Flipkart Big Billion Days: ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್ ಡೇಸ್ ಅಕ್ಟೋಬರ್​ 3ರಿಂದಲೇ ಶುರು

| Updated By: Srinivas Mata

Updated on: Sep 25, 2021 | 11:15 PM

ಫ್ಲಿಪ್​ಕಾರ್ಟ್ ಬಿಗ್​ ಬಿಲಿಯನ್ ಡೇಸ್ ಅಕ್ಟೋಬರ್ 7ನೇ ತಾರೀಕಿನ ಬದಲಿಗೆ 3ನೇ ತಾರೀಕಿನಂದೇ ಆರಂಭವಾಗುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Flipkart Big Billion Days: ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್ ಡೇಸ್ ಅಕ್ಟೋಬರ್​ 3ರಿಂದಲೇ ಶುರು
ಪ್ರಾತಿನಿಧಿಕ ಚಿತ್ರ
Follow us on

ಇ-ಕಾಮರ್ಸ್ ಪ್ರಮುಖವಾದ ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಮಾರಾಟದ ದಿನಾಂಕಗಳಲ್ಲಿ ಬದಲಾವಣೆ ಮಾಡಿದೆ ಮತ್ತು ಈ ವರ್ಷ ತನ್ನ ವಾರ್ಷಿಕ ಮಾರಾಟವನ್ನು ಅಕ್ಟೋಬರ್ 7ರ ಬದಲಾಗಿ ಅಕ್ಟೋಬರ್ 3ರಂದು ಆರಂಭಿಸುವುದಾಗಿ ಹೇಳಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಶನಿವಾರ ಆಂತರಿಕ ಸುತ್ತೋಲೆಯಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಅಮೆಜಾನ್ ಇಂಡಿಯಾ ತನ್ನ 2021ರ ಹಬ್ಬದ ಸೀಸನ್ ಮಾರಾಟದ ದಿನಾಂಕಗಳನ್ನು ಘೋಷಿಸಿದ ಒಂದು ದಿನದ ನಂತರ ಇದು ಬಂದಿದೆ. ‘ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಅಕ್ಟೋಬರ್ 4ರಿಂದ ಆರಂಭವಾಗುತ್ತದೆ.

“ಈ ಕಾರ್ಯಕ್ರಮವು ವ್ಯಾಪಕವಾದ ಸಪ್ಲೈ ಚೈನ್ ಮೂಲಕ ಸೃಷ್ಟಿಸುವ ಉದ್ಯೋಗದ ಪ್ರಮಾಣವನ್ನು ನಾವು ಮರೆಯಬಾರದು. ಇದು ಹಲವಾರು ಮನೆಗಳಿಗೆ ಹಬ್ಬಗಳನ್ನು ನಿಜದ ಅರ್ಥದಲ್ಲಿ ಆಚರಿಸಲು ಸಹಾಯ ಮಾಡುತ್ತದೆ. ಇದನ್ನು ಸಕ್ರಿಯಗೊಳಿಸಲು 2021ರ ಬಿಗ್ ಬಿಲಿಯನ್ ಡೇಸ್‌ಗಾಗಿ ನಮ್ಮ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೇವೆ. ನಾವು ಈಗ ಅಕ್ಟೋಬರ್ 3ರಂದು ಆರಂಭಿಸುತ್ತೇವೆ ಮತ್ತು ಅಕ್ಟೋಬರ್ 10ರಂದು ಕೊನೆಗೊಳ್ಳುವ ಎಂಟು ದಿನಗಳ ಕಾರ್ಯಕ್ರಮವನ್ನು ಮಾಡಲಿದ್ದೇವೆ,” ಎಂದು ತಿಳಿಸಲಾಗಿದೆ.

ಆರು ದಿನಗಳ ಮಾರಾಟ ಕಾರ್ಯಕ್ರಮಕ್ಕಾಗಿ ಫ್ಲಿಪ್‌ಕಾರ್ಟ್ ತಯಾರಿ ನಡೆಸಿದೆ. ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ವಿಶೇಷವಾಗಿ ಶ್ರೇಣಿ 2 ಮತ್ತು 3 ನಗರಗಳಿಂದ ಹೊಸ ಮಾರಾಟಗಾರರನ್ನು ಸೇರಿಸುವತ್ತ ಗಮನ ಹರಿಸಿದೆ. ಫ್ಲಿಪ್​ಕಾರ್ಟ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಡಿಸೆಂಬರ್ 2021ರ ವೇಳೆಗೆ 4.2 ಲಕ್ಷ ಮಾರಾಟಗಾರರನ್ನು ಹೊಂದುವ ನಿರೀಕ್ಷೆಯಿದೆ ಎಂದು ಕಂಪೆನಿ ತಿಳಿಸಿದೆ. ಸದ್ಯಕ್ಕೆ ಫ್ಲಿಪ್‌ಕಾರ್ಟ್ ಮಾರ್ಕೆಟ್‌ಪ್ಲೇಸ್ ಡಿಜಿಟಲ್ ಕಾಮರ್ಸ್ ಮೂಲಕ 3.75 ಲಕ್ಷ ಮಾರಾಟಗಾರರನ್ನು ಬೆಂಬಲಿಸುತ್ತದೆ. ತನ್ನ ಉತ್ಪನ್ನಗಳ ಕ್ಯಾಟಲಾಗ್ ಅನ್ನು ಹೆಚ್ಚಿಸಲು ವಾರ್ಷಿಕ ಪ್ಲಾಟ್‌ಫಾರ್ಮ್‌ನಲ್ಲಿ 75,000 ಹೊಸ ಮಾರಾಟಗಾರರನ್ನು ವಾರ್ಷಿಕ ಹಬ್ಬದ ಮಾರಾಟ ಕಾರ್ಯಕ್ರಮದ ಮೊದಲು ಸೇರಿಸಿಕೊಂಡಿದೆ.

