಪಿಐ ಪಾವತಿ ಮೇಲೆ ಶೇ. 18 ಜಿಎಸ್​​ಟಿ: ಇದು ನಿಜವಾ? ಇಲ್ಲಿದೆ ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್

Updated on: Apr 18, 2025 | 7:19 PM

ನವದೆಹಲಿ, ಏಪ್ರಿಲ್ 18: ಎರಡು ಸಾವಿರ ರೂಗಿಂತ ಅಧಿಕ ಮೊತ್ತದ ಯುಪಿಐ ವಹಿವಾಟುಗಳ (UPI transactions) ಮೇಲೆ ಸರ್ಕಾರ ಶೇ. 18ರಷ್ಟು ಜಿಎಸ್​​ಟಿ ವಿಧಿಸಲು ಯೋಜಿಸಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದಟ್ಟವಾಗಿ ಹರಡುತ್ತಿದೆ. ವಾಟ್ಸಾಪ್, ಎಕ್ಸ್ ಪ್ಲಾಟ್​​​ಫಾರ್ಮ್​​​ಗಳಲ್ಲಿ ಇದು ವೈರಲ್ ಆಗುತ್ತಿದೆ. ಬೆಲೆ ಏರಿಕೆ ಮತ್ತು ತೆರಿಗೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಈ ಸುದ್ದಿ ಗಾಯದ ಮೇಲೆ ಬರೆ ಎಳೆದಂತಿದೆ.

ಸೋಷಿಯಲ್ ಮೀಡಿಯಾದಲ್ಲಿ ಏನಿದೆ ಪೋಸ್ಟ್?

2,000 ರೂಗಿಂತ ಅಧಿಕ ಮೌಲ್ಯದ ಹಣವನ್ನು ಯುಪಿಐ ಮೂಲಕ ಪಾವತಿಸಿದರೆ ಸರ್ಕಾರ ಶೇ. 18 ಜಿಎಸ್​​ಟಿ ಹಾಕುತ್ತದೆ ಎಂಬಂತೆ ವೈರಲ್ ಆಗುತ್ತಿದೆ. ಹಾಗೆಯೇ, ಯುಪಿಐ ಪಾವತಿ ಮೇಲೆ ಶೇ. 1.1ರಷ್ಟು ಶುಲ್ಕ ಹಾಕಲಾಗುತ್ತದೆ ಎನ್ನುವಂತಹ ಸುದ್ದಿಯೂ ಹರಿದಾಡುತ್ತಿದೆ. ಪ್ರಮುಖ ಮಾಧ್ಯಮವೊಂದರಲ್ಲೂ ಕೂಡ ಇದೇ ವೈರಲ್ ಕ್ಲೇಮ್ ಆಧರಿಸಿ ಸುದ್ದಿ ಮಾಡಲಾಗಿತ್ತು. ಇದು ಸರ್ಕಾರದ ಗಮನಕ್ಕೆ ಹೋಗಿದ್ದು, ಪಿಐಬಿ ಮುಖಾಂತರ ಫ್ಯಾಕ್ಟ್ ಚೆಕ್ ಮಾಡಿಸಿ ಸ್ಪಷ್ಟನೆ ಕೊಟ್ಟಿದೆ.

ಇದನ್ನೂ ಓದಿ
ಭಾರತದ ಮೊದಲ ಖಾಸಗಿ ರೈಲು; ಮೊದಲ ತಿಂಗಳಲ್ಲಿ 70 ಲಕ್ಷ ರೂ ಲಾಭ
ನರೇಂದ್ರ ಮೋದಿ, ಇಲಾನ್ ಮಸ್ಕ್ ದೂರವಾಣಿಯಲ್ಲಿ ಮಾತುಕತೆ
ಆಸ್ಟ್ರೇಲಿಯಾದಲ್ಲಿ ಪೋರ್ಟ್ ಟರ್ಮಿನಲ್​​ ಖರೀದಿಸಿದ ಅದಾನಿ ಪೋರ್ಟ್ಸ್
ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಭಾರತದ ಗಂಭೀರ ಹೆಜ್ಜೆ

ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ ಯುಪಿಐ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ಇಲ್ಲ. 2,000 ರೂಗಿಂತ ಅಧಿಕ ಮೌಲ್ಯದ ಯುಪಿಐ ವಹಿವಾಟಿಗೆ ಶೇ. 1.1ರಷ್ಟು ಶುಲ್ಕ ಹಾಕಲಾಗುತ್ತದೆ ಎಂಬುದೆಲ್ಲಾ ಸುಳ್ಳು.

