ಸಾವಿತ್ರಿ ಜಿಂದಾಲ್
ನವದೆಹಲಿ, ಅಕ್ಟೋಬರ್ 12: ಭಾರತದ ಶ್ರೀಮಂತರ ಮತ್ತೊಂದು ಪಟ್ಟಿ ಪ್ರಕಟವಾಗಿದೆ. ಫೋರ್ಬ್ಸ್ ಸಂಸ್ಥೆ ಭಾರತದ ನೂರು ಅಗ್ರಮಾನ್ಯ ಸಿರಿವಂತರ ಪಟ್ಟಿ (forbes rich list 2023) ಪ್ರಕಟಿಸಿದೆ. ನಿರೀಕ್ಷೆಯಂತೆ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಟಾಪ್ 5ನಲ್ಲಿ ಜಿಂದಾಲ್ ಗ್ರೂಪ್ ಒಡತಿ ಸಾವಿತ್ರಿ ಜಿಂದಾಲ್ ಇದ್ದಾರೆ. ಇವರು ಭಾರತದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಮಹಿಳೆಯರ ಪೈಕಿ ಮೊದಲಿಗರಾಗಿದ್ದಾರೆ. ಕೆಪಿಆರ್ ಮಿಲ್ಸ್ನ ಕೆಪಿ ರಾಮಸ್ವಾಮಿ 100ನೇ ಸ್ಥಾನ ಪಡೆದಿದ್ದಾರೆ. ಈ ಫೋರ್ಬ್ಸ್ 100ರ ಪಟ್ಟಿಯಲ್ಲಿ 8 ಮಂದಿ ಮಹಿಳೆಯರಿದ್ದಾರೆ. ಇವರ ಪೈಕಿ ಫಾಲ್ಗುಣಿ ನಾಯರ್ ಮತ್ತು ಕಿರಣ್ ಮಜುಮ್ದಾರ್ ಶಾ ಮಾತ್ರವೇ ಸ್ವಂತವಾಗಿ ಉದ್ದಿಮೆ (self made businesswomen) ಕಟ್ಟಿ ಬೆಳೆದವರು. ಉಳಿದ ಮಹಿಳೆಯರು ತಮ್ಮ ತಂದೆಯಿಂದಲೋ ಅಥವಾ ಪತಿಯರಿಂದಲೋ ಬಳುವಳಿ ಪಡೆದ ಸಂಪತ್ತನ್ನು ನಿಭಾಯಿಸುತ್ತಿದ್ದಾರೆ.
ಫೋರ್ಬ್ಸ್ ಶ್ರೀಮಂತ ಭಾರತೀಯರು: ಟಾಪ್ 20 ಪಟ್ಟಿ
- ಮುಕೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್- 92 ಬಿಲಿಯನ್ ಡಾಲರ್ (7,65,348 ಕೋಟಿ ರೂ)
- ಗೌತಮ್ ಅದಾನಿ, 68 ಬಿಲಿಯನ್ ಡಾಲರ್ (5,65,692 ಕೋಟಿ ರೂ)
- ಶಿವ್ ನಾದರ್, ಎಚ್ಸಿಎಲ್ ಟೆಕ್ನಾಲಜೀಸ್, 29.3 ಬಿಲಿಯನ್ ಡಾಲರ್ (2,43,746 ಕೋಟಿ ರೂ)
- ಸಾವಿತ್ರಿ ಜಿಂದಾಲ್, 24 ಬಿಲಿಯನ್ ಡಾಲರ್ (1,99,656 ಕೋಟಿ ರೂ)
- ರಾಧಾಕೃಷ್ಣ ದಾಮನಿ, ಅವೆನ್ಯೂ ಸೂಪರ್ಮಾರ್ಟ್ಸ್- 23 ಬಿಲಿಯನ್ ಡಾಲರ್ (1,91,337 ಕೋಟಿ ರೂ)
- ಸೈರಸ್ ಪೂನವಾಲ, ಸೀರಂ ಇನ್ಸ್ಟಿಟ್ಯೂಟ್- 20.7 ಬಿಲಿಯನ್ ಡಾಲರ್ (1,72,203 ಕೋಟಿ ರೂ)
- ಹಿಂದೂಜಾ ಫ್ಯಾಮಿಲಿ, ಅಶೋಕ್ ಲೇಲ್ಯಾಂಡ್- 20 ಬಿಲಿಯನ್ ಡಾಲರ್ (1,66,380 ಕೋಟಿ ರೂ)
- ದಿಲೀಪ್ ಶಾಂಘವಿ, ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್ – 19 ಬಿಲಿಯನ್ ಡಾಲರ್ (1,58,061 ಕೋಟಿ ರೂ)
- ಕುಮಾರ್ ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್- 17.5 ಬಿಲಿಯನ್ ಡಾಲರ್ (1,45,582 ಕೋಟಿ ರೂ)
- ಶಾಪರ್ ಮಿಸ್ತ್ರಿ ಕುಟುಂಬ- 16.9 ಬಿಲಿಯನ್ ಡಾಲರ್ (1,40,591 ಕೋಟಿ ರೂ)
- ಸುನೀಲ್ ಮಿಟ್ಟಲ್, ಭಾರ್ತಿ ಏರ್ಟೆಲ್- 16.8 ಬಿಲಿಯನ್ ಡಾಲರ್ (1,39,759 ಕೋಟಿ ರೂ)