ಫ್ಲಿಪ್‌ಕಾರ್ಟ್ ಹಬ್ಬದ ಋತುವಿನಲ್ಲಿ ಮತ್ತು ಅದರ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕಿಂತ ಮುಂಚಿತವಾಗಿ ತನ್ನ ಸಂಗ್ರಹಣೆ, ಪೂರೈಕೆ ಮತ್ತು ಸಪ್ಲೈ ಚೈನ್ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ ಎಂದು ಈ ಮೊದಲೇ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಮಾರಾಟಕ್ಕೆ ಮುಂಚಿತವಾಗಿ ಸಿದ್ಧತೆಗಳನ್ನು ಹೆಚ್ಚಿಸಲು ಕಂಪೆನಿಯು 66 ಹೊಸ ಕೋರಿಕೆ ಪೂರೈಸುವ ಕೇಂದ್ರಗಳನ್ನು 10 ಮಿಲಿಯನ್ ಚದರ ಅಡಿ ವಿಸ್ತಾರದಲ್ಲಿ ನಿಯೋಜಿಸಿದೆ. ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಸುಮಾರು 1,00,000 ಕಿರಾಣಾ ಪಾಲುದಾರರನ್ನು ಹೊಂದುವ ನಿರೀಕ್ಷೆಯಿದೆ. ಏಕೆಂದರೆ ಇದು ಮಾರಾಟದ ಸಂದರ್ಭದಲ್ಲಿ ಹೈಪರ್‌ಲೋಕಲ್ ವಿತರಣೆ ಬಲವನ್ನು ಹೆಚ್ಚಿಸುತ್ತದೆ.

ಅಮೆಜಾನ್​ನಿಂದ ಈ ವರ್ಷದ ಮಾರಾಟದಲ್ಲಿ ತನ್ನ ಮೊದಲ ಬಾರಿಯ ಗ್ರಾಹಕರಲ್ಲಿ ಮುಕ್ಕಾಲು ಪಾಲು ಸಣ್ಣ ಪಟ್ಟಣಗಳಿಂದ ಬರುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ ಎಂದು ಭಾರತದ ಉಪಾಧ್ಯಕ್ಷ ಮನೀಶ್ ತಿವಾರಿ ಇತ್ತೀಚೆಗೆ ತಿಳಿಸಿದ್ದಾರೆ. ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ರೆಡ್‌ಸೀರ್ ಕನ್ಸಲ್ಟಿಂಗ್ ನಿರೀಕ್ಷೆ ಪ್ರಕಾರ, 2020ರ ಹಬ್ಬದ ತಿಂಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾದ ಒಟ್ಟು 7.4 ಬಿಲಿಯನ್ ಡಾಲರ್‌ಗಳಿಗಿಂತ ಒಟ್ಟಾರೆ ಮಾರಾಟವು ಈ ವರ್ಷ ಶೇ 23ಕ್ಕೆ ಏರಿಕೆಯಾಗಿ 9 ಶತಕೋಟಿ ಡಾಲರ್ ಆಗಬಹುದು ಎನ್ನಲಾಗುತ್ತಿದೆ. ಈ ವರ್ಷದ ಹಬ್ಬದ ಮಾರಾಟದ ಮೊದಲ ವಾರದಲ್ಲಿ ಇ-ಕಾಮರ್ಸ್ ಸಂಸ್ಥೆಗಳಿಂದ 4.8 ಬಿಲಿಯನ್ ಡಾಲರ್ ಮೌಲ್ಯದ ಮಾರಾಟವನ್ನು ರೆಡ್‌ಸೀರ್ ಅಂದಾಜಿಸಿದೆ. ಇದು 2020ಕ್ಕೆ ಹೋಲಿಸಿದಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: Flipkart Big Billion Days Sale: ಫ್ಲಿಪ್‌ಕಾರ್ಟ್​ ಬಿಗ್ ಬಿಲಿಯನ್ ಡೇಸ್​ಗೆ ದಿನಗಣನೆ: ಹೊಸದಾಗಿ ಲಾಂಚ್ ಆಗಲಿದೆ ಈ ಪ್ರಾಡಕ್ಟ್​ಗಳು

(Flipkart Big Billion Starting From October 3 2021 Not From October 7th Here Is The Details You Must Know)

Published On - 11:13 pm, Sat, 25 September 21