ಇದನ್ನೂ ಓದಿ: ಟ್ರೈನ್ ಆಪರೇಶನ್; ಖಾಸಗಿಗೆ ವಹಿಸುವ ಪ್ರಯೋಗ ಯಶಸ್ವಿ; ತೇಜಸ್ ಎಕ್ಸ್​​ಪ್ರೆಸ್ ರೈಲಿಂದ 3 ಕೋಟಿ ರೂಗೂ ಅಧಿಕ ಲಾಭ

ಯುಪಿಐ ನಿರ್ಮಿಸಿದ ಎನ್​​ಪಿಸಿಐ ಸಂಸ್ಥೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯು ಈ ಗೊಂದಲಕ್ಕೆ ಕಾರಣವಾಗಿದೆ. ಇಂಟರ್​​ಚೇಂಜ್ ಫೀ ಬಗ್ಗೆ ಆ ಸುತ್ತೋಲೆ ನೀಡಲಾಗಿತ್ತು. ಆದರೆ, ಡಿಜಿಟಲ್ ವ್ಯಾಲಟ್​​ಗಳಂತಹ ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್ಸ್ ಮೂಲಕ ಮಾಡಲಾಗುವ ವಹಿವಾಟಿಗೆ ಶುಲ್ಕ ಹಾಕಲಾಗುವುದು ಎಂಬುದು ಆ ಸುತ್ತೋಲೆಯಲ್ಲಿದ್ದ ವಿಚಾರ.

ಶೇ. 99.9 ಯುಪಿಐ ವಹಿವಾಟುಗಳಿಗೆ ಶುಲ್ಕ ಇಲ್ಲ

ಒಟ್ಟಾರೆ ಯುಪಿಐ ವಹಿವಾಟಿನಲ್ಲಿ ಡಿಜಿಟಲ್ ವ್ಯಾಲಟ್ ಅಥವಾ ಪ್ರೀಪೇಡ್ ಇನ್ಸ್​​ಟ್ರುಮೆಂಟ್​ನ ಪಾಲು ಬಹಳ ಕಡಿಮೆ. ಶೇ. 99.9ರಷ್ಟು ಯುಪಿಐ ಟ್ರಾನ್ಸಾಕ್ಷನ್​​​ಗಳು ಪಿಪಿಐ ಇಲ್ಲದೇ ಆಗುತ್ತವೆ. ಅಂದರೆ, ಶೇ. 0.1ರಷ್ಟು ಯುಪಿಐ ವಹಿವಾಟು ಮಾತ್ರವೇ ಡಿಜಿಟಲ್ ವ್ಯಾಲಟ್ ಮುಖಾಂತರ ಆಗುವುದು. ಪಿಐಬಿ ಫ್ಯಾಕ್ಟ್ ಚೆಕ್​​ನ ಎಕ್ಸ್ ಪೋಸ್ಟ್​​​​ನಲ್ಲಿ ಇದನ್ನು ತಿಳಿಸಲಾಗಿದೆ.

ಏನಿದು ಡಿಜಿಟಲ್ ವ್ಯಾಲಟ್?

ಇಲ್ಲಿ ಡಿಜಿಟಲ್ ವ್ಯಾಲಟ್ ಎಂದರೆ ಫೋನ್​ ಪೇನಲ್ಲಿ ಇರುವ ವ್ಯಾಲಟ್​ನಂಥದ್ದು. ಎನ್​​ಪಿಸಿಐನಿಂದಲೇ ರೂಪಿಸಲಾಗಿರುವ ಯುಪಿಐ ಲೈಟ್ ಈ ಡಿಜಿಟಲ್ ವ್ಯಾಲಟ್ ವ್ಯಾಪ್ತಿಗೆ ಬರುವುದಿಲ್ಲ.

ಇದನ್ನೂ ಓದಿ: ಷೇರು ಮಾರುಕಟ್ಟೆಯನ್ನು ನಂಬಬೇಕಾ? ಹೂಡಿಕೆ ಹೇಗಿರಬೇಕು? ಇಲ್ಲಿದೆ 7 ಟಿಪ್ಸ್

ವರ್ತಕರಿಗೆ ಮಾತ್ರವಾ ಇಂಟರ್​​ಚೇಂಜ್ ಶುಲ್ಕ?

ಡಿಜಿಟಲ್ ವ್ಯಾಲಟ್ ಹಾಗೂ ಶುಲ್ಕದ ಬಗ್ಗೆ ಮತ್ತೊಂದು ಸಂಗತಿ ಎಂದರೆ, ಡಿಜಿಟಲ್ ವ್ಯಾಲಟ್​​​ಗೆ ನೀವು ಹಣ ತುಂಬಿಸಿದರೆ ಯಾವ ಶುಲ್ಕ ನೀಡಬೇಕಿಲ್ಲ. ಯುಪಿಐ ಬಳಕೆದಾರರು ಡಿಜಿಟಲ್ ವ್ಯಾಲಟ್ ಮುಖಾಂತರ ವರ್ತಕರಿಗೆ ಹಣ ಪಾವತಿಸಿದರೆ ಯಾವ ಶುಲ್ಕ ಇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ 2,000 ರೂಗಿಂತ ಅಧಿಕ ಮೌಲ್ಯದ ಹಣವನ್ನು ವ್ಯಾಲಟ್ ಮೂಲಕ ವರ್ತಕರಿಗೆ ನೀಡಿದಾಗ ಬ್ಯಾಂಕ್​​ನಿಂದ ವರ್ತಕರಿಗೆ ಶುಲ್ಕ ವಿಧಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Fri, 18 April 25