- ಗೋದ್ರೇಜ್ ಫ್ಯಾಮಿಲಿ- 16.7 ಬಿಲಿಯನ್ ಡಾಲರ್ (1,38,927 ಕೋಟಿ ರೂ)
- ಲಕ್ಷ್ಮೀ ಮಿಟ್ಟಲ್- 15.9 ಬಿಲಿಯನ್ ಡಾಲರ್ (1,32,272 ಕೋಟಿ ರೂ)
- ಬಜಾಜ್ ಫ್ಯಾಮಿಲಿ- 15 ಬಿಲಿಯನ್ ಡಾಲರ್ (1,24,785 ಕೋಟಿ ರೂ)
- ಉದಯ್ ಕೋಟಕ್- 13.4 ಬಿಲಿಯನ್ ಡಾಲರ್ (1,11,474 ಕೋಟಿ ರೂ)
- ಕುಶಾಲ್ ಪಾಲ್ ಸಿಂಗ್, ಡಿಎಲ್ಎಫ್- 11.9 ಬಿಲಿಯನ್ ಡಾಲರ್ (98,996 ಕೋಟಿ ರೂ)
- ಅಜೀಮ್ ಪ್ರೇಮ್ಜಿ- 11.6 ಬಿಲಿಯನ್ ಡಾಲರ್ (96,500 ಕೋಟಿ ರೂ)
- ರವಿ ಜೈಪುರಿಯಾ, ವರುಣ್ ಬೆವರೇಜಸ್- 95,668 ಕೋಟಿ ರೂ
- ಮಧುಕರ್ ಪರೇಖ್, ಪಿಡಿಲೈಟ್ ಇಂಡಸ್ಟ್ರೀಸ್- 92,340 ಕೋಟಿ ರೂ
- ಬರ್ಮನ್ ಫ್ಯಾಮಿಲಿ, ಡಾಬರ್ ಇಂಡಿಯಾ- 74,039 ಕೋಟಿ ರೂ
ಇದನ್ನೂ ಓದಿ: ಹುರೂನ್ಸ್ ಶ್ರೀಮಂತರು: ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ; ಇಲ್ಲಿ ಭಾರತೀಯ ಸಿರಿವಂತರ ಪಟ್ಟಿ
ಅತಿ ಶ್ರೀಮಂತ ಮಹಿಳೆಯರು
- ಸಾವಿತ್ರಿ ಜಿಂದಾಲ್: 1.99 ಲಕ್ಷಕೋಟಿ ರೂ (4ನೇ ಸ್ಥಾನ)
- ರೇಖಾ ಝುಂಜುನವಾಲ: 58 ಸಾವಿರ ಕೋಟಿ ರೂ (28ನೇ ಸ್ಥಾನ)
- ವಿನೋದ್ ರಾಯ್ ಗುಪ್ತಾ, ಹಾವೆಲ್ಸ್ ಇಂಡಿಯಾ: 56 ಸಾವಿರ ಕೋಟಿ ರೂ (30ನೆ ಸ್ಥಾನ)
- ವಕೀಲ್ ಫ್ಯಾಮಿಲಿ, ಏಷ್ಯನ್ ಪೇಂಟ್ಸ್: 44 ಸಾವಿರ ಕೋಟಿ ರೂ (41ನೇ ಸ್ಥಾನ)
- ರೇಣುಕಾ ಜಗತಿಯಾನಿ, ಲ್ಯಾಂಡ್ಮಾರ್ಕ್ ಗ್ರೂಪ್: 40 ಸಾವಿರ ಕೋಟಿ ರೂ (44ನೇ ಸ್ಥಾನ)
- ಲೀನಾ ತಿವಾರಿ, ಯುಎಸ್ವಿ ಇಂಡಿಯಾ: 39 ಸಾವಿರ ಕೋಟಿ ರೂ (45ನೇ ಸ್ಥಾನ)
- ಫಾಲ್ಗುಣಿ ನಾಯರ್, ನೈಕಾ: 22 ಸಾವಿರ ಕೋಟಿ ರೂ (88ನೇ ಸ್ಥಾನ)
- ಕಿರಣ್ ಮಜುಮ್ದಾರ್ ಶಾ: 20 ಸಾವಿರ ಕೋಟಿ ರೂ (92ನೇ ಸ್ಥಾನ)
ಇದನ್ನೂ ಓದಿ: ಕಾರು ತಯಾರಕನ ಮಕ್ಕಳಿಗೆ ಕಾರ್ ಡ್ರೈವಿಂಗ್ ಬರೊಲ್ಲ? ಆನಂದ್ ಮಹೀಂದ್ರರ ಕುಟುಂಬದ ಸೋಜಿಗದ ಸಂಗತಿಗಳು
ಇಲ್ಲಿ, ಏಷ್ಯನ್ ಪೇಂಟ್ಸ್ನ ಎರಡನೇ ತಲೆಮಾರಿನ ಮುಖ್ಯಸ್ಥರಾಗಿದ್ದ ಅಭಯ್ ಮತ್ತು ಅಮರ್ ವಕೀಲ್ aವರು 2021ರಲ್ಲಿ ಮೃತಪಟ್ಟರು. ಅವರ ಹೆಣ್ಮಕ್ಕಳಾದ ಅಮೃತಾ ವಕೀಲ್ ಮತ್ತು ನೇಹಾ ವಕೀಲ್ ಅವರು ಆಡಳಿತ ನೋಡಿಕೊಳ್ಳುತ್ತಿದ್ದಾರೆ.
ಫೋರ್ಬ್ಸ್ ಪ್ರಕಟಿಸಿದ ಎಲ್ಲ 100 ಶ್ರೀಮಂತರ ಪಟ್ಟಿಯನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ: www.forbesindia.com/lists/rich-list-2023
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