AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಐಫೋನ್ ಸೇರಿದಂತೆ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

Flipkart Sale: ಫ್ಲಿಪ್​ಕಾರ್ಟ್​ನಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದೆ. ಈ ಸೇಲ್​ನಲ್ಲಿ ಐಫೋನ್, ಮೋಟೋರೊಲಾ, ಶವೋಮಿ, ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. Flipkart Sale: ಫ್ಲಿಪ್​ಕಾರ್ಟ್​ನಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದೆ. ಈ ಸೇಲ್​ನಲ್ಲಿ ಐಫೋನ್, ಮೋಟೋರೊಲಾ, ಶವೋಮಿ, ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ.

Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಐಫೋನ್ ಸೇರಿದಂತೆ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
Flipkart Electronics sale
Vinay Bhat
| Edited By: |

Updated on:Oct 13, 2026 | 4:58 PM

Share

ಮುಖ್ಯಾಂಶಗಳು

  • ಫ್ಲಿಪ್​ಕಾರ್ಟ್ ಹೊಸ ಮೇಳದೊಂದಿಗೆ ಪುನಃ ಬಂದಿದೆ.
  • ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದ್ದು ಮಾರ್ಚ್ 30 ರ ವರೆಗೆ ನಡೆಯಲಿದೆ.
  • 5G ಬೆಂಬಲವಿರುವ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (Flipkart) ಹೊಸ ಮೇಳದೊಂದಿಗೆ ಪುನಃ ಬಂದಿದೆ. ಬಹುನಿರೀಕ್ಷಿತ ಎಲೆಕ್ಟ್ರಾನಿಕ್ಸ್ ಸೇಲ್​ಗೆ ಚಾಲನೆ ಸಿಕ್ಕಿದ್ದು ಮಾರ್ಚ್ 30 ರ ವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಐಫೋನ್, ಮೋಟೋರೊಲಾ, ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. ಮುಖ್ಯವಾಗಿ 5G ಬೆಂಬಲ ಪಡೆದುಕೊಂಡಿರುವ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇದರ ಜೊತೆಗೆ ಎಕ್ಸ್​ಚೇಂಜ್ ಆಫರ್, ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ. ಇಲ್ಲಿದೆ ನೋಡಿ ಎಲೆಕ್ಟ್ರಾನಿಕ್ಸ್ ಸೇಲ್​ನಲ್ಲಿ (Flipkart Electronics sale) ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಕೆಲವು ಪ್ರಸಿದ್ಧ ಸ್ಮಾರ್ಟ್​ಫೋನ್​ಗಳು.

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಐಫೋನ್ 13 ಅನ್ನು ನೀವು ಕೇವಲ 61,999 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಇದು 128GB ಸ್ಟೋರೇಜ್ ರೂಪಾಂತರವಾಗಿದೆ. ಆ್ಯಪಲ್​ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಬೆಲೆ 69,900 ರೂ. ಆಗಿದೆ. ಇದರಲ್ಲಿರುವ ಬಹುತೇಕ ಫೀಚರ್ ಹೊಸ ಐಫೋನ್ 14 ರೀತಿಯಲ್ಲೇ ಇದೆ. ಇನ್ನು ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂಪಾಯಿಗಳ ರಿಯಾಯಿತಿಯ ಕೊಡುಗೆಯೂ ಇದೆ. ಈ ಮೂಲಕ ಐಫೋನ್ 13 ಅನ್ನು ನೀವು 59,999 ರೂ. ಗೆ ಪಡೆದುಕೊಳ್ಳಬಹುದು.

ಇತ್ತೀಚಿಗಷ್ಟೆ ಬಿಡುಗಡೆಯಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಫೋನ್ ಕೂಡ ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ. ಇದನ್ನು ನೀವು 79,999 ರೂಪಾಯಿಗಳಿಗೆ ಖರೀದಿಸಬಹುದು. HDFC ಬ್ಯಾಂಕ್ ಕಾರ್ಡ್ ಬಳಸಿದರೆ 74,999 ರೂಪಾಯಿಗಳಿಗೆ ಸಿಗಲಿದೆ. ಈ ಆಫರ್ 256GB ಸ್ಟೋರೇಜ್ ಮಾದರಿಗೆ ಇದೆ. ಇದೊಂದು ಉತ್ತಮವಾದ ಆಂಡ್ರಾಯ್ಡ್ ಫೋನ್ ಆಗಿದ್ದು ಕ್ಯಾಮೆರಾ ಅದ್ಭುತವಾಗಿದೆ. ಜೊತೆಗೆ ಬಲಿಷ್ಠ ಪ್ರೊಸೆಸರ್, ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಆಯ್ಕೆ ಕೂಡ ಇದೆ.

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್​ನಲ್ಲಿ ರೆಡ್ಮಿ ನೋಟ್ 12 ಪ್ರೊ 5G ಫೋನ್‌ 24,999 ರೂ. ಯಿಂದ ಮಾರಾಟವಾಗುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ. 2,000 ರಿಯಾಯಿತಿಯ ಕೊಡುಗೆ ನೀಡಲಾಗಿದೆ. ಇದೊಂದು ಮಧ್ಯಮ ಶ್ರೇಣಿಯ 5G ಫೋನ್ ಆಗಿದ್ದು ರಿಯಾಯಿತಿಯಲ್ಲಿ 22,999 ರೂ. ಗೆ ಖರೀದಿಸಬಹುದು. ಇದರ ಜೊತೆಗೆ ವಿವೋ V27 ಫ್ಲಿಪ್‌ಕಾರ್ಟ್‌ ಸೇಲ್​ನಲ್ಲಿ 32,999 ರೂ. ಗೆ ಕಾಣಿಸಿಕೊಂಡಿದೆ. ಆದರೆ HDFC ಬ್ಯಾಂಕ್ ಕಾರ್ಡ್‌ಗಳಲ್ಲಿ ರೂ. 2,500 ರಿಯಾಯಿತಿ ಘೋಷಿಸಿದ್ದು ಈ ಮೂಲಕ 30,499 ರೂ. ಗಳಿಗೆ ನಿಮ್ಮದಾಗಿಸಬಹುದು. ಇದು 128GB ಸ್ಟೋರೇಜ್ ಆಯ್ಕೆಯನ್ನ ಹೊಂದಿದೆ.

ಕಳೆದ ವರ್ಷ ಬಿಡುಗಡೆ ಆದ ನಥಿಂಗ್ ಕಂಪನಿಯ ಚೊಚ್ಚಲ ಸ್ಮಾರ್ಟ್​ಫೋನ್ ನಥಿಂಗ್ ಫೋನ್ (1) ಕೇವಲ 29,999 ರೂ. ಗೆ ಸೇಲ್ ಆಗುತ್ತಿದೆ. ಇದರ ವಿನ್ಯಾಸವು ವಿಶಿಷ್ಟ ಮತ್ತು ಆಕರ್ಷಕವಾಗಿದೆ. ನೀವು ಫೋಟೋಗ್ರಫಿಗಾಗಿ ಉತ್ತಮ ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ Pixel 6a ಅನ್ನು ಖರೀದಿಸಬಹುದು. ಈ ಫೋನ್ 31,999 ರೂ. ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ನೀವು HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು 29,999 ರೂ. ಗೆ ಖರೀದಿಸಬಹುದು.

Published On - 12:52 pm, Sat, 25 March 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More